ಕರ್ನಾಟಕ

karnataka

ETV Bharat / entertainment

ಸನ್ನಿ ಡಿಯೋಲ್ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ನಟಿಸಲಿದ್ದಾರೆ: 'ಪುಷ್ಪ' ನಿರ್ಮಾಪಕರು! - Sunny Deol upcoming film

Sunny Deol Pan India movie: ಸನ್ನಿ ಡಿಯೋಲ್ ನಟನೆಯ ಮುಂದಿನ ಪ್ಯಾನ್ ಇಂಡಿಯಾ ಸಿನಿಮಾ ಕುರಿತು ಅಭಿಮಾನಿಗಳು ಕುತೂಹಲ ವ್ಯಕ್ತಪಡಿಸುತ್ತಿದ್ದಾರೆ.

Sunny Deol pan-India movie
ಸನ್ನಿ ಡಿಯೋಲ್ ಪ್ಯಾನ್ ಇಂಡಿಯಾ ಸಿನಿಮಾ

By ETV Bharat Karnataka Team

Published : Oct 14, 2023, 12:12 PM IST

ಸೂಪರ್ ಹಿಟ್ 'ಪುಷ್ಪ' ಚಿತ್ರ ತಯಾರಕರು ಬಂಡವಾಳ ಹೂಡಲಿರುವ ಚಿತ್ರಕ್ಕೆ ಬಾಲಿವುಡ್​ ನಟ ಸನ್ನಿ ಡಿಯೋಲ್ ಒಪ್ಪಿಗೆ ನೀಡಿದ್ದಾರೆ ಎಂದು ವರದಿಗಳು ಸೂಚಿಸಿವೆ. ಗದರ್ 2 ರ ಯಶಸ್ಸಿನಲ್ಲಿರುವ ಬಹುಬೇಡಿಕೆ ನಟ ಸನ್ನಿ ಡಿಯೋಲ್ ಮತ್ತೊಂದು ದೇಶಭಕ್ತಿಯ ಕುರಿತಾದ ಸಿನಿಮಾಗೆ ಗ್ರೀನ್​ ಸಿಗ್ನಲ್​​ ಕೊಟ್ಟಿದ್ದಾರೆ. ನಟ ಸಹಿ ಹಾಕಿರುವ ಸಿನಿಮಾ ಪ್ಯಾನ್ - ಇಂಡಿಯಾ ಪ್ರಾಜೆಕ್ಟ್ ಎಂಬುದು ಕುತೂಹಲಕಾರಿ ವಿಷಯ.

ಗದರ್ 2 ಸಿನಿಮಾ ಸೂಪರ್ ಹಿಟ್ ಆಗಿದ್ದು, ನಾಯಕ ನಟ ಸನ್ನಿ ಡಿಯೋಲ್ ಅವರಿಗೆ ಹಲವು ಆಫರ್​ಗಳು ಬಂದಿವೆ. ಚಿತ್ರ ನಿರ್ಮಾಪಕರುಗಳು ನಟನ ಬಾಕ್ಸ್ ಆಫೀಸ್ ಸಕ್ಸಸ್​ ಗುರುತಿಸಿ ಹಲವು ಆಫರ್​ ಕೊಟ್ಟಿದ್ದಾರೆ. ಆದಾಗ್ಯೂ, ನಟ ತಮ್ಮ ಮುಂದಿನ ಪ್ರಾಜೆಕ್ಟ್​ಗೆ ಅವರಸರಪಟ್ಟಂತೆ ತೋರುತ್ತಿಲ್ಲ. ಯಶಸ್ಸಿನಲೆಯಲ್ಲಿ ತೇಲುತ್ತಿರುವ ನಟ ತಮ್ಮ ಮುಂದಿನ ಹೆಜ್ಜೆಯನ್ನು ಎಚ್ಚರಿಕೆಯಿಂದ ಪರಿಗಣಿಸಲು ಕೊಂಚ ಸಮಯ ತೆಗೆದುಕೊಂಡರು. ಅಂತಿಮವಾಗಿ ಇದೀಗ ಸಿನಿಮಾವೊಂದಕ್ಕೆ ಗ್ರೀನ್​ ಸಿಗ್ನಲ್​ ಕೊಟ್ಟಿದ್ದಾರೆ ಎಂದು ವರದಿಗಳು ಹೇಳಿವೆ.

ವರದಿಗಳ ಪ್ರಕಾರ, ನಟ ಸನ್ನಿ ಡಿಯೋಲ್​ ಅವರ ಮುಂದಿನ ಪ್ರಾಜೆಕ್ಟ್​​ ಪ್ಯಾನ್ ಇಂಡಿಯಾ ಮಟ್ಟದ್ದು. ಗಡಿ ದಾಟಿ, ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರನ್ನು ತಲುಪುವ ಗುರಿ ಹೊಂದಿದ್ದಾರೆ. ಟಾಲಿವುಡ್​ ಸೂಪರ್​ ಸ್ಟಾರ್ ಅಲ್ಲು ಅರ್ಜುನ್ ಅಭಿನಯದ ಪುಷ್ಪ ಸರಣಿ ಸಿನಿಮಾಗಳ ಹಿಂದಿರುವ ಮೈತ್ರಿ ಮೂವಿ ಮೇಕರ್ಸ್‌ ಜೊತೆ ಕೆಲಸ ಮಾಡಲಿದ್ದಾರೆ. ಪ್ರಸ್ತುತ ನಿರ್ದೇಶಕ ಕಬೀರ್ ಖಾನ್ ಜೊತೆ ಸನ್ನಿ ಡಿಯೋಲ್​ ಹೆಸರು ಕೇಳಿ ಬರುತ್ತಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

ಕಥಾಹಂದರ ಗಮನಿಸುವುದಾದರೆ, ಚಿತ್ರ ದೇಶಭಕ್ತಿ ವಿಷಯದ ಸುತ್ತ ಸುತ್ತುತ್ತದೆ. ಗದರ್ 2ರ ಯಶಸ್ಸನ್ನು ಬಂಡವಾಳವಾಗಿಟ್ಟುಕೊಂಡು, ಮುಂದಿನ ಹೆಜ್ಜೆ ಇಡಲಾಗುತ್ತಿದೆ. ರಾಷ್ಟ್ರವ್ಯಾಪಿ ಪ್ರೇಕ್ಷಕರೊಂದಿಗೆ ಪ್ರತಿಧ್ವನಿಸುವ ದೇಶಭಕ್ತಿಯ ಪ್ಯಾನ್ ಇಂಡಿಯಾ ಸಿನಿಮಾ ರಚಿಸುವುದು ಚಿತ್ರತಂಡದ ಗುರಿ.

ಇದನ್ನೂ ಓದಿ:ಭಾರತ ಪಾಕಿಸ್ತಾನ ಪಂದ್ಯ: ಅಹಮದಾಬಾದ್‌ ತಲುಪಿದ ಸಚಿನ್​ ತೆಂಡೂಲ್ಕರ್, ಅನುಷ್ಕಾ ಶರ್ಮಾ, ಅರಿಜಿತ್ ಸಿಂಗ್​ - ವಿಡಿಯೋ!

ಸನ್ನಿ ಡಿಯೋಲ್‌ ಮುಖ್ಯಭೂಮಿಕೆಯ ಗದರ್ 2 ಚಿತ್ರಮಂದಿಗಳಲ್ಲಿ ಧೂಳೆಬ್ಬಿಸಿತ್ತು. ದೇಶೀಯ ಬಾಕ್ಸ್ ಆಫೀಸ್‌ನಲ್ಲಿ 525 ಕೋಟಿ ರೂ. ಗಳಿಸಿತ್ತು. ಭಾರತದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಹಿಂದಿ ಚಲನಚಿತ್ರ ಎಂಬ ದಾಖಲೆಯನ್ನು ಹೊಂದಿತ್ತು. ಶಾರುಖ್ ಖಾನ್ ಅವರ ಪಠಾಣ್ ಅನ್ನು ಮೀರಿಸಿತ್ತು. ಆದರೆ, ನಂತರ ಬಂದ ಕಿಂಗ್ ಖಾನ್ ಅವರ ಜವಾನ್ ಸಿನಿಮಾ ಗದರ್ 2 ದಾಖಲೆ ಪುಡಿಗಟ್ಟಿ ಮೊದಲ ಸ್ಥಾನಕ್ಕೇರಿತು. ಇದೀಗ ಪ್ಯಾನ್ ಇಂಡಿಯಾ ಸಿನಿಮಾ ಕುರಿತು ಸುದ್ದಿಗಳು ಹರಿದಾಡುತ್ತಿದ್ದು, ಅಭಿಮಾನಿಗಳು ಕುತೂಹಲ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ:Salaar VS Dunki: ಒಂದೇ ದಿನ ಶಾರುಖ್​​ - ಪ್ರಭಾಸ್ ಸಿನಿಮಾ ರಿಲೀಸ್​​; ಬಾಕ್ಸ್ ಆಫೀಸ್​ ಪೈಪೋಟಿ ಪಕ್ಕಾ!

ABOUT THE AUTHOR

...view details