ಮಾಜಿ ವಿಶ್ವಸುಂದರಿ ಸುಶ್ಮಿತಾ ಸೇನ್ ಅವರು ಮಾಜಿ ಪ್ರಿಯತಮ ರೋಹ್ಮನ್ ಶಾಲ್ ಅವರೊಂದಿಗೆ ಕಾಣಿಸಿಕೊಂಡಿದ್ದಾರೆ. ದೀಪಾವಳಿ ಸಮಾರಂಭವೊಂದರಲ್ಲಿ ಒಟ್ಟಿಗಿರುವ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಮತ್ತೆ ಹೊಸ ಚರ್ಚೆಗೆ ಆಹಾರವಾಗಿದ್ದಾರೆ.
ಸುಶ್ಮಿತಾ ಸೇನ್ ನೀಡಿದ ಮಾಹಿತಿಯಂತೆ, ಇಬ್ಬರೂ 2021ರಲ್ಲಿ ಬೇರ್ಪಟ್ಟಿದ್ದರು. ಆದರೆ ಸ್ನೇಹಿತರಾಗಿ ಮುಂದುವರೆದಿದ್ದರು. ಇತ್ತೀಚಿಗೆ ಮುಂಬೈನಲ್ಲಿ ಹಲವು ಬಾರಿ ಜೊತೆಯಾಗಿದ್ದ ಫೋಟೋ, ವಿಡಿಯೋಗಳು ಲಭ್ಯವಾಗಿವೆ. ಇದೀಗ ದೀಪಾವಳಿ ಪಾರ್ಟಿಯೊಂದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದಾಗುತ್ತಿದೆ.
ಬಾಲಿವುಡ್ ಗಣ್ಯರು ಸಹೋದ್ಯೋಗಿಗಳಿಗಾಗಿ ದೀಪಾವಳಿ ಸಂತೋಷ ಕೂಟ ಆಯೋಜಿಸುವ ಪದ್ಧತಿ ಇದೆ. ಬಾಲಿವುಡ್ ತಾರೆಯರು ಸಾಕ್ಷಿಯಾಗಿದ್ದ ಇಂಥದ್ದೊಂದು ಕಾರ್ಯಕ್ರಮದಲ್ಲಿ ಸುಶ್ಮಿತಾ ಸೇನ್ ಹಾಗೂ ರೋಹ್ಮನ್ ಶಾಲ್ ಆತ್ಮೀಯವಾಗಿ ಕಂಡುಬಂದರು.
ಪಾಪರಾಜಿಗಳು ಇನ್ಸ್ಟಾಗ್ರಾಮ್ನಲ್ಲಿ ಪ್ರಕಟಿಸಿರುವ ವಿಡಿಯೋವೊಂದರಲ್ಲಿ, ಸುಶ್ಮಿತಾ ಸೇನ್ ಅವರು ರೋಹ್ಮನ್ ಶಾಲ್ ಜೊತೆ ದೀಪಾವಳಿ ಪಾರ್ಟಿಗೆ ಪ್ರವೇಶಿಸುತ್ತಿರುವ ದೃಶ್ಯವಿದೆ. ಪಿಂಕ್ ಬಾರ್ಡರ್ ಇರುವ ಬ್ಲ್ಯಾಕ್ ಸೀರೆಯಲ್ಲಿ ನಟಿ ಸುಂದರವಾಗಿ ಕಾಣುತ್ತಿದ್ದರು. ಕಡಿಮೆ ಪ್ರಮಾಣದ ಮೇಕ್ಅಪ್, ಒಂದು ನೆಕ್ಲೇಸ್ನಲ್ಲಿ ಮೋಹಕವಾಗಿ ಕಂಡರು.
ರೋಹ್ಮನ್ ಶಾಲ್ ಗ್ರೀನ್ ಜಾಕೆಟ್, ವೈಟ್ ಕುರ್ತಾ ಸೆಟ್ ಧರಿಸಿದ್ದರು. ಈ ಜೋಡಿ ಪಾಪರಾಜಿಗಳ ಕ್ಯಾಮರಾಗೆ ಪೋಸ್ ಕೊಟ್ಟರು. ರೋಹ್ಮನ್ ಸುಶ್ಮಿತಾರ ಕೈ ಹಿಡಿದು ನಡೆಯಲು ಸಹಾಯ ಮಾಡುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ರೋಹ್ಮನ್ ಜೊತೆ ನಗುಮೊಗದಲ್ಲೇ ಪಾಪರಾಜಿಗಳನ್ನು ಎದುರುಗೊಂಡ ಸುಶ್ಮಿತಾ, ಪ್ಯಾಚಪ್ ವದಂತಿಗಳನ್ನು ಪರೋಕ್ಷವಾಗಿ ದೃಢಪಡಿಸಿದ್ದಾರೆ!.