ಕರ್ನಾಟಕ

karnataka

ETV Bharat / entertainment

ತಾಲಿ ಸೀರಿಸ್:​ ತೃತೀಯಲಿಂಗಿ ಪಾತ್ರದಲ್ಲಿ ಮಾಜಿ ಭುವನಸುಂದರಿ ಸುಶ್ಮಿತಾ ಸೇನ್

ತಾಲಿ ಸೀರಿಸ್​ ನಲ್ಲಿ ತೃತೀಯಲಿಂಗಿ ಕಾರ್ಯಕರ್ತೆ ಗೌರಿ ಸಾವಂತ್ ಪಾತ್ರ ನಿರ್ವಹಿಸಲಿದ್ದಾರೆ ಮಾಜಿ ಭುವನಸುಂದರಿ ಸುಶ್ಮಿತಾ ಸೇನ್.

Sushmita Sen
ಮಾಜಿ ಭುವನಸುಂದರಿ ಸುಶ್ಮಿತಾ ಸೇನ್

By

Published : Oct 6, 2022, 6:46 PM IST

ಹೊಸ ವೆಬ್ ಸರಣಿ ತಾಲಿ ಅಲ್ಲಿ ಬಾಲಿವುಡ್ ತಾರೆ ಸುಶ್ಮಿತಾ ಸೇನ್ ತೃತೀಯ ಲಿಂಗಿ ( transgender activist) ಕಾರ್ಯಕರ್ತೆ ಆಗಿ ಕಾಣಿಸಿಕೊಳ್ಳಲಿದ್ದಾರೆ. ಅರ್ಜುನ್ ಸಿಂಗ್ ಬರನ್ ಮತ್ತು ಕಾರ್ತಿಕ್ ಡಿ ನಿಶಾಂದರ್ ರಚನೆಯ ತಾಲಿ ಸೀರಿಸ್​ ನಲ್ಲಿ ತೃತೀಯಲಿಂಗಿ ಕಾರ್ಯಕರ್ತೆ ಗೌರಿ ಸಾವಂತ್ ಪಾತ್ರ ನಿರ್ವಹಿಸಲಿದ್ದಾರೆ.

ಆರ್ಯ ವೆಬ್ ಸರಣಿಯ ನಂತರ ತಾಲಿ ಸೀರಿಸ್ ನಲ್ಲಿ ಕಾಣಿಸಿಕೊಳ್ಳುತ್ತಿರುವ ಸುಶ್ಮಿತಾ ಸೇನ್ ತಮ್ಮ ಫಸ್ಟ್ ಲುಕ್ ಅನ್ನು ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ. ಅವರು ಹಂಚಿಕೊಂಡ ಫೋಟೋದಲ್ಲಿ, ಕೆಂಪು - ಹಸಿರು ಸೀರೆ ಧರಿಸಿ ಚಪ್ಪಾಳೆ ತಟ್ಟುತ್ತಿದ್ದಾರೆ. ಅವರ ಹಣೆಯ ಮೇಲೆ ದೊಡ್ಡ ಬಿಂದಿ, ಕೆಂಪು ಲಿಪ್ ಸ್ಟಿಕ್ ಹಾಕಿದ್ದು, ಸಖತ್​ ಬೋಲ್ಡ್​ ಲುಕ್ ನೀಡಿದ್ದಾರೆ. ಈ ಫೋಟೋ ಹಂಚಿಕೊಂಡು, ತೃತೀಯ ಲಿಂಗಿಗಳ ಹೋರಾಟ, ಕಷ್ಟಗಳನ್ನು ಈ ವೆಬ್​ ಸಿರಿಸ್​ ಹೇಳಲಿದೆ ಎಂದು ತಿಳಿಸಿದ್ದಾರೆ.

ಈ ತಾಲಿ ವೆಬ್ ಸೀರಿಸ್ ಟ್ರಾನ್ಸ್‌ಜೆಂಡರ್ ಕಾರ್ಯಕರ್ತೆ ಗೌರಿ ಸಾವಂತ್ ಅವರ ಜೀವನವನ್ನು ಆಧರಿಸಿದೆ. ಸುಶ್ಮಿತಾ ಅವರು ಗೌರಿ ಪಾತ್ರದಲ್ಲಿ ನಟಿಸುತ್ತಿದ್ದು, ಗೌರಿ ಅವರ ವೈಯಕ್ತಿಕ ಜೀವನದ ಬಗ್ಗೆ ತಿಳಿದುಕೊಳ್ಳುವ ಅವಕಾಶ ಎಲ್ಲರಿಗೂ ಸಿಗಲಿದೆ.

ಈ ವೆಬ್ ಸರಣಿಯನ್ನು ಗ್ಲೋಬಲ್ ಸ್ಪೋರ್ಟ್ಸ್ ಎಂಟರ್‌ಟೈನ್‌ಮೆಂಟ್ ಮತ್ತು ಮೀಡಿಯಾ ಸೊಲ್ಯೂಷನ್ಸ್ ಬ್ಯಾನರ್ ಅಡಿ ನಿರ್ಮಿಸಲಾಗುತ್ತಿದೆ. ಇದನ್ನು ಅರ್ಜುನ್ ಸಿಂಗ್ ಬರನ್ ಮತ್ತು ಕಾರ್ತಿಕ್ ಡಿ ನಿಶಾಂದರ್ ನಿರ್ಮಿಸಿದ್ದಾರೆ. ವೆಬ್ ಸೀರೀಸ್ 6 ಕಂತುಗಳಲ್ಲಿ ತಯಾರಾಗಲಿದೆ. ವರದಿಗಳ ಪ್ರಕಾರ, ಈ ವೆಬ್ ಸರಣಿಯ ಕೆಲಸ ಈಗಾಗಲೇ ಪ್ರಾರಂಭವಾಗಿದೆ. ಮರಾಠಿ ಚಿತ್ರ ನಿರ್ಮಾಪಕ ರವಿ ಜಾಧವ್ ಈ ವೆಬ್ ಸರಣಿಯ ನಿರ್ದೇಶಕರು. ವೂಟ್‌ನಲ್ಲಿ ಸೀರಿಸ್ ಪ್ರಸಾರವಾಗಲಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ:ಹೃದಯಾಘಾತ.. ಅಸ್ಸೋಂ ಬಾಲ ಕಲಾವಿದೆ ಸಾವು ; ಆಸ್ಪತ್ರೆ ಮೇಲ್ವಿಚಾರಕಿ ಅಮಾನತು!

ಗಣೇಶ್ ಆಗಿ ಹುಟ್ಟಿ ಪುಣೆಯಲ್ಲಿ ಬೆಳೆದ ಸಾವಂತ್, 2013ರಲ್ಲಿ ಸಲ್ಲಿಸಲಾದ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ (NALSA) ಅರ್ಜಿದಾರರಲ್ಲಿ ಒಬ್ಬರಾಗಿದ್ದರು. ಟ್ರಾನ್ಸ್​ ಜೆಂಡರ್​ ಅನ್ನು ಸುಪ್ರೀಂ ಕೋರ್ಟ್ 2014ರಲ್ಲಿ ಅನ್ನು ಮೂರನೇ ಲಿಂಗ ಎಂದು ಪರಿಗಣಿಸಿ ಅಂತಿಮ ತೀರ್ಪು ನೀಡಿತ್ತು. ಅವರ ಕುರಿತಾಗಿದೆ ಈ ತಾಲಿ ಸೀರಿಸ್​.

ABOUT THE AUTHOR

...view details