ಕರ್ನಾಟಕ

karnataka

ETV Bharat / entertainment

ಸ್ನೇಹಿತ ನಾಗಭೂಷಣ್​​ಗಾಗಿ ಸಿನಿಮಾ ನಿರ್ಮಿಸುತ್ತಿರುವ ಡಾಲಿ.. ಡಿಸೆಂಬರ್​ನಲ್ಲಿ 'ಟಗರು ಪಲ್ಯ' ಶೂಟಿಂಗ್​​ ಶುರು - dolyy produce tagaru palya

ಡಾಲಿ ಪಿಕ್ಚರ್ಸ್ ಅಡಿ ನಿರ್ಮಾಣ ಆಗುತ್ತಿರುವ ಮೂರನೇ ಸಿನಿಮಾ 'ಟಗರು ಪಲ್ಯ' ಡಿಸೆಂಬರ್ ಮೊದಲ ವಾರದಲ್ಲಿ ಸೆಟ್ಟೇರಲಿದೆ.

tagaru palya movie shooting begins on december
ಸ್ನೇಹಿತ ನಾಗಭೂಷಣ್​ಗಾಗಿ ಡಾಲಿ ಧನಂಜಯ್ ಸಿನಿಮಾ ನಿರ್ಮಾಣ

By

Published : Nov 23, 2022, 6:26 PM IST

ಡಾಲಿ ಧನಂಜಯ್ ಸ್ಯಾಂಡಲ್​​ವುಡ್ ಅಂಗಳದ ಬಹು ಬೇಡಿಕೆಯ ನಟ. ಕೇವಲ ನಟನಾಗಿ ಮಾತ್ರ ಉಳಿಯದೇ ನಿರ್ಮಾಪಕನಾಗಿಯೂ ಡಾಲಿ ಗಮನ ಸೆಳೆಯುತ್ತಿದ್ದಾರೆ. ಡಾಲಿ ಪಿಕ್ಚರ್ಸ್ ಮೂಲಕ 'ಬಡವ ರಾಸ್ಕಲ್', 'ಹೆಡ್ ಬುಶ್' ನಿರ್ಮಾಣ ಮಾಡಲಾಗಿತ್ತು. ಇತ್ತೀಚೆಗೆ ಡಾಲಿ ಪಿಕ್ಚರ್ಸ್ ಅಡಿ ಮೂರನೇ ಸಿನಿಮಾ 'ಟಗರು ಪಲ್ಯ' ಅನೌನ್ಸ್ ಆಗಿತ್ತು. ಮೋಷನ್ ಪೋಸ್ಟರ್ ಮೂಲಕ ಸುದ್ದಿಯಾಗಿದ್ದ 'ಟಗರು ಪಲ್ಯ' ಇದೀಗ ಸೆಟ್ಟೇರಲು ರೆಡಿಯಾಗಿದೆ.

ಸ್ನೇಹಿತ ನಾಗಭೂಷಣ್ ಜತೆ ಡಾಲಿ ಧನಂಜಯ್

'ಟಗರು ಪಲ್ಯ' ಮೂಲಕ ಹೊಸ ಪ್ರತಿಭೆಗಳಿಗೆ ಡಾಲಿ ಪಿಕ್ಚರ್ಸ್ ವೇದಿಕೆ ಮಾಡಿಕೊಟ್ಟಿದೆ. ಚಿತ್ರದಲ್ಲಿ ಸ್ನೇಹಿತ ನಾಗಭೂಷಣ್ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದು, ಈ ಸಿನಿಮಾ ಮೂಲಕ ಉಮೇಶ್ ಕೆ ಕೃಪ ನಿರ್ದೇಶಕನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಯೋಗರಾಜ್ ಭಟ್ ಸೇರಿದಂತೆ ಹಲವು ನಿರ್ದೇಶಕರ ಜೊತೆ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿದ ಅನುಭವ ಇವರಿಗಿದೆ.

'ಟಗರು ಪಲ್ಯ' ಕಂಟೆಂಟ್ ಆಧಾರಿತ ಸಿನಿಮಾವಾಗಿದ್ದು, ಒಂದೊಳ್ಳೆ ಮನೋರಂಜನೆಯನ್ನು ಪ್ರೇಕ್ಷಕರಿಗೆ ನೀಡಲಿದೆ. ಸಿನಿಮಾ ಸ್ಕ್ರಿಪ್ಟ್ ಕೆಲಸಗಳು ಮುಗಿದಿದ್ದು, ಡಿಸೆಂಬರ್ ಮೊದಲ ವಾರದಲ್ಲಿ ಸಿನಿಮಾ ಸೆಟ್ಟೇರಲಿದೆ ಎಂದು ನಿರ್ದೇಶಕ ಉಮೇಶ್ ಕೆ ಕೃಪ ತಿಳಿಸಿದ್ದಾರೆ.

ಇದನ್ನೂ ಓದಿ:ಸಂಬಂಧಗಳನ್ನು ಗಟ್ಟಿಗೊಳಿಸುವ ತಿಮ್ಮಯ್ಯ ಆ್ಯಂಡ್ ತಿಮ್ಮಯ್ಯ ಟ್ರೈಲರ್ ರಿಲೀಸ್

ವಾಸುಕಿ ವೈಭವ್ ಸಂಗೀತ ನಿರ್ದೇಶನ, ಎಸ್.ಕೆ. ರಾವ್ ಕ್ಯಾಮರಾ ವರ್ಕ್, ವಿನೋದ್ ಮಾಸ್ಟರ್ ಸಾಹಸ ನಿರ್ದೇಶನ ಚಿತ್ರಕ್ಕಿದೆ. ನಾಯಕಿ ಯಾರು ಎಂಬುದು ಸದ್ಯದಲೇ ರಿವೀಲ್ ಆಗಲಿದ್ದು, ರಂಗಾಯಣ ರಘು, ನಾಗಭೂಷಣ್, ತಾರಾ, ಶರತ್ ಲೋಹಿತಾಶ್ವ ಒಳಗೊಂಡ ದೊಡ್ಡ ತಾರಾಬಳಗ ಸಿನಿಮಾದಲ್ಲಿದೆ.

ABOUT THE AUTHOR

...view details