ನವದೆಹಲಿ: ವಂಚನೆ ಪ್ರಕರಣದಲ್ಲಿ ಬಂಧಿತನಾಗಿರುವ ಸುಕೇಶ್ ಚಂದ್ರಶೇಖರ್ ಕುರಿತಂತೆ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಮಹತ್ವದ ಮಾಹಿತಿ ಬಹಿರಂಗ ಪಡಿಸಿದ್ದಾರೆ. ಅಲ್ಲದೇ, ಈ ಸುಕೇಶ್ ಚಂದ್ರಶೇಖರ್ ನನ್ನ ಭಾವನೆಗಳೊಂದಿಗೆ ಆಟವಾಡಿ, ನನ್ನ ಜೀವನವನ್ನೇ ನರಕ ಮಾಡಿದ್ದಾನೆ ಎಂದು ನಟಿ ತಮ್ಮ ಅಳಲು ತೋಡಿಕೊಂಡಿದ್ದಾರೆ. ಈತನ ಬಗ್ಗೆ ನಾನು ಮೋಸ ಹೋಗಿದ್ದೇನೆಂದೂ ಜಾಕ್ವೆಲಿನ್ ಹೇಳಿದ್ದಾರೆ.
ಇದನ್ನೂ ಓದಿ:ಪವನ್ ಕಲ್ಯಾಣ್ ಚಿತ್ರದಿಂದ ಜಾಕ್ವೆಲಿನ್ ಫರ್ನಾಂಡೀಸ್ಗೆ ಗೇಟ್ಪಾಸ್?
ವಂಚಕ ಸುಕೇಶ್ ಚಂದ್ರಶೇಖರ್ನಿಂದ ದುಬಾರಿ ಉಡುಗೊರೆ ಪಡೆದ ಆರೋಪದ ಮೇಲೆ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಜಾರಿ ನಿರ್ದೇಶನಾಲಯ (ಇಡಿ)ದ ವಿಚಾರಣೆ ಎದುರಿಸುತ್ತಿದ್ದಾರೆ. ಅಲ್ಲದೇ, ಈ ಬಗ್ಗೆ ದೆಹಲಿಯ ಪಟಿಯಾಲ ಹೌಸ್ ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದ್ದು, ಬುಧವಾರ ನಟಿ ಜಾಕ್ವೆಲಿನ್ ಫರ್ನಾಂಡಿಸ್, ಸುಕೇಶ್ ಕುರಿತಾಗಿ ಪರಿಚಯ ಮತ್ತು ಆತನಿಂದ ತಾನು ಅನುಭವಿಸಿದ ಕಷ್ಟದ ಕುರಿತು ನ್ಯಾಯಾಲಯಕ್ಕೆ ವಿವರಿಸಿದ್ದಾರೆ.
ಸರ್ಕಾರಿ ಅಧಿಕಾರಿ ಎಂದು ಪರಿಚಯ: ಸುಕೇಶ್ ಚಂದ್ರಶೇಖರ್ ನನ್ನು ಸರ್ಕಾರಿ ಅಧಿಕಾರಿ ಎಂದು ಪಿಂಕಿ ಇರಾನಿ ನನಗೆ ಪರಿಚಯಿಸಿದ್ದರು ಎಂದು ನಟಿ ಜಾಕ್ವೆಲಿನ್ ಹೇಳಿದ್ದಾರೆ. ಅಲ್ಲದೇ, ಇದೇ ವೇಳೆ, ಸುಕೇಶ್ ತನ್ನನ್ನು ತಾನು ಸನ್ ಟಿವಿಯ ಮಾಲೀಕ ಎಂದು ಹೇಳಿಕೊಂಡು ಪರಿಚಯಿಸಿಕೊಂಡಿದ್ದ. ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿ.ಜಯಲಲಿತಾ ಅವರು ತಮ್ಮ ಚಿಕ್ಕಮ್ಮ ಎಂದು ವಂಚಕ ಹೇಳಿಕೊಂಡಿದ್ದ ಎಂದು ಜಾಕ್ವೆಲಿನ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ನಾನು ದರೋಡೆಕೋರನಾಗಿದ್ದರೆ, ನನ್ನಿಂದ 50 ಕೋಟಿ ಪಡೆದಿದ್ದು ಯಾಕೆ: ಕೇಜ್ರಿವಾಲ್ ವಿರುದ್ಧ ಸುಕೇಶ್ ಬಾಂಬ್
ಅಲ್ಲದೇ, ಈ ಚಂದ್ರಶೇಖರ್ ನನ್ನ ದೊಡ್ಡ ಅಭಿಮಾನಿ ಎಂದೂ ಹೇಳಿದ್ದ. ನಾನು ದಕ್ಷಿಣ ಭಾರತದ ಚಲನಚಿತ್ರಗಳಲ್ಲಿ ಅಭಿನಯಿಸಬೇಕು ಎಂದು ಕೇಳಿಕೊಂಡಿದ್ದ. ತಾನು (ಸುಕೇಶ್ ಚಂದ್ರಶೇಖರ್) ಸನ್ ಟಿವಿಯ ಮಾಲೀಕನಾಗಿ ಅನೇಕ ಯೋಜನೆಗಳನ್ನು ಹೊಂದಿರುವುದಾಗಿ ತಿಳಿಸಿದ್ದ. ಇಷ್ಟೇ ಅಲ್ಲ, ನಾವಿಬ್ಬರು ಸಹ ದಕ್ಷಿಣ ಭಾರತದ ನಿಸಿಮಾಗಳಲ್ಲಿ ಒಟ್ಟಿಗೆ ಕೆಲಸ ಮಾಡಲು ಸಹ ಪ್ರಯತ್ನಿಸಬೇಕೆಂದು ವಂಚಕ ಹೇಳಿದ್ದ ಎಂಬುವುದಾಗಿ ನಟಿ ಜಾಕ್ವೆಲಿನ್ ಬಹಿರಂಗ ಪಡಿಸಿದ್ದಾರೆ.
ನನ್ನ ವೃತ್ತಿ ಜೀವನವೇ ಹಾಳು: ವಂಚಕ ಸುಕೇಶ್ ಚಂದ್ರಶೇಖರ್ ನನ್ನನ್ನು ದಾರಿ ತಪ್ಪಿಸಿದ್ದಾನೆ ಎಂದು ನಟಿ ಹೇಳಿದ್ದು, ಈತ ನನ್ನ ವೃತ್ತಿ ಹಾಗೂ ಜೀವನೋಪಾಯವನ್ನೇ ಹಾಳು ಮಾಡಿದ್ದಾನೆ ಎಂದು ಅಸಮಾಧಾನ ಹೊರಹಾಕಿದ್ದಾರೆ. ಗೃಹ ಮತ್ತು ಕಾನೂನು ಸಚಿವಾಲಯದ ಹಿರಿಯ ಅಧಿಕಾರಿಗಳ ಸೋಗು ಹಾಕಿಕೊಂಡಿದ್ದ ಕಾರಣಕ್ಕಾಗಿ ಸುಕೇನ್ನನ್ನು ಬಂಧಿಸದ ನಂತರವೇ, ಆತ ನಿಜವಾದ ಬಣ್ಣ ನನಗೆ ತಿಳಿಯಿತು ಎಂದು ಜಾಕ್ವೆಲಿನ್ ಹೇಳಿಕೊಂಡಿದ್ದಾರೆ.
ವಂಚನಕ ನಿಜವಾದ ಹೆಸರೂ ಗೊತ್ತಿರಲಿಲ್ಲ: ಈ ಸುಕೇಶ್ ಚಂದ್ರಶೇಖರ್ನ ನಿಜವಾದ ಹೆಸರು ಸಹ ಆರಂಭದಲ್ಲಿ ನನಗೆ ಗೊತ್ತಿರಲಿಲ್ಲ ಎಂದು ನಟಿ ಹೇಳಿದ್ದಾರೆ. ಆತನ ಕ್ರಿಮಿನಲ್ ಹಿನ್ನೆಲೆಯ ಅರಿವಾದ ಬಳಿಕವೇ ಆತನ ನಿಜವಾದ ಹೆಸರು ತಿಳಿಯಿತು. ಚಂದ್ರಶೇಖರ್ನ ಚಟುವಟಿಕೆ ಮತ್ತು ಹಿನ್ನೆಲೆಯ ಬಗ್ಗೆ ಪಿಂಕಿ ಇರಾನಿಗೆ ತಿಳಿದಿತ್ತು. ಆದರೆ, ಇದನ್ನು ನನ್ನ ಮುಂದೆ ಎಂದಿಗೂ ಬಹಿರಂಗ ಪಡಿಸಲಿಲ್ಲ. ಇದೇ ಕಾರಣದಿಂದಾಗಿ ತಾನು ಮೋಸ ಹೋಗಿದ್ದೇನೆ ಎಂದು ಜಾಕ್ವೆಲಿನ್ ಫರ್ನಾಂಡಿಸ್ ತಿಳಿಸಿದ್ದಾರೆ.
200 ಕೋಟಿ ಸುಲಿಗೆ ಆರೋಪ ಪ್ರಕರಣ: ಈ ಸುಕೇಶ್ ಚಂದ್ರಶೇಖರ್ ವಿರುದ್ಧ ರಾಜಕಾರಣಿಗಳು, ಸೆಲೆಬ್ರಿಟಿಗಳು ಮತ್ತು ಉದ್ಯಮಿಗಳಿಂದ ಹಣ ವಸೂಲಿ ಮಾಡುತ್ತಿದ್ದ ಆರೋಪ ಇದೆ. ರಾನ್‌ಬಾಕ್ಸಿ ಫಾರ್ಮಾ ಕಂಪನಿಯ ಮಾಜಿ ಮಾಲೀಕ ಶಿವಿಂದರ್ ಮೋಹನ್ ಸಿಂಗ್ ಅವರ ಪತ್ನಿ ಅದಿತಿ ಸಿಂಗ್ ಅವರಿಗೆ 200 ಕೋಟಿ ರೂ. ಮೋಸ ಮಾಡಿದ್ದಾನೆ ಎನ್ನಲಾಗಿದೆ. ಇದೇ ಹಣದಲ್ಲಿ ಆರೋಪಿಯು ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರಿಗೆ ದುಬಾರಿ ಉಡುಗೊರೆಗಳನ್ನು ಕಳುಹಿಸಿದ್ದ ಮತ್ತು ಮುಂಬೈನಿಂದ ಚೆನ್ನೈಗೆ ಚಾರ್ಟರ್ಡ್ ಫ್ಲೈಟ್ ಬುಕ್ ಮಾಡಿದ್ದ ಎಂದು ಆರೋಪಿಸಲಾಗಿದೆ. ಇದೇ ವಿಚಾರವಾಗಿ ನಟಿ ಜಾಕ್ವೆಲಿನ್ ವಿಚಾರಣೆ ಎದುರಿಸುತ್ತಿದ್ದಾರೆ.
ಜನವರಿ 25ಕ್ಕೆ ಕೋರ್ಟ್‌ನಲ್ಲಿ ವಿಚಾರಣೆ: ಸುಕೇಶ್ ಚಂದ್ರಶೇಖರ್ ವಂಚನೆ ಪ್ರಕರಣದಲ್ಲಿ ಸಿಲುಕಿರುವ ನಟಿ ಜಾಕ್ವೆಲಿನ್ಗೆ ವಿದೇಶಕ್ಕೆ ಹೋಗಲು ನ್ಯಾಯಾಲಯ ಅನುಮತಿ ಬೇಕಾಗಿದೆ. ಹೀಗಾಗಿಯೇ ನ್ಯಾಯಾಲಯದ ಮುಂದೆ ವೃತ್ತಿ ಜೀವನ ಕೆಲಸಕ್ಕಾಗಿ ಜನವರಿ 27ರ ನಂತರ ದುಬೈಗೆ ತೆರಳಲು ಅನುಮತಿ ಕೋರಿ ನಟಿ ಸಲ್ಲಿಸಿದ್ದಾರೆ. ಈ ವಿಷಯವಾಗಿ ಜಾರಿ ನಿರ್ದೇಶನಾಲಯಕ್ಕೆ ಜನವರಿ 16ರಂದು ನೋಟಿಸ್ ನೀಡಿದ್ದು, ಮುಂದಿನ ವಿಚಾರಣೆಯನ್ನು ಜನವರಿ 25ಕ್ಕೆ ನಡೆಯಲಿದೆ.
ಇದನ್ನೂ ಓದಿ:ಮನಿ ಲಾಂಡರಿಂಗ್ ಪ್ರಕರಣ: ವಿದೇಶಕ್ಕೆ ತೆರಳಲು ನ್ಯಾಯಾಲಯದ ಅನುಮತಿ ಕೋರಿದ ನಟಿ ಜಾಕ್ವೆಲಿನ್