ಕರ್ನಾಟಕ

karnataka

ETV Bharat / entertainment

ಶೀಘ್ರದಲ್ಲೇ ಅಥಿಯಾ-ರಾಹುಲ್​​ ಮದುವೆ: ನಟ ಸುನೀಲ್​ ಶೆಟ್ಟಿ - KL Rahul marriage

ಮಾಧ್ಯಮದವರು ಅಥಿಯಾ ಮತ್ತು ರಾಹುಲ್​ ಮದುವೆ ಬಗ್ಗೆ ಪ್ರಶ್ನೆ ಎತ್ತಿದ್ದು, ಇಬ್ಬರೂ ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎಂದು ಬಾಲಿವುಡ್​ ನಟ ಸುನೀಲ್​ ಶೆಟ್ಟಿ ತಿಳಿಸಿದ್ದಾರೆ.

sunil shetty confirms his daughter Athiya marriage with KL Rahul
ಶೀಘ್ರದಲ್ಲೇ ಅಥಿಯಾ ರಾಹುಲ್​​ ಮದುವೆ

By

Published : Nov 20, 2022, 3:37 PM IST

ಕ್ರಿಕೆಟ್​ ಆಟಗಾರ ಕೆ ಎಲ್​​ ರಾಹುಲ್​​ ಮತ್ತು ನಟಿ ಅಥಿಯಾ ಶೆಟ್ಟಿ ವಿವಾಹವನ್ನು ಹಿರಿಯ ನಟ ಮತ್ತು ಅಥಿಯಾ ಶೆಟ್ಟಿ ಅವರ ತಂದೆ ಸುನೀಲ್​ ಶೆಟ್ಟಿ ಖಚಿತಪಡಿಸಿದ್ದಾರೆ.

ಬಾಲಿವುಡ್ ನಟ ಸುನೀಲ್ ಶೆಟ್ಟಿ ತಮ್ಮ ಪುತ್ರಿ ಅಥಿಯಾ ಶೆಟ್ಟಿ ಮತ್ತು ಗೆಳೆಯ ರಾಹುಲ್​​ ಮದುವೆಯ ಬಗ್ಗೆ ಇತ್ತೀಚಿನ ಸಮಾರಂಭವೊಂದರಲ್ಲಿ ಮಾತನಾಡಿದ್ದಾರೆ. ಬಹುದಿನಗಳಿಂದ ಕೇಳಿಬರುತ್ತಿದ್ದ ಅಥಿಯಾ ಹಾಗೂ ಕೆಎಲ್ ರಾಹುಲ್ ಮದುವೆಯ ಊಹಾಪೋಹಗಳಿಗೆ ತೆರೆ ಎಳೆದು, ವಿವಾಹ ನಡೆಯುವುದು ಖಚಿತ ಎಂದು ತಿಳಿಸಿದ್ದಾರೆ.

ಪುತ್ರಿ ಅಥಿಯಾ ಶೆಟ್ಟಿಯೊಂದಿಗೆ ಸುನೀಲ್​ ಶೆಟ್ಟಿ

ಮಾಧ್ಯಮದವರು ಅಥಿಯಾ ಮತ್ತು ರಾಹುಲ್​ ಮದುವೆ ಬಗ್ಗೆ ಪ್ರಶ್ನೆ ಎತ್ತಿದ್ದು, ಇಬ್ಬರೂ ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎಂದು ನಟ ಸುನೀಲ್​ ಶೆಟ್ಟಿ ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ:ಕನ್ನಡತಿ ಅನುಷಾ ಶೆಟ್ಟಿಯೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟ ನಾಗಶೌರ್ಯ

ABOUT THE AUTHOR

...view details