ಕರ್ನಾಟಕ

karnataka

ETV Bharat / entertainment

'ಟಗರು ಪಲ್ಯ'ಗೆ ಫುಲ್​ ಡಿಮ್ಯಾಂಡ್​​; ಸಿನಿಮಾ ರಿಮೇಕ್​ಗೂ ಹೆಚ್ಚಾಯ್ತು ಬೇಡಿಕೆ - ಈಟಿವಿ ಭಾರತ ಕನ್ನಡ

ರಾಜ್ಯಾದ್ಯಂತ ಉತ್ತಮ ಪ್ರದರ್ಶನ ಕಾಣುತ್ತಿರುವ ಡಾಲಿ ಧನಂಜಯ್​ ನಿರ್ಮಾಣದ 'ಟಗರು ಪಲ್ಯ' ಸಿನಿಮಾದ ರಿಮೇಕ್​ಗೂ ಬೇಡಿಕೆ ಹೆಚ್ಚಿದೆ.

Tagaru palya movie blockbuster
'ಟಗರು ಪಲ್ಯ'ಗೆ ಫುಲ್​ ಡಿಮ್ಯಾಂಡ್​​; ಸಿನಿಮಾ ರಿಮೇಕ್​ಗೂ ಹೆಚ್ಚಾಯ್ತು ಬೇಡಿಕೆ

By ETV Bharat Karnataka Team

Published : Oct 29, 2023, 8:23 PM IST

ಕನ್ನಡ ಚಿತ್ರರಂಗದಲ್ಲಿ ಕರ್ಮಷಿಯಲ್ ಹಾಗೂ ಪ್ಯಾನ್ ಇಂಡಿಯಾ ಸಿನಿಮಾಗಳ ಅಬ್ಬರದ ನಡುವೆ ಈ ವಾರ ತೆರೆಗೆ ಬಂದ ಹಳ್ಳಿ ಸೊಗಡಿನ 'ಟಗರು ಪಲ್ಯ'ವನ್ನು ಪ್ರೇಕ್ಷಕರು ಚಪ್ಪರಿಸಿಕೊಂಡು ಸವಿಯುತ್ತಿದ್ದಾರೆ. ಕಳೆದ ಶುಕ್ರವಾರ (ಅ.27) ರಾಜ್ಯಾದ್ಯಂತ ಬಿಡುಗಡೆಯಾದ ಚಿತ್ರ ಎಲ್ಲೆಡೆ ಅದ್ಭುತ ಪ್ರದರ್ಶನ ಕಾಣುತ್ತಿದ್ದು, ದಿನದಿಂದ ದಿನಕ್ಕೆ ಶೋಗಳ ಸಂಖ್ಯೆ ಕೂಡ ಹೆಚ್ಚಾಗಿದೆ.

ಸಂಬಂಧ, ಪ್ರೀತಿ, ನಗು, ಅಳು.. ಒಟ್ಟಿನಲ್ಲಿ ಒಂದೊಳ್ಳೆ ಫ್ಯಾಮಿಲಿ ಡ್ರಾಮಾ ಎನಿಸಿಕೊಂಡಿರುವ 'ಟಗರು ಪಲ್ಯ' ಸಿನಿಮಾ ಬಗ್ಗೆ ಪ್ರೇಕ್ಷಕರು ಮುಕ್ತ ಕಂಠದಿಂದ ಹೊಗಳುತ್ತಿದ್ದಾರೆ. ವಿಮರ್ಶಕರು ಹಾಗೂ ಸಿನಿವೀಕ್ಷಕರ ವಲಯದಿಂದಲೂ ಭಾರಿ ರೆಸ್ಪಾನ್ಸ್ ಪಡೆಯುತ್ತಿದೆ. ಸಿನಿಮಾ ರಿಮೇಕ್​ಗೂ ಬೇಡಿಕೆ ಹೆಚ್ಚಿದೆ.

'ಟಗರು ಪಲ್ಯ' ಕನ್ನಡ ಪ್ರೇಕ್ಷಕರನ್ನು ಮಾತ್ರವಲ್ಲದೇ ಬೇರೆ ಭಾಷೆಯ ಪ್ರೇಕ್ಷಕರನ್ನು ಸೆಳೆಯುತ್ತಿದೆ. ಹೀಗಾಗಿ ಪರಭಾಷಾ ನಿರ್ಮಾಪಕರು ಚಿತ್ರಕ್ಕೆ ಫಿದಾ ಆಗಿದ್ದಾರಂತೆ. ಚಿತ್ರದ ರಿಮೇಕ್ ರೈಟ್ಸ್​ಗೆ ಭಾರಿ ಡಿಮ್ಯಾಂಡ್ ಶುರುವಾಗಿದೆಯಂತೆ. ತಮಿಳು, ತೆಲುಗು ಭಾಷೆಯಿಂದ ಬೇಡಿಕೆ ಹೆಚ್ಚಾಗಿದೆ. ಈಗಾಗಲೇ ಈ ಕುರಿತು ಮಾತುಕತೆ ಹಂತದಲ್ಲಿದ್ದು, ಸದ್ಯದಲ್ಲೇ ರಿಮೇಕ್ ರೈಟ್ಸ್ ಸೇಲ್ ಆಗಲಿದೆ.

'ಟಗರು ಪಲ್ಯ' ತಂಡ

ಇದನ್ನೂ ಓದಿ:'ಟಗರು ಪಲ್ಯ' ಬ್ಲಾಕ್​ಬಸ್ಟರ್​; ಹ್ಯಾಟ್ರಿಕ್​ ಗೆಲುವಿನಲ್ಲಿ ಡಾಲಿ ಧನಂಜಯ್​

ಡಾಲಿ ಧನಂಜಯ್ ಒಡೆತನದ 'ಡಾಲಿ ಪಿಕ್ಚರ್ಸ್' ನಿರ್ಮಿಸಿರುವ ಮೂರನೇ ಚಿತ್ರವಿದು. ಸಿನಿಮಾಗೆ ಉಮೇಶ್. ಕೆ.ಕೃಪಾ ಆ್ಯಕ್ಷನ್ ಕಟ್ ಹೇಳಿದ್ದು, ಮೊದಲ ಹೆಜ್ಜೆಯಲ್ಲೇ ಸಕ್ಸಸ್​ ಕಂಡಿದ್ದಾರೆ. ಚಿತ್ರದಲ್ಲಿ ತಾರಾ ಅನುರಾಧಾ, ರಂಗಾಯಣ ರಘು, ಅಮೃತಾ ಪ್ರೇಮ್, ನಾಗಭೂಷಣ್ ಸೇರಿದಂತೆ ಅನೇಕರಿದ್ದಾರೆ. ವಾಸುಕಿ ವೈಭವ್ ಸಂಗೀತ, ಧನಂಜಯ್ ಸಾಹಿತ್ಯ, ಎಸ್.ಕೆ. ರಾವ್ ಛಾಯಾಗ್ರಹಣ ಸಿನಿಮಾದ ಶ್ರೀಮಂತಿಕೆ ಹೆಚ್ಚಿಸಿದೆ.

ರಮ್ಯಾರಿಂದ ಶುಭಹಾರೈಕೆ: ಸ್ಯಾಂಡಲ್​ವುಡ್ ಮೋಹಕ ತಾರೆ ರಮ್ಯಾ, 'ಟಗರು ಪಲ್ಯ' ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ಕೇಳಿ ಬರುತ್ತಿದ್ದು, ಇಡೀ ತಂಡಕ್ಕೆ ಒಳ್ಳೆಯದಾಗಲಿ‌ ಎಂದು ಶುಭ ಹಾರೈಸಿದ್ದಾರೆ. ಇನ್ನು, ಡಾಲಿ ಧನಂಜಯ್ ಹೈದರಾಬಾದ್​ನಲ್ಲಿಂದು ಅಭಿಮಾನಿಗಳ ಜೊತೆ 'ಟಗರು ಪಲ್ಯ' ನೋಡಲಿದ್ದಾರೆ.

ಡಾಲಿಗೆ ಹ್ಯಾಟ್ರಿಕ್​ ಜಯ:ನಟರಾಕ್ಷಸ ಡಾಲಿ ಧನಂಜಯ್​ ನಟನೆಯ ಜೊತೆಗೆ ಚಿತ್ರ ನಿರ್ಮಾಣದಲ್ಲೂ ಬ್ಯುಸಿಯಾಗಿದ್ದಾರೆ. ಸಾಲು ಸಾಲು ಸಿನಿಮಾಗಳಲ್ಲಿ ಅಭಿನಯಿಸುವ ಜೊತೆ ತಮ್ಮದೇ ಡಾಲಿ ಪಿಕ್ಚರ್ಸ್​ ಸಂಸ್ಥೆಯಡಿ ಚಿತ್ರ ನಿರ್ಮಿಸುತ್ತಿದ್ದಾರೆ. ಈಗಾಗಲೇ ಎರಡು ಸಿನಿಮಾಗಳಿಗೆ (ಹೆಡ್​ ಬುಷ್​, ಬಡವ ರಾಸ್ಕರ್​) ನಿರ್ಮಾಪಕರಾಗಿ ಸಕ್ಸಸ್​ ಕಂಡಿದ್ದ ಧನಂಜಯ್​ ಇದೀಗ ಮತ್ತೊಂದು ಚಿತ್ರವು (ಟಗರು ಪಲ್ಯ) ಬ್ಲಾಕ್​ಬಸ್ಟರ್​ ಹಿಟ್​ ಆಗಿದೆ. ಈ ಮೂಲಕ ನಿರ್ಮಾಣದಲ್ಲಿ ದಾಖಲೆ ಬರೆದಿರುವ ಡಾಲಿ ಹ್ಯಾಟ್ರಿಕ್​ ಗೆಲುವು ದಾಖಲಿಸಿದ್ದಾರೆ.

ಇದನ್ನೂ ಓದಿ:ಕೆ.ಆರ್.ಜಿ ಸ್ಟುಡಿಯೋಸ್​ಗೆ 'ಸೆಂಚುರಿ ಸಿನಿಮಾ' ಸಂಭ್ರಮ: ಒಂದೇ ದಿನ ಎರಡು ಫಿಲ್ಮ್ ರಿಲೀಸ್​​

ABOUT THE AUTHOR

...view details