ಕರ್ನಾಟಕ

karnataka

ETV Bharat / entertainment

'ಹಾಕೊ ಸ್ಟೆಪ್ ಹ್ಯಾಂಗಾರ ಇರ್ಲಿ, ಹಾಡು ಟಗರುಪಲ್ಯದಾಗಿರ್ಲಿ.. ನಿಮ್ದು ಒಂದು ರೀಲ್ ಬರ್ಲಿ' - ಈಟಿವಿ ಭಾರತ ಕನ್ನಡ

Tagaru Palya: 'ಟಗರು ಪಲ್ಯ' ಚಿತ್ರದ ಟೈಟಲ್​ ಟ್ರ್ಯಾಕ್​ಗೆ ಡಾಲಿ ಧನಂಜಯ್​ ಮತ್ತು ನಾಗಭೂಷಣ್​ ಸಖತ್​ ಸ್ಟೆಪ್ಸ್​ ಹಾಕಿದ್ದಾರೆ. ವಿಡಿಯೋ ನೋಡಿ..

Daali dhananjay and Nagabhushan
ಡಾಲಿ ಧನಂಜಯ್​- ನಾಗಭೂಷಣ್​ ಸಖತ್​ ಸ್ಟೆಪ್​​

By ETV Bharat Karnataka Team

Published : Aug 27, 2023, 1:26 PM IST

'ಟಗರು ಪಲ್ಯ' ಕನ್ನಡದ ಬಹುನಿರೀಕ್ಷಿತ ಚಿತ್ರ. ಡಾಲಿ ಧನಂಜಯ್​ ತಮ್ಮದೇ ಡಾಲಿ ಪಿಕ್ಚರ್ಸ್​ ನಿರ್ಮಾಣ ಸಂಸ್ಥೆಯಡಿ ಬಂಡವಾಳ ಹೂಡುತ್ತಿರುವ ಮೂರನೇ ಸಿನಿಮಾವಿದು. ಹೊಸ ಪ್ರತಿಭೆಗಳಿಗೆ ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ 'ಟಗರು ಪಲ್ಯ' ಶುರುವಾಗಿದ್ದು, ಈ ಬಾರಿ ಅನೇಕ ಪ್ರತಿಭಾವಂತ ಯುವ ಕಲಾವಿದರು ಈ ಚಿತ್ರದ ಮೂಲಕ ಬೆಳ್ಳಿ ತೆರೆಗೆ ಕಾಲಿಡುತ್ತಿದ್ದಾರೆ. ನೆನಪಿರಲಿ ಪ್ರೇಮ್​ ಪುತ್ರಿ ಅಮೃತಾ ಕೂಡ ಈ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದಾರೆ.

ಉಮೇಶ್​​ ಕೆ. ಕೃಪ ಆ್ಯಕ್ಷನ್​ ಕಟ್​ ಹೇಳಿರುವ 'ಟಗರು ಪಲ್ಯ'ಗೆ ಸ್ಯಾಂಡಲ್​ವುಡ್​ನ ಪ್ರತಿಭಾವಂತ ನಟ ನಾಗಭೂಷಣ್​ ನಾಯಕನಾಗಿದ್ದಾರೆ. ಕಳೆದ ಡಿಸೆಂಬರ್​​ನಲ್ಲಿ ಚಿತ್ರೀಕರಣ ಆರಂಭಿಸಿದ್ದು, ಇತ್ತೀಚೆಗಷ್ಟೇ ಶೂಟಿಂಗ್​ ಪೂರ್ಣಗೊಳಿಸಿತ್ತು. ಬಿಡುಗಡೆಗೆ ತಯಾರಿ ಆರಂಭಗೊಂಡಿದ್ದು, ಸಿನಿಮಾ ಪ್ರಮೋಶನ್​​ ಕೂಡ ಶುರುವಾಗಿದೆ. ಅದರ ಒಂದು ಭಾಗವಾಗಿ ಸಿನಿಮಾದ ಟೈಟಲ್​ ಟ್ರ್ಯಾಕ್​ ಅನ್ನು ಇತ್ತೀಚೆಗೆ ಅನಾವರಣಗೊಳಿಸಲಾಗಿತ್ತು. ಸದ್ಯ ಈ ಹಾಡು ಸೋಷಿಯಲ್​ ಮೀಡಿಯಾದಲ್ಲಿ ಸಖತ್​ ಟ್ರೆಂಡಿಂಗ್​ ಆಗಿದೆ.

ಇದನ್ನೂ ಓದಿ:ಸೆಟ್ಟೇರಿತು ಡಾಲಿ ಪಿಕ್ಚರ್ಸ್ ನಿರ್ಮಾಣದ ಮೂರನೇ ಸಿನಿಮಾ: ಪ್ರೇಮ್ ಪುತ್ರಿ ಅಮೃತಾ ಚಿತ್ರರಂಗಕ್ಕೆ ಎಂಟ್ರಿ

ಡಾಲಿ​- ನಾಗಭೂಷಣ್​ ಸಖತ್​ ಸ್ಟೆಪ್​​: ಇದೀಗ 'ಟಗರು ಪಲ್ಯ' ಟೈಟಲ್​ ಟ್ರ್ಯಾಕ್​ಗೆ ಡಾಲಿ ಧನಂಜಯ್​ ಮತ್ತು ನಾಗಭೂಷಣ್​ ಸಖತ್​ ಸ್ಟೆಪ್ಸ್​ ಹಾಕಿದ್ದಾರೆ. "ನಾವ್ ಹಾಕಿದ್ದೇ ಸ್ಟೆಪ್ಪು, ಮಾಡಿದ್ದೆ ರೀಲೂ.. ಹಾಕೊ ಸ್ಟೆಪ್ ಹ್ಯಾಂಗಾರ ಇರ್ಲಿ.. ಹಾಡು ಟಗರುಪಲ್ಯದಾಗಿರ್ಲಿ.. ನಿಮ್ದು ಒಂದು ರೀಲ್ ಬರ್ಲಿ" ಎಂಬ ಕ್ಯಾಪ್ಶನ್​ನೊಂದಿಗೆ ನಾಗಭೂಷಣ್​ ಜೊತೆ ಡ್ಯಾನ್ಸ್​ ಮಾಡಿರುವ ವಿಡಿಯೋವನ್ನು ಡಾಲಿ ಧನಂಜಯ್​ ಸೋಷಿಯಲ್​ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ನೀವೂ ಕೂಡ ನಮ್​ ಥರಾನೇ ರೀಲ್​ ಮಾಡಿ ಎಂದು ಅವರು ಫ್ಯಾನ್ಸ್​ಗೆ ಹೇಳಿದ್ದಾರೆ.​

'ಟಗರು ಪಲ್ಯ' ಟೈಟಲ್​ ಟ್ರ್ಯಾಕ್: 'ಟಗರು ಪಲ್ಯ' ಚಿತ್ರದ ಟೈಟಲ್​ ಟ್ರ್ಯಾಕ್​ ಅನ್ನು ಕೆಲವು ದಿನಗಳ ಹಿಂದೆ ನಾಗಭೂಷಣ್​ ಅವರ ಬರ್ತ್​ಡೇ ಸಲುವಾಗಿ ಚಿತ್ರತಂಡ ಬಿಡುಗಡೆಗೊಳಿಸಿತ್ತು. ಈ ಹಾಡಿಗೆ ಧನಂಜಯ್​ ಕ್ಯಾಚಿ ಮ್ಯಾಚಿ ಪದಗಳನ್ನು ಸೇರಿಸಿ ಸಾಹಿತ್ಯ ರಚಿಸಿದ್ದು, ವಾಸುಕಿ ವೈಭವ್​ ಸಂಗೀತ ನೀಡಿದ್ದಾರೆ. ಹೆಸರಾಂತ ಗಾಯಕ ವಿಜಯ್​ ಪ್ರಕಾಶ್​ ಧ್ವನಿಯಾಗಿದ್ದಾರೆ.

ಕನ್ನಡ ರಾಜ್ಯೋತ್ಸವಕ್ಕೆ ಚಿತ್ರ ಬಿಡುಗಡೆ: ಹಿರಿಯ ಕಲಾವಿದರಾದ ತಾರಾ, ಶರತ್ ಲೋಹಿತಾಶ್ವ, ರಂಗಾಯಣ ರಘು ಸೇರಿದಂತೆ ದೊಡ್ಡ ತಾರಾಬಳಗವಿರುವ 'ಟಗರು ಪಲ್ಯ' ಚಿತ್ರಕ್ಕೆ ವಾಸುಕಿ ವೈಭವ್ ಸಂಗೀತ ನೀಡಿದ್ದಾರೆ. ಎಸ್.ಕೆ.ರಾವ್ ಕ್ಯಾಮರಾ ಹಿಡಿದಿದ್ದಾರೆ. ಪೋಸ್ಟ್ ಪ್ರೊಡಕ್ಷನ್ ಕೆಲಸ ಬಹುತೇಕ ಪೂರ್ಣಗೊಂಡಿದೆ. ಟೈಟಲ್ ಟ್ರ್ಯಾಕ್ ಮೂಲಕ ಪ್ರಚಾರ ಕಾರ್ಯ ಆರಂಭಿಸಿರುವ ಚಿತ್ರತಂಡ ಕನ್ನಡ ರಾಜ್ಯೋತ್ಸವಕ್ಕೆ ಸಿನಿಮಾವನ್ನು ತೆರೆಗೆ ತರಲು ಯೋಜನೆ ಹಾಕಿಕೊಂಡಿದೆ.

ಇದನ್ನೂ ಓದಿ:ಡಾಲಿ ಧನಂಜಯ್ ನಿರ್ಮಾಣದ 'ಟಗರು ಪಲ್ಯ' ಶೂಟಿಂಗ್​ ಕಂಪ್ಲೀಟ್​​

ABOUT THE AUTHOR

...view details