ನಟ ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಕಾಂತಾರ ಸಿನಿಮಾ ಯಶಸ್ವಿ 25ನೇ ದಿನಗಳನ್ನು ಪೂರೈಸುತ್ತಿದ್ದರೂ ಕೂಡ, ಈ ಚಿತ್ರದ ಕ್ರೇಜ್ ಮಾತ್ರ ಕಡಿಮೆ ಆಗಿಲ್ಲ. ತೆರೆಕಂಡ ಎಲ್ಲಾ ಚಿತ್ರಮಂದಿರಗಳಲ್ಲಿ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ.
ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ, ನಟ ಸುದೀಪ್, ನಟಿ ರಮ್ಯಾ, ಪರಭಾಷೆ ನಟರಾದ ನಾಣಿ, ಪ್ರಭಾಸ್, ನಟಿಯರಾದ ಶಿಲ್ಪಾ ಶೆಟ್ಟಿ, ಕಂಗನಾ ರಣಾವತ್, ಊರ್ಮಿಳಾ ಮಾತೋಂಡ್ಕರ್ ಹೀಗೆ ಬಾಲಿವುಡ್ನ ಬಹುತೇಕ ಸ್ಟಾರ್ಸ್ ಈ ಸಿನಿಮಾವನ್ನು ವೀಕ್ಷಿಸಿ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.
ಇದೀಗ ಸೌತ್ ಸಿನಿಮಾ ಇಂಡಸ್ಟ್ರಿಯ ಸೂಪರ್ ಸ್ಟಾರ್ ನಟ ರಜನಿಕಾಂತ್ ಸಹ ಕಾಂತಾರ ಸಿನಿಮಾ ನೋಡಿ ಕೊಂಡಾಡಿದ್ದಾರೆ. 'ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಎಲ್ಲಾರೂ ಮೆಚ್ಚುವಂತಹ ಸಿನಿಮಾ ಮಾಡಿದ್ದಾರೆ. ನನಗೆ ಈ ಸಿನಿಮಾವನ್ನು ನೋಡಬೇಕಾದರೆ ರೋಮಾಂಚನವಾಯಿತು. ಒಬ್ಬ ಬರಹಗಾರ, ನಿರ್ದೇಶಕ ಮತ್ತು ನಟನಾಗಿ ರಿಷಬ್ ನಿಮಗೆ ಹ್ಯಾಟ್ಸಾಫ್ ಎಂದು ತಲೈವಾ ಟ್ವೀಟ್ ಮಾಡಿದ್ದಾರೆ.
ರಾಜಕುಮಾರ, ಕೆಜಿಎಫ್, ಯುವರತ್ನ ಮುಂತಾದ ಹಿಟ್ ಚಿತ್ರಗಳನ್ನು ನಿರ್ಮಿಸಿರುವ ವಿಜಯ್ ಕುಮಾರ್ ಕಿರಗಂದೂರು, ‘ಕಾಂತಾರ’ ಚಿತ್ರವನ್ನು ತಮ್ಮ ಹೊಂಬಾಳೆ ಫಿಲ್ಮ್ಸ್ ಅಡಿ ನಿರ್ಮಾಣ ಮಾಡಿದ್ದಾರೆ. ಕನ್ನಡ ಮಾತ್ರವಲ್ಲದೇ ಪರಭಾಷೆಗೆ ಡಬ್ಬಿಂಗ್ ಆಗಿ ಎಲ್ಲಾ ಭಾಷೆಯಲ್ಲೂ ಕಾಂತಾರ ಸಿನಿಮಾ ಬಿಡುಗಡೆ ಆಗಿ ಹೌಸ್ ಪುಲ್ ಪ್ರದರ್ಶನ ಕಾಣುತ್ತಿದೆ. ಇತ್ತೀಚೆಗೆ ಕೇರಳದ ಮಾಲ್ವೊಂದರಲ್ಲಿ ಹೌಸ್ ಫುಲ್ ಪ್ರದರ್ಶನ ಕಂಡಿತ್ತು. ದಕ್ಷಿಣ ಕನ್ನಡದ ವಿಶಿಷ್ಟ ಆಚರಣೆ ಮತ್ತು ಸಂಸ್ಕೃತಿಯನ್ನು ಕಟ್ಟಿಕೊಡುವುದರ ಜತೆಗೆ ಒಂದೊಳ್ಳೆ ಸಂದೇಶವನ್ನು ಈ ಚಿತ್ರ ಹೊಂದಿದೆ.
ಇದನ್ನೂ ಓದಿ:'ವಾವ್ ರಿಷಬ್ ಶೆಟ್ಟಿ, ಹ್ಯಾಟ್ಸ್ ಆಫ್! ಸಿನಿಮಾ ಅಂದ್ರೆ ಕಾಂತಾರ': ಕಂಗನಾ ಗುಣಗಾನ