ಬಾಲಿವುಡ್ ದಿವಾ, ಮಾಜಿ ವಿಶ್ವಸುಂದರಿ ಸುಶ್ಮಿತಾ ಸೇನ್ ಸ್ಟೈಲ್ ಸ್ಟೇಜ್ಗೆ ಮರಳಿದ್ದಾರೆ. ಇತ್ತೀಚೆಗೆ ಹೃದಯಾಘಾತ ಎದುರಿಸಿದ ಬಳಿಕ ನಟಿ ಲ್ಯಾಕ್ಮೆ ಫ್ಯಾಶನ್ ವೀಕ್ನಲ್ಲಿ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡರು. ಫ್ಯಾಷನ್ ಗಾಲಾದಲ್ಲಿ ತಮ್ಮ ಸಿಗ್ನೇಚರ್ ಸ್ಟೈಲ್ನೊಂದಿಗೆ ಹೆಜ್ಜೆ ಹಾಕಿದರು.
ಇಂದು ಬಾಲಿವುಡ್ ನಟಿ ಸುಶ್ಮಿತಾ ಸೇನ್ ಎಲ್ಎಫ್ಡಬ್ಲ್ಯೂ 2023 (ಲ್ಯಾಕ್ಮೆ ಫ್ಯಾಶನ್ ವೀಕ್)ರಲ್ಲಿ ಭಾಗಿಯಾದರು. ಅನುಶ್ರೀ ರೆಡ್ಡಿ ಅವರ ಕಾರ್ಯಕ್ರಮದಲ್ಲಿ ಗ್ರೀನ್ ಲೆಹೆಂಗಾ ತೊಟ್ಟು ಮಿಂಚು ಹರಿಸಿದರು. ಈ ಫ್ಯಾಶನ್ ಸಂಭ್ರಮದಲ್ಲಿ ರ್ಯಾಂಪ್ ವಾಕ್ ಮಾಡುವಾಗ ಎಂದಿನಂತೆ ಬಹಳ ಸುಂದರವಾಗಿ ಕಾಣಿಸಿಕೊಂಡರು. ನಸೀಬೋ ಲಾಲ್ ಮತ್ತು ಅಬಿದಾ ಪರ್ವೀನ್ ಅವರ ತು ಜೂಮ್ ಹಾಡಿಗೆ ನಟಿ ಮೈಕುಣಿಸಿ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದರು. ಹಿಂತಿರುಗುವಾಗ ಸುಶ್ಮಿತಾ ಸೇನ್ ಚಪ್ಪಾಳೆ ತಟ್ಟಲು ಪ್ರಾರಂಭಿಸಿದರು ಮತ್ತು ಕಾರ್ಯಕ್ರಮದಲ್ಲಿ ಹಾಜರಿದ್ದ ಎಲ್ಲರೂ ಸೇರಿಕೊಂಡರು. ಅನುಶ್ರೀ ರೆಡ್ಡಿ ಅವರೊಂದಿಗಿನ ಸಹಯೋಗದ ಕುರಿತು ಮಾತನಾಡಿದ ಸುಶ್ಮಿತಾ ಅವರು ಅತ್ಯುತ್ತಮ ಸಂಗ್ರಹಗಳನ್ನು ಒಟ್ಟುಗೂಡಿಸುವುದಕ್ಕಾಗಿ ಹೈದರಾಬಾದ್ ಮೂಲದ ವಿನ್ಯಾಸಕರನ್ನು ಶ್ಲಾಘಿಸಿದರು.
ಇನ್ನೂ ಈ ಲಾಕ್ಮೆ ಫ್ಯಾಶನ್ ವೀಕ್ನಲ್ಲಿ ನಟಿ ಜಾನ್ವಿ ಕಪೂರ್ ಅವರ ಸಂಬಂಧಿ ಮೋಹಿತ್ ಮರ್ವಾ ಪತ್ನಿ ಅಂತರಾ ಮೋತಿವಾಲಾ ಕೂಡ ವಿಶೇಷವಾಗಿ ಎಲ್ಲರ ಗಮನ ಸೆಳೆದಿದ್ದಾರೆ. ತುಂಬು ಗರ್ಭಿಯಾಗಿರುವ ಅಂತರಾ ಮೋತಿವಾಲಾ ಅವರು ತಮ್ಮ ಬೇಬಿ ಬಂಪ್ ಪ್ರದರ್ಶಿಸಿ ಆತ್ಮವಿಶ್ವಾಸದಿಂದ ರ್ಯಾಂಪ್ ವಾಕ್ ಮಾಡಿದರು. ಈವೆಂಟ್ನ ಫೋಟೋಗಳನ್ನು ನಟಿ ಜಾನ್ವಿ ಕಪೂರ್ ಹಂಚಿಕೊಂಡು ತಮ್ಮ ಸಂಬಂಧಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.