ಮುಂಬೈ:ಇದೇ ಮೊದಲ ಬಾರಿಗೆ ನಿರ್ಮಾಣಕ್ಕೆ ಕೈ ಹಾಕಿರುವ ನಟಿ ತಾಪ್ಸಿ ಪನ್ನು ಅವರ 'ಬ್ಲರ್' ಸಿನಿಮಾದ ಟ್ರೈಲರ್ ಮಂಗಳವಾರ ಬಿಡುಗಡೆಗೊಂಡಿದೆ. ತನ್ನ ಮೊದಲ ನಿರ್ಮಾಣದ ಸಿನಿಮಾದಲ್ಲಿ ದ್ವಿ ಪಾತ್ರದಲ್ಲಿ ನಟಿ ಕಾಣಿಸಿಕೊಂಡಿದ್ದಾರೆ.
ತಂಗಿಯ ಸಾವಿನಿಂದಾಗಿ ಅನುಭವಿಸುವ ಮಾನಸಿಕ ತೋಳಲಾಟದ ಕಥೆಯನ್ನು ಚಿತ್ರಕಥೆ ಹೊಂದಿದೆ. ಎರಡು ನಿಮಿಷ 33 ಸೆಕೆಂಡ್ಗಳ ಟ್ರೈಲರ್ ಬಿಡುಗಡೆಗೊಂಡಿದೆ. ತಾಪ್ಸಿ ಪನ್ನು ಅವಳಿ-ಜವಳಿ ಪಾತ್ರದಲ್ಲಿ ನಟಿಸಿದ್ದು, ಗೌತಮಿ (ತಾಪ್ಸಿ) ಸಾವಿನಿಂದ ಕಥೆ ಆರಂಭವಾಗುತ್ತದೆ. ಈ ಸಾವು ಆಕೆಯ ಸಹೋದರಿ ಗಾಯತ್ರಿಗೆ ಮಾನಸಿಕ ತೋಳಲಾಟ ರೂಪಿಸುತ್ತದೆ.
ಫೋರೆನ್ಸಿಕ್ ವರದಿಯಲ್ಲಿ ಆಕೆ ಸಾವು ಆತ್ಮಹತ್ಯೆ ಎಂದರೆ, ತನ್ನ ಸಹೋದರಿ ಆತ್ಮಹತ್ಯೆಗೆ ಮುಂದಾಗುವುದಿಲ್ಲ. ಈ ಸಾವಿನಲ್ಲಿ ಯಾವುದೋ ರಹಸ್ಯವಿದೆ ಎಂಬುದರ ಹುಡುಕಾಟಕ್ಕೆ ಆಕೆ ಮುಂದಾಗುತ್ತಾಳೆ. ಇದೇ ವೇಳೆ, ಆಕೆ ಕಣ್ಣು ದೃಷ್ಟಿ ಕೂಡ ಕ್ಷೀಣಿಸಿ ಆಪರೇಷನ್ಗೆ ಒಳಗಾಗಬೇಕು ಎನ್ನುತ್ತಾರೆ ವೈದ್ಯರು.
ಆಕೆಯ ತನಿಖೆಯಯಲ್ಲಿ ತಂಗಿ ಸಾವಿನ ಸತ್ಯ ಮತ್ತು ರಹಸ್ಯಗಳು ತೆರೆಯುತ್ತಾ ಹೋಗುತ್ತದೆ. ಕಣ್ಣು ಕಳೆದುಕೊಂಡ ಆಕೆ, ತಂಗಿ ಸಾವಿನ ರಹಸ್ಯ ಹೇಗೆ ಹೊರ ತರುತ್ತಾಳೆ ಎಂಬುದು ಚಿತ್ರದ ಕಥೆಯಾಗಿದೆ ಎಂಬುದು ಟ್ರೈಲರ್ನಲ್ಲಿ ಕಂಡು ಬಂದಿದೆ. ಇನ್ನು ನಟಿಯಾಗಿದ್ದ ತಾಪ್ಸಿ ನಿರ್ಮಾಣಕ್ಕೆ ಇಳಿದಿದ್ದು ಯಾಕೆ, ಅದರಲ್ಲೂ ಮೊದಲ ನಿರ್ಮಾಣದಲ್ಲೇ ದ್ವಿಪಾತ್ರದಂತಹ ಸವಾಲಿನ ಪಾತ್ರದಲ್ಲಿ ನಟಿಸುತ್ತಿರುವ ಕುರಿತು ಮಾತನಾಡಿರುವ ತಾಪ್ಸಿ, ಚಿತ್ರನಿರ್ಮಾಣದ ಅನೇಕ ಮಜಲುಗಳಲ್ಲಿ ತಾವು ಕ್ರಿಯಾಶೀಲರಾಗಿರಬೇಕು ಎಂಬ ಕಾರಣಕ್ಕೆ ಈ ಪ್ರಯೋಗಕ್ಕೆ ಮುಂದಾಗಿರುವುದಾಗಿ ತಿಳಿಸಿದ್ದಾರೆ.
'ಬ್ಲರ್' ಪ್ರತಿಯೊಬ್ಬರಿಗೂ ಹೊಸದೊಂದು ವಿಭಿನ್ನರೀತಿ ಸಂವೇದನಾಶೀಲತೆ ತರುತ್ತದೆ. ಇದೇ ಕಾರಣಕ್ಕೆ ಇದನ್ನು ನಾನು ನನ್ನ ನಿರ್ಮಾಣದ ಮೊದಲ ಚಿತ್ರವಾಗಿ ಆಯ್ಕೆ ಮಾಡಿದೆ. ನಿರ್ಮಾಪಕಿಯ ಕಾರ್ಯ ಅದೊಂದು ಅದ್ಭುತ ಅನುಭವ. ನಟನೆ ಹೊರತಾಗಿ ನಾನು ನಿರ್ಮಾಣ, ಕಥೆ, ಸೇರಿದಂತೆ ಚಿತ್ರನಿರ್ಮಾಣದ ಇತರೆ ವಿಷಯಗಳು ಕ್ರಿಯಾತ್ಮಕವಾಗಿ ತೊಡಗಿಸಿಕೊಳ್ಳಬೇಕು ಎಂಬುದು ನನ್ನ ಇಚ್ಛೆಯಾಗಿತ್ತು ಎಂದಿದ್ದಾರೆ. ಇನ್ನು ಈ ಚಿತ್ರ ಇದೇ ಡಿಸೆಂಬರ್ 9ರಿಂದ ಜೀ 5 ಅಲ್ಲಿ ಬಿಡುಗಡೆಯಾಗಲಿದೆ.
'ಬ್ಲರ್' ಮಾನವನ ಮನಸ್ಸಿನ ದೃಷ್ಟಿ ಮತ್ತು ಆಳಗಳು ಮತ್ತು ಅದು ಹಾದು ಹೋಗುವ ದಾರಿ ಕಥಾನಕ ಹೊಂದಿದೆ ಎಂದು ನಿರ್ದೇಶಕ ಅಜಯ್ ಬಹ್ಲ್ ತಿಳಿಸಿದ್ದಾರೆ.
ಇದನ್ನೂ ಓದಿ: ರಿಷಬ್ ಶೆಟ್ಟಿಯ 'ಶಿವಮ್ಮ' ಚಿತ್ರಕ್ಕೆ ಅಂತಾರಾಷ್ಟ್ರೀಯ ಪ್ರಶಸ್ತಿ