ಹೈದರಾಬಾದ್:ಕಳೆದ ಎರಡು ದಿನಗಳ ಹಿಂದೆ ತಮಗೆ ಹೃದಯಾಘಾತ ಆಗಿರುವುದಾಗಿ ಮಾಜಿ ವಿಶ್ವಸುಂದರಿ ಸುಶ್ಮಿತಾ ಸೇನ್ ಹೇಳಿಕೊಂಡಿದ್ದಾರೆ. ಈ ಆಘಾತಕಾರಿ ವಿಷಯ ಹೇಳಿದ ತಕ್ಷಣ ಅಭಿಮಾನಿಗಳು ಶಾಕ್ ಆಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ವಿಸ್ತೃತವಾಗಿ ಬರೆದುಕೊಂಡಿರುವ ಅವರು, ಯಾರೂ ಆತಂಕಪಡುವ ಅಗತ್ಯವಿಲ್ಲ. ಸದ್ಯ ತಾನು ಆರೋಗ್ಯದಿಂದ ಇರುವುದಾಗಿ ತಿಳಿಸಿದ್ದಾರೆ. ಆದರೆ, ಈ ಸುದ್ದಿ ಕೇಳಿದ ತಕ್ಷಣ ಅವರ ಹಿತೈಷಿಗಳು, ಅಭಿಮಾನಿಗಳು, ಬಿಟೌನ್ ನಟ-ನಟಿಯರು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ಬೇಸಿಗೆಯಲ್ಲಿ ಮತ್ತಷ್ಟು ಬಿಸಿ ಏರಿಸಿದ ಮಾಳವಿಕಾ ಮೋಹನನ್ ಅವತಾರ: ನಟಿಯ ನೋಟಕ್ಕೆ ಫ್ಯಾಷನ್ ಪ್ರಿಯರ ಫಿದಾ
ಎರಡು ದಿನಗಳ ಹಿಂದೆ ನನಗೆ ಹೃದಯಾಘಾತವಾಗಿತ್ತು. ವೈದ್ಯರ ಸಲಹೆ ಮೇರೆಗೆ ಆಂಜಿಯೋಪ್ಲಾಸ್ಟಿ ಮಾಡಲಾಗಿದೆ. ಅಲ್ಲದೇ ಸ್ಟೆಂಟ್ಸ್ ಕೂಡ ಅಳವಡಿಸಲಾಗಿದೆ. ನನಗೆ ಚಿಕಿತ್ಸೆ ನೀಡಿದ ಹೃದ್ರೋಗ ತಜ್ಞರು ಆತಂಕ ಪಡುವ ಅಗತ್ಯವಿಲ್ಲ ಎಂದಿದ್ದಾರೆ. ಹೃದಯಾಘಾತ ಆದ ತಕ್ಷಣ ವೈದ್ಯಕೀಯ ನೆರವು ಸಿಕ್ಕಿತು. ಈಗ ಆರೋಗ್ಯ ಸ್ಥಿರವಾಗಿದೆ ಎಂದು ಸುಶ್ಮಿತಾ ಸೇನ್ ತಿಳಿಸಿದ್ದಾರೆ.
ಅಲ್ಲದೇ ತಮಗೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಸಹಾಯ ಮಾಡಿದ ಹಿತೈಷಿಗಳು, ಅಭಿಮಾನಿಗಳು, ಎಲ್ಲರಿಗೂ ಧನ್ಯವಾದ. ಎಲ್ಲವನ್ನೂ ಇನ್ನೊಂದು ಪೋಸ್ಟ್ನಲ್ಲಿ ವಿವರಿಸುವೆ. ಸದ್ಯಕ್ಕೆ ಧನ್ಯವಾದ, ವಿಷಯ ಹೇಳಬೇಕಿತ್ತು. ನನ್ನ ಆರೋಗ್ಯಕ್ಕಾಗಿ ಶ್ರಮಿಸಿದ ಎಲ್ಲರಿಗೂ ಧನ್ಯವಾದಗಳು. ನಿಮ್ಮ ಹಾರೈಕೆಯಿಂದ ನಾನು ಈಗ ಆರೋಗ್ಯವಾಗಿದ್ದೇನೆ. ಸದ್ಯ ನನ್ನಲ್ಲಿ ಯಾವುದೇ ಭಯವಿಲ್ಲ. ಈ ಮೊದಲಿನಂತೆಯೇ ನಾನು ಸಾಮಾನ್ಯ ಜೀವನವನ್ನು ನಡೆಸಬಲ್ಲೆ. ನಿಮ್ಮ ಪ್ರೀತಿಗೆ ಧನ್ಯವಾದಗಳು ಎಂದು ಅವರು ಇನ್ಸ್ಟಾಗ್ರಾಮ್ನಲ್ಲಿ ಬರೆದುಕೊಂಡಿದ್ದಾರೆ.