ಮುಂಬೈ: ತಮಿಳು ನಟ ಸೂರ್ಯ, ಅಪರ್ಣಾ ನಟನೆಯ 'ಸೂರರೈ ಪೊಟ್ರು' ಸಿನಿಮಾವನ್ನು ಹಿಂದಿಗೆ ರಿಮೇಕ್ ಮಾಡಲಾಗುತ್ತಿದೆ. ಓಟಿಟಿಯಲ್ಲಿ ರಿಲೀಸ್ ಆದ ಈ ಚಿತ್ರಕ್ಕೆ ಭಾರಿ ಜನಪ್ರಿಯತೆ ಸಿಕ್ಕಿತ್ತು. ಇದೀಗ ಅಭಿಮಾನಿಗಳಿಗೆ ಮತ್ತೊಂದು ಗುಡ್ ನ್ಯೂಸ್ ಸಿಕ್ಕಿದ್ದು, ಸೂರ್ಯ ನಿಭಾಯಿಸಿದ್ದ ಪಾತ್ರವನ್ನು ಹಿಂದಿ ರಿಮೇಕ್‌ನಲ್ಲಿ ಅಕ್ಷಯ್ ಕುಮಾರ್ ಮಾಡಲಿದ್ದಾರೆ. ಜೊತೆಗೆ ಸೌತ್ ಸ್ಟಾರ್ ಸೂರ್ಯ ಕೂಡ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಈ ಕುರಿತು ಟ್ವಿಟ್ಟರ್‌ನಲ್ಲಿನ ಅಕ್ಷಯ್ ಕುಮಾರ್ ಜೊತೆಗಿನ ಫೋಟೋವನ್ನ ಪೋಸ್ಟ್ ಮಾಡಿರುವ ಸೂರ್ಯ, 'ಸೂರರೈ ಪೊಟ್ರು' ಹಿಂದಿ ರಿಮೇಕ್ ಚಿತ್ರತಂಡದೊಂದಿಗೆ ಪ್ರತಿ ನಿಮಿಷವನ್ನು ಆನಂದಿಸಿದೆ. ಸುಧಾ ಕೊಂಗರಾ ಅವರು ನಮ್ಮ ಕಥೆಯನ್ನು ಸುಂದರವಾಗಿ ಮತ್ತೆ ಜೀವಂತವಾಗಿಡಲು ಮುಂದಾಗಿದ್ದಾರೆ.