ಸ್ಯಾಂಡಲ್ವುಡ್ನಲ್ಲಿ 'ಗಂಟುಮೂಟೆ', 'ಟಾಮ್ ಅಂಡ್ ಜೆರ್ರಿ' ಸಿನಿಮಾಗಳ ಮೂಲಕ ಭರವಸೆ ಮೂಡಿಸಿರುವ ಯುವ ನಟ ನಿಶ್ಚಿತ್ ಕೊರೋಡಿ. ಸದ್ಯ 'ಸಪ್ಲೈಯರ್ ಶಂಕರ' ಸಿನಿಮಾ ವಿಚಾರವಾಗಿ ಬ್ಯುಸಿಯಾಗಿದ್ದಾರೆ. ಈ ಹಿಂದಿನ ಸಿನಿಮಾಗಳಲ್ಲಿ ಲವರ್ ಬಾಯ್ ಇಮೇಜಿನಿಂದ ಗುರುತಿಸಿಕೊಂಡಿದ್ದ ನಿಶ್ಚಿತ್ ಈ ಚಿತ್ರದಲ್ಲಿ ರಗಡ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ದಿಲ್ಲದೇ ಚಿತ್ರದ ಶೂಟಿಂಗ್ ಮುಕ್ತಾಯವಾಗಿದ್ದು, ಬಿಡುಗಡೆಗೆ ಸಜ್ಜಾಗಿದೆ. ಇದೀಗ ಚಿತ್ರದ ಟೀಸರ್ ಅನ್ನು ನಿರ್ಮಾಪಕರಾದ ಚಂದ್ರಶೇಖರ್ ಹಾಗೂ ನಾಗೇಂದ್ರ ಸಿಂಗ್ ಆನಂದ್ ವಿಡಿಯೋ ಮೂಲಕ ಬಿಡುಗಡೆಗೊಳಿಸಿದ್ದಾರೆ.
ಈ ವೇಳೆ ಮೊದಲು ಮಾತು ಆರಂಭಿಸಿದ ನಿರ್ದೇಶಕ ರಂಜಿತ್, ಕಳೆದ ವರ್ಷ ಫೆಬ್ರವರಿಯಲ್ಲಿ ಈ ಚಿತ್ರಕ್ಕೆ ಚಾಲನೆ ದೊರೆಯಿತು. 'ಸಪ್ಲೈಯರ್ ಶಂಕರ' ಚಿತ್ರ ಬಾರ್ ಸಪ್ಲೈಯರ್ ಒಬ್ಬನ ಕಥೆ. ನಾನೇ ಕಥೆ ಬರೆದಿದ್ದೇನೆ. ಇದು ನನ್ನ ಮೊದಲ ನಿರ್ದೇಶನದ ಚಿತ್ರ. ಈ ಪಾತ್ರಕ್ಕಾಗಿ ನಾಯಕ ನಿಶ್ಚಿತ್ ಕೊರೋಡಿ ಬಹಳ ಶ್ರಮಪಟ್ಟಿದ್ದಾರೆ. ನನ್ನ ಕಥೆಗೆ ಜೀವ ತುಂಬಿದ್ದು ನಿರ್ಮಾಪಕರಾದ ಚಂದ್ರಶೇಖರ್ ಹಾಗೂ ನಾಗೇಂದ್ರ ಸಿಂಗ್. ಈ ಚಿತ್ರದಲ್ಲಿ ಹೆಚ್ಚಾಗಿ ಹೊಸ ತಂಡ ಕಾರ್ಯ ನಿರ್ವಹಿಸಿದೆ. ಇಂದು ಟೀಸರ್ ಬಿಡುಗಡೆಯಾಗಿದೆ. ಸಿನಿಮಾ ಕೂಡ ಇಷ್ಟ ಆಗುತ್ತದೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಳಿಕ ನಾಯಕ ನಟ ನಿಶ್ಚಿತ್ ಕೊರೋಡಿ ಮಾತನಾಡಿ, "ನಾನು ಈ ಹಿಂದೆ ಗಂಟು ಮೂಟೆ ಹಾಗೂ ಟಾಮ್ & ಜೆರ್ರಿ ಚಿತ್ರಗಳಲ್ಲಿ ನಟಿಸಿದ್ದೆ. ಇದು ನನ್ನ ಮೂರನೇ ಚಿತ್ರ. ಬಾರ್ ಸಪ್ಲೈಯರ್ ಪಾತ್ರ ನನ್ನದು. ಹಾಗಂತ ಈ ಚಿತ್ರದಲ್ಲಿ ಬರೀ ಸಪ್ಲೈಯರ್ ಕಥೆ ಮಾತ್ರ ಇಲ್ಲ. ಕಾಮಿಡಿ, ಸೆಂಟಿಮೆಂಟ್, ಲವ್, ಥ್ರಿಲ್ಲರ್ ಎಲ್ಲವೂ ಇದೆ. ನಿರ್ದೇಶಕ ರಂಜಿತ್ ಒಳ್ಳೆಯ ಕಥೆ ಆಯ್ಕೆ ಮಾಡಿಕೊಂಡಿದ್ದಾರೆ. ನಮ್ಮ ಚಿತ್ರ ಸಿನಿಮಾ ಪ್ರೇಕ್ಷಕರಿಗೆ ಇಷ್ಟ ಆಗುತ್ತೆ" ಎಂದು ಎಂದರು.