ಕರ್ನಾಟಕ

karnataka

ETV Bharat / entertainment

ಮನಮೋಹಕ ಫ್ಯಾಷನ್ ಶೋ: ಸುಷ್ಮಿತಾಗೆ ಮಿಸೆಸ್ ಇಂಡಿಯಾ ಐಕಾನ್ ಕಿರೀಟ - ಮಿಸ್ಟರ್ ಟೀನ್ ವಿಭಾಗ

ಬೆಂಗಳೂರಿನ ಬೆಲ್ಲ ಸಿಯವೋ ರೆಸಾರ್ಟ್​ನಲ್ಲಿ ಯಶ್ ಇಂಟರ್​ನ್ಯಾಷನಲ್​ ಆಯೋಜಿಸಿದ್ದ ಮಿಸೆಸ್ ಇಂಡಿಯಾ ಐಕಾನ್ ಫ್ಯಾಷನ್ ಶೋನಲ್ಲಿ ರೂಪದರ್ಶಿಗಳು ಮನಮೋಹಕ ಹೆಜ್ಜೆ ಹಾಕಿ ಸಭಿಕರನ್ನು ರಂಜಿಸಿದರು.

sushmita-crowned-mrs-india-icon
ಸುಷ್ಮಿತಾಗೆ ಮಿಸೆಸ್ ಇಂಡಿಯಾ ಐಕಾನ್ ಕಿರೀಟ

By

Published : Oct 8, 2022, 3:01 PM IST

ಬೆಂಗಳೂರು:ಇಲ್ಲಿನ ಬೆಲ್ಲ ಸಿಯವೋ ರೆಸಾರ್ಟ್​ನಲ್ಲಿ ಯಶ್ ಇಂಟರ್​ನ್ಯಾಷನಲ್​ ಆಯೋಜಿಸಿದ್ದ ಮಿಸೆಸ್ ಇಂಡಿಯಾ ಐಕಾನ್ ಫ್ಯಾಷನ್ ಶೋನಲ್ಲಿ ರೂಪದರ್ಶಿಗಳು ಮನಮೋಹಕ ಹೆಜ್ಜೆ ಹಾಕಿ ಸಭಿಕರನ್ನು ರಂಜಿಸಿದರು. ಸುಷ್ಮಿತಾ ಅವರು 2022 ರ ಸಾಲಿನ ಮಿಸೆಸ್ ಇಂಡಿಯಾ ಐಕಾನ್ ಪ್ರಶಸ್ತಿ ಜಯಿಸಿದರು. ಮಿಸ್ ಟೀನ್ ಹಾಗೂ ಮಿಸ್ಟರ್ ಟೀನ್ ವಿಭಾಗದಲ್ಲಿ ಮಂಜು ಭಾರ್ಗವಿ, ಯಶು ಬಲ್ಲಾಳ್ ಪ್ರಶಸ್ತಿ ಗೆದ್ದರು.

ಮದುವೆಯಾದವರ ವಿಭಾಗದಲ್ಲಿ ಮಿಸ್ಟರ್ ಹಾಗೂ ಮಿಸೆಸ್ ವಿಭಾಗದ ಸ್ಪರ್ಧೆಗಳು ನಡೆದು, ಮಿಸ್ಟರ್ ವಿಭಾಗದಲ್ಲಿ ಅರುಣ್ ಡಿ ಶೆಟ್ ಪ್ರಶಸ್ತಿ ಪಡೆದರು. ಲಿಟಲ್ ಪ್ರಿನ್ಸೆಸ್ ವಿಭಾಗದಲ್ಲಿ ಗಣಿಶ್ಕ್, ವಿಂದ್ಯಾ ವಿಕಾಸಿನಿ ಪ್ರಶಸ್ತಿ ಗೆದ್ದರೆ, ಕಿಡ್ಸ್​ನ ಇನ್ನೊಂದು ವಿಭಾಗದ ಲಿಟಲ್ ಪ್ರಿನ್ಸೆಸ್ ವಿಭಾಗದಲ್ಲಿ ಗುರುಪ್ರೀತ್ ಬಡ್ಡಿ, ವೈಷ್ಣವಿ ಸಂತೋಷ್ ಪಾಲಾಯಿತು. ಮಿಸ್ಟರ್ ಹಾಗೂ ಮಿಸ್ ವಿಭಾಗದಲ್ಲಿ ವಿಲ್ಸನ್ ಜ್ಯಾಕ್, ಜಾಗೃತಿ ಪ್ರಶಸ್ತಿ ಗೆದ್ದರು.

ಸುಷ್ಮಿತಾಗೆ ಮಿಸೆಸ್ ಇಂಡಿಯಾ ಐಕಾನ್ ಕಿರೀಟ

ತೀರ್ಪುಗಾರರು:ಮನಮೋಹಕ ಫ್ಯಾಷನ್​ ಶೋದ ತೀರ್ಪುಗಾರರಾಗಿ ರಶ್ಮಿ ಹೆಗ್ಡೆ, ಶವ್ಯ ರಿಷಿಕಾ, ಗೀಶನ್, ಸೀಮಾ ನಾಯ್ಡು ಅವರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಯಶ್ ಇಂಟರ್​ನ್ಯಾಷನಲ್​ ಸಂಸ್ಥಾಪಕ ಸಿಇಒ ಯಶ್, ಸಿಇಒ ರಾಕಿ, ಮಹಾಭಾರತದ ಪವನ್, ಸುಶ್ಮಿತಾ ಸೇರಿದಂತೆ ಹಲವು ಕಲಾವಿದರು ಸಾಕ್ಷಿಯಾದರು.

ವಿವಿಧ ಸುತ್ತುಗಳು:ಫ್ಯಾಷನ್​ ಶೋದಲ್ಲಿ ನ್ಯಾಷನಲ್, ಬ್ಯುಸಿನೆಸ್ ಹಾಗೂ ವೆಸ್ಟರ್ನ್ ಸುತ್ತುಗಳು ನಡೆದವು. ಸಾಂಪ್ರದಾಯಿಕ ಸುತ್ತಿನಲ್ಲಿ ದೇಶದ ಸಂಸ್ಕೃತಿ ಬಿಂಬಿಸುವ ಉಡುಗೆಗಳನ್ನು ಸ್ಪರ್ಧಿಗಳು ತೊಟ್ಟಿದ್ದರು.

ನ್ಯಾಷನಲ್ ಯೂತ್ ಜೆಮ್ ಪ್ರಶಸ್ತಿಯನ್ನೂ ಇದೇ ವೇಳೆ ಕೊಡಲಾಯಿತು. ಫ್ಯಾಷನ್, ಸಿನೆಮಾ, ನೃತ್ಯ, ಸಾಮಾಜಿಕ ಸೇವೆ ಸೇರಿದಂತೆ ಹತ್ತು ಹಲವು ವಿಭಾಗದಲ್ಲಿ ಸೇವೆ ಸಲ್ಲಿಸಿದವರಿಗೂ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಗಾಂಧಿ ಜಯಂತಿ ಕುರಿತು ಒಂದು ನೃತ್ಯ ಕೂಡ ಈ ಕಾರ್ಯಕ್ರಮಕ್ಕೆ ಮೆರಗು ನೀಡಿತು.

ಎಷ್ಟು ಸ್ಪರ್ಧಿಗಳು ಭಾಗಿ:ಮಿಸ್ ವಿಭಾಗದಲ್ಲಿ 30, ಮಿಸ್ಟರ್ ವಿಭಾಗದಲ್ಲಿ 30, ಮದುವೆಯಾದವರ ವಿಭಾಗದಲ್ಲಿ 20, ಮಿಸ್ಟರ್ ಟೀನ್ ವಿಭಾಗದಲ್ಲಿ 27, ಮಿಸ್ ಟೀನ್ ವಿಭಾಗದಲ್ಲಿ 27, ಮಕ್ಕಳ ಪ್ರಿನ್ಸ್ ವಿಭಾಗದಲ್ಲಿ 20, ಪ್ರಿನ್ಸೆಸ್ ವಿಭಾಗದಲ್ಲಿ 20 ಸ್ಪರ್ಧಿಗಳು ಭಾಗವಹಿಸಿದ್ದರು.

ಈ ಫ್ಯಾಷನ್​ ಶೋದಲ್ಲಿ ಗೆದ್ದ ಸೌಂದರ್ಯ ಸ್ಪರ್ಧಿಗಳು ಆಂಧ್ರಪ್ರದೇಶದ ವಿಜಯವಾಡ ಮತ್ತು ತಮಿಳುನಾಡಿಮ ಚೆನ್ನೈನಲ್ಲಿ ನಡೆಯುವ ಸ್ಪರ್ಧೆಯಲ್ಲಿ ರಾಜ್ಯವನ್ನು ಪ್ರತಿನಿಧಿಸಲಿದ್ದಾರೆ.

ಓದಿ:ಜವಾನ್ ಸಿನಿಮಾ ಶೂಟಿಂಗ್​ನಲ್ಲಿ ಬ್ಯುಸಿಯಾದ ಎಸ್​ಆರ್​ಕೆಗೆ ಸೇತುಪತಿ-ದಳಪತಿ ಸಾಥ್

ABOUT THE AUTHOR

...view details