ಕರ್ನಾಟಕ

karnataka

By ETV Bharat Karnataka Team

Published : Sep 14, 2023, 3:57 PM IST

ETV Bharat / entertainment

'ಸಪ್ಲೈಯರ್​ ಶಂಕರ' ಪ್ರೇಮಗೀತೆಗೆ ದೀಪಿಕಾ ಜೊತೆ ನಿಶ್ಚಿತ್​ ರೊಮ್ಯಾನ್ಸ್​

Supplier Shankara romantic song released: 'ಸಪ್ಲೈಯರ್​ ಶಂಕರ' ಸಿನಿಮಾದ 'ಮಾಡೊ ಕೆಲಸವ ನೀನು ಮರೆಸಿದೆ' ಎಂಬ ರೊಮ್ಯಾಂಟಿಕ್​ ಹಾಡು ಬಿಡುಗಡೆಯಾಗಿದೆ.

Supplier Shankara romantic song released
'ಸಪ್ಲೈಯರ್​ ಶಂಕರ' ಪ್ರೇಮಗೀತೆಗೆ ದೀಪಿಕಾ ಜೊತೆ ನಿಶ್ಚಿತ್​ ರೊಮ್ಯಾನ್ಸ್​

ಸ್ಯಾಂಡಲ್​ವುಡ್​ನಲ್ಲಿ 'ಗಂಟುಮೂಟೆ', 'ಟಾಮ್​ ಅಂಡ್​ ಜೆರ್ರಿ' ಸಿನಿಮಾಗಳ ಮೂಲಕ ಭರವಸೆ ಮೂಡಿಸಿರುವ ಯುವ ನಟ ನಿಶ್ಚಿತ್​ ಕೊರೋಡಿ. ಸದ್ಯ 'ಸಪ್ಲೈಯರ್​ ಶಂಕರ' ಸಿನಿಮಾ ವಿಚಾರವಾಗಿ ಬ್ಯುಸಿಯಾಗಿದ್ದಾರೆ. ಈ ಹಿಂದಿನ ಸಿನಿಮಾಗಳಲ್ಲಿ ಲವರ್​ ಬಾಯ್​ ಇಮೇಜಿನಿಂದ ಗುರುತಿಸಿಕೊಂಡಿದ್ದ ನಿಶ್ಚಿತ್​ ಈ ಚಿತ್ರದಲ್ಲಿ ರಗಡ್​ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ದಿಲ್ಲದೇ ಚಿತ್ರದ ಶೂಟಿಂಗ್​ ಮುಕ್ತಾಯವಾಗಿದ್ದು, ಬಿಡುಗಡೆಗೆ ಸಜ್ಜಾಗಿದೆ. ಇದೀಗ 'ಸಪ್ಲೈಯರ್​ ಶಂಕರ' ಸಿನಿಮಾದ ಎರಡನೇ ಹಾಡು ಆನಂದ್​ ಆಡಿಯೋ ಯೂಟ್ಯೂಬ್​ ಚಾನಲ್​ನಲ್ಲಿ ಬಿಡುಗಡೆಯಾಗಿದೆ.

’ಮಾಡೊ ಕೆಲಸವ ನೀನು ಮರೆಸಿದೆ’.'ಸಪ್ಲೈಯರ್​ ಶಂಕರ'ದಿಂದ ಬಿಡುಗಡೆಯಾದ ಪ್ರೇಮಗೀತೆಯಲ್ಲಿ ದೀಪಿಕಾ ಆರಾಧ್ಯ ಜೊತೆ ನಿಶ್ಚಿತ್​ ಕೊರೋಡಿ ರೊಮ್ಯಾನ್ಸ್​ ಮಾಡಿದ್ದಾರೆ. ಪ್ರಮೋದ್​ ಮರವಂತೆ ಬರೆದಿರುವ 'ಮಾಡೊ ಕೆಲಸವ ನೀನು ಮರೆಸಿದೆ' ಎಂಬ ಹಾಡು ನಕುಲ್​ ಅಭಯಂಕರ್​ ಹಾಗೂ ಐಶ್ವರ್ಯ ರಂಗರಾಜನ್​ ಅವರ ಸುಮಧುರ ಕಂಠದಲ್ಲಿ ಮೂಡಿ ಬಂದಿದೆ. ಆರ್​.ಬಿ ಭರತ್​ ಸಂಗೀತ ನೀಡಿದ್ದಾರೆ. ಹಾಡು ಬಿಡುಗಡೆಯಾದ ತಕ್ಷಣದಿಂದಲೇ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದೆ.

'ಸಪ್ಲೈಯರ್​ ಶಂಕರ' ಪ್ರೇಮಗೀತೆಗೆ ದೀಪಿಕಾ ಜೊತೆ ನಿಶ್ಚಿತ್​ ರೊಮ್ಯಾನ್ಸ್​

ತಾಯಿ ಕಳೆದುಕೊಂಡ ಮಗನ ನೋವಿನ ಗೀತೆ.. ಕೆಲವು ದಿನಗಳ ಹಿಂದೆ ಚಿತ್ರದ ಮೊದಲ ಹಾಡು ಬಿಡುಗಡೆಯಾಗಿತ್ತು. ತಾಯಿ ಕಳೆದುಕೊಂಡ ಮಗನ ಆಕ್ರಂದನ, ತುಂಬಾ ಪ್ರೀತಿಸುವ ಜೀವ ದೂರವಾದಾಗ ಆಗುವ ನೋವು 'ಅಯ್ಯೋ ದೈವವೇ' ಹಾಡಿನಲ್ಲಿ ಅದ್ಭುತವಾಗಿ ಅತ್ಯಂತ ಭಾವನಾತ್ಮಕವಾಗಿ ಮೂಡಿ ಬಂದಿತ್ತು. ಈ ಎಮೋಷನಲ್​ ಹಾಡಿಗೆ ನಿರ್ದೇಶಕ ರಂಜಿತ್​ ಸಿಂಗ್​ ರಜಪೂತ್​ ಸಾಹಿತ್ಯ ಬರೆದಿದ್ದಾರೆ. ಸುನಿಲ್​ ಕಶ್ಯಪ್​ ಧ್ವನಿಯಾಗಿದ್ದಾರೆ. ಆರ್​.ಬಿ ಭರತ್ ಟ್ಯೂನ್​ ಹಾಕಿದ್ದಾರೆ.

ಇದಕ್ಕೂ ಮೊದಲು ಅನಾವರಣಗೊಂಡಿದ್ದ 'ಸಪ್ಲೈಯರ್​ ಶಂಕರ' ಮೋಷನ್​ ಪೋಸ್ಟರ್​ಗೆ ಉತ್ತಮ ರೆಸ್ಪಾನ್ಸ್​ ಸಿಕ್ಕಿತ್ತು. ಪೊಲೀಸ್​ ಸ್ಟೇಷನ್​ ದೃಶ್ಯದ ಮೂಲಕ ತೆರೆದುಕೊಳ್ಳುವ ಮೋಷನ್​ ಪೋಸ್ಟರ್​ ನಾನಾ ಕುತೂಹಲಗಳನ್ನು ಹುಟ್ಟುಹಾಕಿದೆ. ರಕ್ತ ಮೆತ್ತಿದ ಅವತಾರದಲ್ಲಿ ಮಾಸ್​ ಲುಕ್​ನಲ್ಲಿ ನಟ ನಿಶ್ಚಿತ್​ ಕೊರೋಡಿ ಕಾಣಿಸಿಕೊಂಡಿದ್ದಾರೆ. ಯುವ ಪ್ರತಿಭೆ ರಂಜಿತ್​ ಸಿಂಗ್​ ರಜಪೂತ್​ ಈ ಚಿತ್ರಕ್ಕೆ ಆ್ಯಕ್ಷನ್​ ಕಟ್​ ಹೇಳಿದ್ದಾರೆ. ನಿಶ್ಚಿತ್​ಗೆ ಜೋಡಿಯಾಗಿ ಲಗೋರಿ ಸಿನಿಮಾ ಖ್ಯಾತಿಯ ದೀಪಿಕಾ ಆರಾಧ್ಯ ನಟಿಸಿದ್ದಾರೆ.

'ಸಪ್ಲೈಯರ್​ ಶಂಕರ' ಪ್ರೇಮಗೀತೆಗೆ ದೀಪಿಕಾ ಜೊತೆ ನಿಶ್ಚಿತ್​ ರೊಮ್ಯಾನ್ಸ್​

ಇವರಲ್ಲದೇ ಗೋಪಾಲ ಕೃಷ್ಣ ದೇಶಪಾಂಡೆ, ಜ್ಯೋತಿ ರೈ, ನವೀನ್​ ಡಿ ಪಡೀಲ್​ ಸೇರಿದಂತೆ ಒಂದಿಷ್ಟು ಹೊಸಬರು ಕೂಡ ಈ ಚಿತ್ರದಲ್ಲಿದ್ದಾರೆ. ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ. ಸಿನಿಮಾದ ಟೈಟಲ್​ ಹೇಳುವಂತೆ ಒಬ್ಬ ಬಾರ್​ ಸಪ್ಲೈಯರ್​ ಸುತ್ತ ಇಡೀ ಕಥೆ ಸುತ್ತುತ್ತದೆ. 'ಸಪ್ಲೈಯರ್ ಶಂಕರ' ಸಿನಿಮಾಗೆ ರಂಜಿತ್​ ಕಥೆ, ಚಿತ್ರಕಥೆ, ಸಂಭಾಷಣೆ ಜೊತೆಗೆ ಸಾಹಿತ್ಯದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.

ಚಿತ್ರತಂಡ ಹೀಗಿದೆ..ಚಿತ್ರದ ಹಾಡುಗಳಿಗೆ ಕನ್ನಡದ ಖ್ಯಾತ ಗಾಯಕ ವಿಜಯ ಪ್ರಕಾಶ್​, ಅಮ್ಮಾ ನನ್ನೀ ಜನುಮ ಖ್ಯಾತಿಯ ಸುನಿಲ್​ ಕಶ್ಯಪ್​, ಮೋಹನ್​ ಬಿನ್ನಿಪೇಟೆ, ಸಂತೋಷ್​ ವೆಂಕಿ, ನಕುಲ್​ ಅಭಯ್ಯಂಕರ್​, ಐಶ್ವರ್ಯಾ ರಂಗರಾಜನ್​ ಧ್ವನಿಯಾಗಿದ್ದಾರೆ. ರವಿ ಬಸ್ರೂರ್​ ಬಳಿ ಕೆಲಸ ಮಾಡಿರುವ ಆರ್​.ಬಿ ಭರತ್​ ಸಂಗೀತ ನೀಡಿದ್ದಾರೆ. ಇನ್ನು 'ಸಪ್ಲೈಯರ್ ಶಂಕರ' ಚಿತ್ರಕ್ಕೆ ಸತೀಶ್​ ಚಂದ್ರಯ್ಯ ಸಂಕಲನ, ಸತೀಶ್​ ಕುಮಾರ್​ ಎ ಛಾಯಾಗ್ರಹಣ, ಬಾಲಾಜಿ ಕಲಾ ನಿರ್ದೇಶನವಿದೆ. ತ್ರಿನೇತ್ರ ಫಿಲಂಸ್​ ಸಂಸ್ಥೆಯಡಿ ಎಂ ಚಂದ್ರಶೇಖರ್​ ಹಾಗೂ ನಾಗೇಂದ್ರ ಸಿಂಗ್​ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಅತೀ ಶೀಘ್ರದಲ್ಲೇ ಚಿತ್ರ ತೆರೆ ಕಾಣಲಿದೆ.

ಇದನ್ನೂ ಓದಿ:ಅದಿತಿ ಪ್ರಭುದೇವ ಮನಸು ಕದಿಯಲು ಸರ್ಕಸ್ ಮಾಡುತ್ತಿರೋ ಈರೇಗೌಡ

ABOUT THE AUTHOR

...view details