ಕರ್ನಾಟಕ

karnataka

ETV Bharat / entertainment

ಮಕ್ಕಳೊಂದಿಗೆ ಆ್ಯನಿಮೇಟೆಡ್​ ಸಿನಿಮಾ ವೀಕ್ಷಿಸಿದ ಸನ್ನಿ ಲಿಯೋನ್ - ಲೈಟ್‌ಇಯರ್ ಆ್ಯನಿಮೇಟೆಡ್​ ಸಿನಿಮಾ

ಬಾಲಿವುಡ್ ನಟಿ ಸನ್ನಿ ಲಿಯೋನ್ ತಮ್ಮ ಮಕ್ಕಳಾದ ನಿಶಾ, ನೋವಾ ಮತ್ತು ಆಶರ್ ಜೊತೆ 'ಲೈಟ್‌ಇಯರ್' ಆ್ಯನಿಮೇಟೆಡ್​ ಸಿನಿಮಾ ವೀಕ್ಷಿಸಿದರು.

ಸನ್ನಿ ಲಿಯೋನ್
ಸನ್ನಿ ಲಿಯೋನ್

By

Published : Jun 17, 2022, 9:33 AM IST

ಬಾಲಿವುಡ್​ ಸುಂದರಿ ಸನ್ನಿ ಲಿಯೋನ್​​​​​ ಉತ್ತಮ ನಟಿ, ರೂಪದರ್ಶಿ ಮಾತ್ರವಲ್ಲ ಅದ್ಭುತ ತಾಯಿ ಕೂಡ ಹೌದು. ತಮ್ಮ ಬ್ಯುಸಿ ಲೈಫ್ ನಡುವೆಯೂ ಮಕ್ಕಳಿಗೆ ಟೈಮ್​ ಕೊಡುವುದನ್ನ ಮರೆತಿಲ್ಲ. ಸನ್ನಿ ತಮ್ಮ ಮಕ್ಕಳಾದ ನಿಶಾ, ನೋವಾ ಮತ್ತು ಆಶರ್ ಜೊತೆ 'ಲೈಟ್‌ಇಯರ್' ಆ್ಯನಿಮೇಟೆಡ್​ ಸಿನಿಮಾ ವೀಕ್ಷಿಸಿದರು. ಚಿತ್ರ ನೋಡಿ ಅನುಭವ ಹಂಚಿಕೊಂಡ ನಟಿ, ನನ್ನ ಮಕ್ಕಳು ಈ ಸಿನಿಮಾ ನೋಡಬೇಕೆಂದು ತುಂಬಾ ಕುತೂಹಲದಿಂದ ಇದ್ದರು. ನಾನು ಕೂಡ ಸಕತ್​ ಎಂಜಾಯ್​ ಮಾಡಿದೆ ಎಂದರು.

ಸಾಮಾಜಿಕ ಜಾಲತಾಣದಲ್ಲಿ ತಮ್ಮ ಮಾದಕ ಭಂಗಿಗಳ ಮೂಲಕ ನೋಡುಗರ ಎದೆಯಲ್ಲಿ ಕಿಚ್ಚು ಹಚ್ಚುವ ಕಲೆಯನ್ನು ಸನ್ನಿ ಚೆನ್ನಾಗಿಯೇ ಕರಗತ ಮಾಡಿಕೊಂಡಿದ್ದಾರೆ. ಪ್ರವಾಸ, ಫೋಟೋಶೂಟ್‌, ಹೊಸ ಉಡುಪು ಹಾಗೂ ಇನ್ನಿತರ ವಿಚಾರಗಳಿಗೆ ಸಂಬಂಧಿಸಿದ ಚಿತ್ರಗಳು, ವಿಡಿಯೋ ತುಣುಕುಗಳನ್ನು ಸೋಷಿಯಲ್ ಮೀಡಿಯಾದಲ್ಲಿ​ ಹಂಚಿಕೊಳ್ಳುವ ಮೂಲಕ ಅವರು ತಮ್ಮ ಅಭಿಮಾನಿಗಳೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದಾರೆ.

ಮಕ್ಕಳೊಂದಿಗೆ ಸಿನಿಮಾ ವೀಕ್ಷಿಸಿದ ಬಾಲಿವುಡ್​ ಸುಂದರಿ ಸನ್ನಿ ಲಿಯೋನ್

ಇದನ್ನೂ ಓದಿ:ಸನ್ನಿ ಲಿಯೋನ್​ ಜನ್ಮದಿನಕ್ಕೆ ರಕ್ತದಾನ, ಬಾಡೂಟ: ಮಂಡ್ಯ ಬಾಯ್ಸ್‌ ಪ್ರೀತಿಗೆ ಮನಸೋತ ನಟಿ

ABOUT THE AUTHOR

...view details