ಸ್ಯಾಂಡಲ್ವುಡ್ನ ಮೋಹಕ ತಾರೆ, ನಟಿ ರಮ್ಯಾ ನಿರ್ಮಾಣದ, ನಟ ರಾಜ್ ಬಿ ಶೆಟ್ಟಿ ಅಭಿನಯದ 'ಸ್ವಾತಿ ಮುತ್ತಿನ ಮಳೆ ಹನಿಯೇ' ಸಿನಿಮಾ ಶೂಟಿಂಗ್ ಸುಸೂತ್ರವಾಗಿ ಮುಕ್ತಾಯಗೊಂಡಿದೆ.
ಚಿತ್ರಂಗದಿಂದ ದೂರ ಉಳಿದಿದ್ದ ನಟಿ ರಮ್ಯಾ ಕಳೆದ ಕೆಲ ದಿನಗಳ ಹಿಂದೆ ಸಿನಿಮಾ ಇಂಡಸ್ಟ್ರಿಗೆ ಕಮ್ಬ್ಯಾಕ್ ಆಗುವುದಾಗಿ ಗುಡ್ ನ್ಯೂಸ್ ನೀಡಿದ್ರು. ಸ್ವಾತಿ ಮುತ್ತಿನ ಮಳೆ ಹನಿಯೇ ಚಿತ್ರದಲ್ಲಿ ರಮ್ಯಾ ನಟಿಸುವುದಾಗಿ ಚಿತ್ರತಂಡ ತಿಳಿಸಿತ್ತು. ಅಭಿಮಾನಿಗಳು ಅಂದುಕೊಂಡಂತೆ ನಡೆದಿದ್ದರೆ ರಮ್ಯಾ ಈ ಸಿನಿಮಾದ ನಾಯಕಿ ಆಗಬೇಕಿತ್ತು.
ಆದರೆ ಕೆಲವು ಕಾರಣಗಳಿಂದ ರಮ್ಯಾ ನಾನು ಈ ಸಿನಿಮಾದಲ್ಲಿ ನಟಿಸುತ್ತಿಲ್ಲ ಎಂದು ಹೇಳುವ ಮೂಲಕ ಅಭಿಮಾನಿಗಳಿಗೆ ನಿರಾಸೆ ಉಂಟು ಮಾಡಿದ್ದರು. ಈ ಚಿತ್ರದ ಮೂಲಕ ರಮ್ಯಾ ಕೇವಲ ನಿರ್ಮಾಪಕಿಯಾಗಿ ಹೊರ ಹೊಮ್ಮಿದ್ದಾರೆ.
'ಸ್ವಾತಿ ಮುತ್ತಿನ ಮಳೆ ಹನಿಯೇ' ಶೂಟಿಂಗ್ ಕಂಪ್ಲೀಟ್ ಕುಂಬಳಕಾಯಿ ಒಡೆಯುವ ಮೂಲಕ ಈ ಸಿನಿಮಾದ ಶೂಟಿಂಗ್ ಮುಗಿಸಲಾಗಿದೆ. ಈ ಸಿನಿಮಾದಲ್ಲಿ ರಾಜ್ ಬಿ ಶೆಟ್ಟಿ ನಿರ್ದೇಶನದ ಜೊತೆ ಅಭಿನಯ ಕೂಡ ಮಾಡಿದ್ದಾರೆ. ರಾಜ್ ಬಿ ಶೆಟ್ಟಿ ಜೋಡಿಯಾಗಿ ಯುವ ನಟಿ ಸಿರಿ ರವಿಕುಮಾರ್ ಅಭಿನಯಿಸಿದ್ದಾರೆ. ಚಿತ್ರದಲ್ಲಿ ಉಳಿದ ಕಲಾವಿದರು ಯಾರು? ಯಾವಗ ಈ ಸಿನಿಮಾ ಬಿಡುಗಡೆ ಆಗುತ್ತೆ ಅನ್ನೋದರ ಬಗ್ಗೆ ಚಿತ್ರತಂಡ ಸದ್ಯದಲ್ಲೇ ಮಾಹಿತಿ ನೀಡಲಿದೆ.
ಇದನ್ನೂ ಓದಿ:200 ಕೋಟಿ ಅಕ್ರಮ ಹಣ ವರ್ಗಾವಣೆ ಪ್ರಕರಣ: ನಟಿ ಜಾಕ್ವೆಲಿನ್ ಫರ್ನಾಂಡೀಸ್‌ಗೆ ಜಾಮೀನು ಮಂಜೂರು