ಚೆನ್ನೈ: ಸೂಪರ್ ಸ್ಟಾರ್ ರಜಿನಿಕಾಂತ್ ಜನ್ಮದಿನವಿಂದು. ತಲೈವಾ ಇಂದು 72ನೇ ವಸಂತಕ್ಕೆ ಕಾಲಿಟ್ಟಿದ್ದು, ಪ್ರಪಂಚ ಮೂಲೆ ಮೂಲೆಗಳಿಂದ ಅಭಿಮಾನಿಗಳು, ಸೆಲೆಬ್ರಿಟಿಗಳು ಸೇರಿದಂತೆ ನಾನಾ ಮಂದಿ ಸಾಮಾಜಿಕ ಜಾಲತಾಣಗಳ್ಲಿ ಶುಭಾಶಯದ ಮಳೆಗರೆದಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ಬೆಳಗ್ಗಿನಿಂದಲೇ ಟ್ವಿಟರ್ನಲ್ಲಿ ರಜಿನಿಕಾಂತ್ ಟ್ರೆಂಡಿಂಗ್ನಲ್ಲಿದ್ದಾರೆ.
ಸೂಪರ್ ಸ್ಟಾರ್ ರಜಿನಿಕಾಂತ್ ಚಿತ್ರರಂಗಕ್ಕೆ ಕಾಲಿಟ್ಟು ನಾಲ್ಕು ದಶಕಗಳು ಕಳೆದರೂ ಅವರ ಜನಪ್ರಿಯತೆ ಮಾತ್ರ ಕುಗ್ಗಿಲ್ಲ. ಇಷ್ಟು ವರ್ಷಗಳಲ್ಲಿ ಅವರು ಪ್ರಪಂಚ ಮೂಲೆ ಮೂಲೆಗಳಲ್ಲಿ ತಮ್ಮ ಅಭಿಮಾನಿಗಳನ್ನು ಸಂಪಾದಿಸಿದ್ದು, ಅವರ ಹೃದಯವನ್ನು ಗೆಲ್ಲುತ್ತಿದ್ದಾರೆ. ರಜಿನಿಕಾಂತ್ ಹುಟ್ಟು ಹಬ್ಬ ಹಿನ್ನೆಲೆ ಅಭಿಮಾನಿಗಳು ಕ್ರಿಯಾತ್ಮಕ ಪೋಸ್ಟರ್, ವಿಡಿಯೋ, ಸಂದೇಶಗಳ ಮೂಲಕ ನಟನಿಗೆ ಶುಭ ಹಾರೈಸಿದ್ದಾರೆ.
ರಜಿನಿಕಾಂತ್ ಹುಟ್ಟುಹಬ್ಬದ ಹಿನ್ನೆಲೆ ಸನ್ ಪಿಕ್ಚರ್ ನಿರ್ಮಾಣದ ಬಹುನಿರೀಕ್ಷಿತ 'ಜೈಲರ್' ಸಿನಿಮಾದಲ್ಲಿನ ರಜಿನಿ ಅಭಿನಯದ ಮುತ್ತುವೆಲ್ ಪಾಂಡಿಯನ್ ಪಾತ್ರದ ಪರಿಚಯವನ್ನು ಇಂದು ಸಂಜೆ ಮಾಡಲಿದ್ದು, ಅಭಿಮಾನಿಗಳಲ್ಲಿ ಕಾತರ ಹೆಚ್ಚಿಸಿದೆ.
ಇನ್ನು ಈ ಜೈಲರ್ ಸಿನಿಮಾವನ್ನು ನೆಲ್ಸನ್ ದೀಲಿಪ್ ಕುಮಾರ್ ನಿರ್ದೇಶಿಸುತ್ತಿದ್ದಾರೆ. ಈ ಚಿತ್ರದಲ್ಲಿ ಶಿವರಾಜ್ ಕುಮಾರ್, ರಮ್ಯಾ ಕೃಷ್ಣನ್, ವಸಂತ್ ರವಿ, ಯೋಗಿ ಬಾಬು ಮತ್ತು ವಿನಾಯಕನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರಕ್ಕೆ ಅನಿರುದ್ಧ ರವಿಚಂದ್ರನ್ ಸಂಗೀತ ನೀಡಿದ್ದಾರೆ. ವಿಜಯ್ ಕಾರ್ತಿಕ್ ಕನ್ನನ್ ಫೋಟೋಗ್ರಾಫಿ. ನಿರ್ಮಾಲ ಸಂಕಲನ ಇದೆ. ಈ ಚಿತ್ರ ಮುಂದಿನ ವರ್ಷ ಅಂದರೆ 2023ರ ಬೇಸಿಗೆಯಲ್ಲಿ ಬಿಡುಗಡೆಯಾಗಲಿದೆ.
ಇದನ್ನೂ ಓದಿ: 'ತಲೈವಾ'ಗೆ ಒಮ್ಮೆ ರೈಲ್ವೆ ಕೂಲಿಗಳು ಹಣ ಸಹಾಯ ಮಾಡಿದ್ದರಂತೆ!