ಕರ್ನಾಟಕ

karnataka

ETV Bharat / entertainment

ಡಾಲಿ ನಿರ್ಮಾಣದ 'ಟಗರು ಪಲ್ಯ' ಸಿನಿಮಾದ ಮೊದಲ ಹಾಡು ಬಿಡುಗಡೆಗೆ ದಿನ ನಿಗದಿ - amrita prem

Tagaru Palya: ಆಗಸ್ಟ್ 17ರ ಬೆಳಿಗ್ಗೆ 11:05ಕ್ಕೆ 'ಟಗರು ಪಲ್ಯ' ಚಿತ್ರದ ಮೊದಲ ಹಾಡನ್ನು ನೀವು ನೋಡಬಹುದು.

Tagaru Palya first song release date
ಟಗರು ಪಲ್ಯ ಸಿನಿಮಾದ ಮೊದಲ ಹಾಡು ಬಿಡುಗಡೆ ದಿನಾಂಕ

By

Published : Aug 13, 2023, 5:45 PM IST

ಕನ್ನಡ ಚಿತ್ರರಂಗದ ಜನಪ್ರಿಯ ನಟ ಡಾಲಿ ಧನಂಜಯ್​​ ಪ್ರೇಕ್ಷಕರಿಗೆ ಉತ್ತಮ ಸಿನಿಮಾಗಳನ್ನು ಕೊಡುವ ಮೂಲಕ ಯಶಸ್ವಿ ವೃತ್ತಿಜೀವನ ನಡೆಸುತ್ತಿದ್ದಾರೆ. ಡಾಲಿ ಕೇವಲ ನಟನಾಗಿ ಮಾತ್ರವಲ್ಲದೇ ನಿರ್ಮಾಪಕರಾಗಿಯೂ ಗುರುತಿಸಿಕೊಂಡಿದ್ದಾರೆ. ಇವರ ಚಲನಚಿತ್ರ ನಿರ್ಮಾಣ ಸಂಸ್ಥೆಯ ಹೆಸರು 'ಡಾಲಿ ಪಿಕ್ಷರ್ಸ್'.

ಟಗರು ಪಲ್ಯದ ಕುರಿತು..:. ಡಾಲಿ ಪಿಕ್ಚರ್ಸ್​ ಚಲಚಚಿತ್ರ ನಿರ್ಮಾಣ ಸಂಸ್ಥೆಯಡಿ ಈಗಾಗಲೇ ಎರಡು ಸಿನಿಮಾಗಳು ಮೂಡಿಬಂದಿವೆ. ಮೂರನೇ ಸಿನಿಮಾ 'ಟಗರು ಪಲ್ಯ' ಬಿಡುಗಡೆಯ ಹೊಸ್ತಿಲಲ್ಲಿದೆ. ಹೊಸ ಪ್ರತಿಭೆಗಳಿಗೆ ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ 'ಟಗರು ಪಲ್ಯ' ಶುರುವಾಗಿದ್ದು, ಈ ಬಾರಿ ಹೊಸ ಪ್ರತಿಭೆಗಳಿಗೆ ಹೆಚ್ಚಿನ ಅವಕಾಶ ನೀಡಲಾಗಿದೆ. ಈ ಚಿತ್ರದ ಮೂಲಕ ನೆನಪಿರಲಿ ಪ್ರೇಮ್​ ಪುತ್ರಿ ಅಮೃತಾ ಕನ್ನಡ ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದಾರೆ.

ಮೊದಲ ಹಾಡು ಬಿಡುಗಡೆಗೆ ದಿನ ನಿಗದಿ:'ಟಗರು ಪಲ್ಯ' ಕನ್ನಡದ ಬಹುನಿರೀಕ್ಷಿತ ಸಿನಿಮಾ. ಉಮೇಶ್​​ ಕೆ ಕೃಪ ಆ್ಯಕ್ಷನ್​ ಕಟ್​ ಹೇಳಿರುವ ಸಿನಿಮಾದಲ್ಲಿ ನಾಗಭೂಷಣ್​ ಮತ್ತು ಅಮೃತಾ ಪ್ರೇಮ್​​ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಕಳೆದ ಡಿಸೆಂಬರ್​​ನಲ್ಲಿ ಚಿತ್ರೀಕರಣ ಆರಂಭಿಸಿದ್ದು, ಇತ್ತೀಚೆಗಷ್ಟೇ ಶೂಟಿಂಗ್​ ಪೂರ್ಣಗೊಳಿಸಿತ್ತು. ಬಿಡುಗಡೆಗೆ ತಯಾರಿ ಆರಂಭಗೊಂಡಿದ್ದು, ಸಿನಿಮಾ ಪ್ರಮೋಶನ್​​ ಕೂಡ ಶುರುವಾಗಿದೆ. ಅದರ ಭಾಗವಾಗಿ, ಚಿತ್ರದ ಮೊದಲ ಹಾಡು ಅನಾವರಣಗೊಳ್ಳಲಿದೆ.

ಹೀರೋ ಎಂಟ್ರಿ ಸಾಂಗ್: ನಿರ್ಮಾಪಕ ಧನಂಜಯ್​ ಇಂದು ಸೋಷಿಯಲ್​ ಮೀಡಿಯಾದಲ್ಲಿ ವಿಶೇಷ ವಿಡಿಯೋವೊಂದನ್ನು ಶೇರ್ ಮಾಡಿದ್ದಾರೆ. ಚಿತ್ರತಂಡದೊಂದಿಗಿನ ಫನ್ನಿ ವಿಡಿಯೋ ಇದಾಗಿದ್ದು, 'ಟಗರು ಪಲ್ಯ'ದ ಮೊದಲ ಹಾಡು ಶೀಘ್ರದಲ್ಲೇ ಬಿಡುಗಡೆ ಆಗಲಿದೆ ಎಂದು ತಿಳಿಸಿದ್ದಾರೆ. ವಿಡಿಯೋ ಶೇರ್ ಮಾಡಿರುವ ಡಾಲಿ, ''ಹೀರೋ ಇದ್ದ ಮೇಲೆ ಅವರಿಗೊಂದು ಎಂಟ್ರಿ ಸಾಂಗ್​ ಬೇಡ್ವೇ? ಬೇಕೇ ಬೇಕು ಅಂತಿದ್ದಾರೆ ನಮ್ಮ ಟಗರು ಪಲ್ಯ ಹೀರೋ, ಟಗರು ಪಲ್ಯ ಚಿತ್ರದ ಮೊದಲ ಹಾಡು ಇದೇ ಆಗಸ್ಟ್ 17 ರ ಬೆಳಿಗ್ಗೆ 11:05 ಕ್ಕೆ ಅನಾವರಣಗೊಳ್ಳಲಿದೆ'' ಎಂದು ಬರೆದುಕೊಂಡಿದ್ದಾರೆ. ಆಗಸ್ಟ್ 17 ಚಿತ್ರದ ನಾಯಕ ನಟ ನಾಗಭೂಷಣ್​ ಅವರ ಜನ್ಮದಿನ ಹಿನ್ನೆಲೆಯಲ್ಲಿ ಅವರಿಗೆ ಉಡುಗೊರೆಯಾಗಿ ಈ ಸಾಂಗ್​ ರಿವೀಲ್​ ಆಗಲಿದೆ.

ಇದನ್ನೂ ಓದಿ:Jailer: ದೇಶಾದ್ಯಂತ ಜೈಲರ್​ ಹವಾ ರಜನಿಕಾಂತ್​ ಸಿನಿಮಾ ವೀಕ್ಷಿಸಿದ ಕೇರಳ ಸಿಎಂ ಪಿಣರಾಯಿ ವಿಜಯನ್​

ಅಮೃತಾ, ನಾಗಭೂಷಣ್​ ಜೊತೆ ಜೊತೆಗೆ ರಂಗಾಯಣ ರಘು, ಶರತ್ ಲೋಹಿತಾಶ್ವ ಸೇರಿದಂತೆ ಹಲವರು ನಟಿಸಿದ್ದಾರೆ. ವಾಸುಕಿ ವೈಭವ್​ ಸಂಗೀತವಿದ್ದು, ಎಸ್​.ಕೆ.ರಾವು ಛಾಯಾಗ್ರಹಣ ನಿರ್ವಹಿಸಿದ್ದಾರೆ. ಪೋಸ್ಟ್ ಪ್ರೊಡಕ್ಷನ್ ಕೆಲಸ ಬಹುತೇಕ ಪೂರ್ಣಗೊಂಡಿದ್ದು, ಶೀಘ್ರದಲ್ಲೇ ಸಿನಿಮಾ ನಿಮ್ಮ ಮುಂದೆ ಬರಲಿದೆ.

ಇದನ್ನೂ ಓದಿ:Upendra: ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪಾರ್ಹ ಪದ ಬಳಕೆ ಆರೋಪ; ಉಪೇಂದ್ರ ವಿರುದ್ಧ FIR

ABOUT THE AUTHOR

...view details