'ದಿ ಸಿನಿಫೈಲ್ಸ್' ನಡೆಸಿದ ಹೊಸ ಸಮೀಕ್ಷೆಯು, ಹೆಚ್ಚಿನ ಸಂಖ್ಯೆಯ ಭಾರತೀಯ ಪ್ರೇಕ್ಷಕರು ಬಿಗ್ ಸ್ಕ್ರೀನ್ನಲ್ಲೇ ಸಿನಿಮಾಗಳನ್ನು ವೀಕ್ಷಿಸಲು ಬಯಸುತ್ತಾರೆ, ಥಿಯೇಟರ್ ಅನುಭವನ್ನು ಆನಂದಿಸುತ್ತಾರೆ ಎಂಬುದನ್ನು ಬಹಿರಂಗಪಡಿಸಿದೆ. ಶೇ. 74ರಷ್ಟು ಪ್ರೇಕ್ಷಕರು ಸಿನಿಮಾ ಬಿಡುಗಡೆಗೊಂಡ ಮೊದಲ ಮೂರು ದಿನಗಳಲ್ಲೇ ಬಿಗ್ಸ್ಕ್ರೀನ್ನಲ್ಲಿ ಸಿನಿಮಾ ವೀಕ್ಷಿಸುವ ಪ್ರಯತ್ನ ಮಾಡುತ್ತಾರೆ ಮತ್ತು ಥಿಯೇಟರ್‌ಗಳಲ್ಲಿ ತಮ್ಮ ಸಿನಿಮೀಯ ಅನುಭವನ್ನು ಆನಂದಿಸಲು ಪರ್ಫೆಕ್ಟ್ ಪ್ಲಾನ್ ಕೂಡ ಹಾಕುತ್ತಾರೆ ಎಂಬುದಾಗಿಯೂ ಅಧ್ಯಯನ ತಿಳಿಸಿದೆ.
ರಾಷ್ಟ್ರೀಯ ಸಿನಿಮಾ ದಿನದ (ಅಕ್ಟೋಬರ್ 13) ಮುನ್ನ ಈ ಅಧ್ಯಯನ ನಡೆದಿದೆ. ಶೇ. 98ರಷ್ಟು ಭಾರತೀಯರು ಪರ್ಫೆಕ್ಟ್ ಸಿನಿಮೀಯ ಅನುಭವ ಅಥವಾ ಮ್ಯಾಜಿಕ್ ಬಿಗ್ ಸ್ಕ್ರೀನ್ ಮೂಲಕ ಮಾತ್ರ ಸಾಧ್ಯ ಎಂದು ನಂಬುತ್ತಾರೆ ಎಂಬುದನ್ನು ಈ ವರದಿ ಬಹಿರಂಗಪಡಿಸಿದೆ.
ಅಧ್ಯಯನಕ್ಕೆ ಪ್ರತಿಕ್ರಿಯಿಸಿದವರ ಪೈಕಿ ಶೇ. 90ರಷ್ಟು ಜನರು, ಥಿಯೇಟರ್ಗಳಿಗೆ ಹೋಗಲು ಇಚ್ಛಿಸುತ್ತಾರೆ. ಔಟಿಂಗ್ ಎಂಬ ವಿಷಯ ಬಂದಾಗ ಶಾಪಿಂಗ್ ಸೇರಿದಂತೆ ಇತರ ಆಯ್ಕೆಗಳಿಗಿಂತ ಚಿತ್ರಮಂದಿರಕ್ಕೆ ಹೆಚ್ಚು ಪ್ರಾಶಸ್ತ್ಯ ಕೊಡುತ್ತಾರೆ. ಅದರಲ್ಲೂ ಯಂಗರ್ ಜನರೇಶನ್ ಪ್ರತೀ ವಾರ ಥಿಯೇಟರ್ಗೆ ಹೋಗುವ ಬಗ್ಗೆ ಆಲೋಚಿಸುತ್ತದೆ.
ಈ ವರದಿಯನ್ನು ಟಿಕೆಟ್ ಬುಕ್ ಮಾಡುವ ವೇದಿಕೆ ಬುಕ್ ಮೈ ಶೋ ಬಿಡುಗಡೆ ಮಾಡಿದೆ. ಭಾರತದಲ್ಲಿನ 650 ನಗರಗಳು ಮತ್ತು ಪಟ್ಟಣಗಳಲ್ಲಿ ಟಿಕೆಟ್ ಪ್ಲಾಟ್‌ಫಾರ್ಮ್‌ನಲ್ಲಿ ವಹಿವಾಟು ನಡೆಸುವ ಗ್ರಾಹಕರ ನೆಲೆಯಲ್ಲಿ ಸಮೀಕ್ಷೆ ನಡೆಸಲಾಗಿದೆ. ಸಮೀಕ್ಷೆಗೆ ಪ್ರತಿಕ್ರಿಯಿಸಿದವರ ಪೈಕಿ ಶೇ. 41ರಷ್ಟು ಮಂದಿ ಯಂಗರ್ ಜನರೇಶನ್. 59 ಪ್ರತಿಶತದಷ್ಟು ಜನರು ಯಂಗರ್ ಜನರೇಶನ್ ದಾಟಿದವರು.