ಕರ್ನಾಟಕ

karnataka

ETV Bharat / entertainment

ಈಸ್ಟರ್‌ಗೆ ಶುಭ ಕೋರಿ ಜೈಲಿನಿಂದಲೇ ಜಾಕ್ವೆಲಿನ್‌ಗೆ ಪ್ರೇಮ ಪತ್ರ ಬರೆದ ಸುಕೇಶ್ ಚಂದ್ರಶೇಖರ್ - ಸುಕೇಶ್ ಚಂದ್ರಶೇಖರ್ ಪತ್ರ

ಬಹುಕೋಟಿ ವಂಚನೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ಸುಕೇಶ್ ಚಂದ್ರಶೇಖರ್, ಈಸ್ಟರ್ ಆಚರಣೆಯ ಪ್ರಯುಕ್ತ ನಟಿ ಜಾಕ್ವೆಲಿನ್​ ಫರ್ನಾಂಡಿಸ್‌ಗೆ ಪತ್ರ ಬರೆದಿದ್ದಾನೆ.

Sukesh Chandrashekhar  Jacqueline Fernandez
ಸುಕೇಶ್ ಚಂದ್ರಶೇಖರ್ ಜಾಕ್ವೆಲಿನ್​ ಫರ್ನಾಂಡಿಸ್

By

Published : Apr 9, 2023, 3:35 PM IST

ಕೋಟ್ಯಂತರ ರೂಪಾಯಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಸುಕೇಶ್ ಚಂದ್ರಶೇಖರ್ ದೆಹಲಿಯ ತಿಹಾರ್ ಜೈಲಿನಲ್ಲಿದ್ದಾನೆ. ಪ್ರಕರಣದ ತನಿಖೆ ನಡೆಯುತ್ತಿದೆ. ಈ ಕೇಸ್​ನಲ್ಲಿ ಬಾಲಿವುಡ್​ ನಟಿ ಜಾಕ್ವೆಲಿನ್​ ಫರ್ನಾಂಡಿಸ್ ಕೂಡ ಆರೋಪಿಯಾಗಿದ್ದಾರೆ. ಇದೀಗ ಈಸ್ಟರ್‌ ಹಿನ್ನೆಲೆಯಲ್ಲಿ ಜೈಲಿನಿಂದಲೇ ಜಾಕ್ವೆಲಿನ್​ ಮೇಲೆ ಪ್ರೀತಿಯ ಮಳೆ ಸುರಿಸುವ ವಂಚಕ ಸುಕೇಶ್ ಚಂದ್ರಶೇಖರ್ ನಟಿಗೆ ಮತ್ತೊಂದು ಪತ್ರ ಬರೆದಿದ್ದಾನೆ.

''ಬೇಬಿ ಹ್ಯಾಪಿ ಈಸ್ಟರ್. ಇದು ನಿಮ್ಮ ಮೆಚ್ಚಿನ ಹಬ್ಬ. ಈಸ್ಟರ್ ಎಗ್ಸ್​​ ಮೇಲಿನ ನಿಮ್ಮ ಪ್ರೀತಿ ನನಗೆ ತಿಳಿದಿದೆ. ನಾನು ಅವೆಲ್ಲವನ್ನೂ ಬಹಳ ಮಿಸ್​ ಮಾಡಿಕೊಳ್ಳುತ್ತಿದ್ದೇನೆ. ಆ ಈಸ್ಟರ್ ಎಗ್ಸ್​​ ಒಡೆದು ಅದರಲ್ಲಿನ ಮಿಠಾಯಿ ತಿನ್ನುವ ಕ್ಷಣ, ನಿಮ್ಮೊಳಗಿರುವ ಆ ಮಗು ಮನಸ್ಸು, ಈ ಎಲ್ಲಾ ಕ್ಷಣಗಳನ್ನು ನಾನು ಕಳೆದುಕೊಂಡಿದ್ದೇನೆ."

"ನೀವು ಎಷ್ಟು ಸುಂದರ ಎಂಬ ಬಗ್ಗೆ ನಿಮಗೆ ತಿಳಿದಿದೆಯೇ?. ಈ ಗ್ರಹದಲ್ಲಿ ನಿಮ್ಮಷ್ಟು ಸುಂದರಿ ಯಾರೂ ಇಲ್ಲ. ನನ್ನ ಮುದ್ದು ಮೊಲ. ನಾನು ನಿಮ್ಮನ್ನು ಬಹಳ ಪ್ರೀತಿಸುತ್ತೇನೆ. ಅದೇನೆ ಪರಿಸ್ಥಿತಿ ಎದುರಾದರು ನೀವು ನನ್ನವರು, ಎಂದೆಂದಿಗೂ. ಈ ಹಂತವು ಒಳ್ಳೆಯದಕ್ಕಾಗಿ ಕೊನೆಗೊಳ್ಳುತ್ತದೆ. ಎಲ್ಲರೂ ಅದನ್ನು ನೋಡಲಿದ್ದಾರೆ. ಏನೇ ಬರಲಿ, ಎಲ್ಲವೂ ಸರಿಯಾಗಲಿದೆ ಎಂದು ನಾನು ಭರವಸೆ ಕೊಡುತ್ತೇನೆ'' ಎಂದು ಸುಕೇಶ್ ಪತ್ರದಲ್ಲಿ ಬರೆದಿದ್ದಾನೆ.

ಇತ್ತೀಚಿನ ಜಾಹೀರಾತೊಂದರಲ್ಲಿ ನಿಮ್ಮನ್ನು ನೋಡಿದ ಬಳಿಕ ಮತ್ತಷ್ಟು ಮಿಸ್​ ಮಾಡಿಕೊಳ್ಳುತ್ತಿದ್ದೇನೆ. ಆ ಜಾಹೀರಾತು ನಮ್ಮ ಬಗ್ಗೆಯೇ ಇದ್ದಂತಿದೆ. ನಾನು ನಿಮ್ಮ ಬಗ್ಗೆ ಯೋಚಿಸದ ಕ್ಷಣವಿಲ್ಲ. ನೀವೂ ಕೂಡ ಇದೇ ಪರಿಸ್ಥಿತಿ ಎದುರಿಸುತ್ತಿದ್ದೀರಿ ಎಂದು ತಿಳಿದಿದೆ. ನಿಮ್ಮ ಅತ್ಯಂತ ಸುಂದರವಾದ ಹೃದಯದಲ್ಲಿ ಏನಿದೆ ಎಂದು ನನಗೆ ತಿಳಿದಿದೆ. ಮುಂದಿನ ಈಸ್ಟರ್ ನಿಮಗೆ ಅತ್ಯುತ್ತಮವಾಗಲಿದೆ ಎಂದಿದ್ದಾನೆ.

ಇದನ್ನೂ ಓದಿ:ವೀಕೆಂಡ್​ ವಿತ್​ ರಮೇಶ್..​​ ಸಾಧಕರ ಸೀಟ್​ಗೆ ಮತ್ತಷ್ಟು ಮೆರುಗು ತಂದುಕೊಟ್ಟ ಡಾ. ಮಂಜುನಾಥ್​

ಸುಕೇಶ್ ಚಂದ್ರಶೇಕರ್​, ನಟಿ ಜಾಕ್ವೆಲಿನ್ ಫರ್ನಾಂಡಿಸ್ ಮೇಲೆ ನಿರಂತರವಾಗಿ ಪ್ರೀತಿ ವ್ಯಕ್ತಪಡಿಸುತ್ತಿದ್ದಾನೆ. ಈ ಹಿಂದೆ ನಾವು ಡೇಟಿಂಗ್​ ನಡೆಸುತ್ತಿದ್ದೇವೆಂದು ಹೇಳಿಕೊಂಡಿದ್ದ. ಆದ್ರೆ ಆತನ ಹೇಳಿಕೆಗಳನ್ನು ನಟಿ ತಿರಸ್ಕರಿಸಿದ್ದರು. ಇದೀಗ ಈಸ್ಟರ್​ಗೆ ಶುಭ ಕೋರಿರುವ ಆತ, ತಾಯಿ ತಂದೆ ಮತ್ತು ಕುಟುಂಬಕ್ಕೆ ದೇವರು ಆಶೀರ್ವದಿಸಲಿ. ನಾನು ನಿಮ್ಮನ್ನು ಪ್ರೀತಿಸುತ್ತೇನೆ ನನ್ನ ಜಾಕಿ ಬೊಮ್ಮ ಎಂದು ತಿಳಿಸಿದ್ದಾನೆ.

ಇದನ್ನೂ ಓದಿ:ಬಾಕ್ಸ್​ ಆಫೀಸ್​ನಲ್ಲಿ ಓಟ ಮುಂದುವರಿಸಿದ 'ಭೋಲಾ'.. ಯಶಸ್ಸಿನಲೆಯಲ್ಲಿ ಅಜಯ್ ದೇವ್​​ಗನ್ ತಂಡ

ಮಾರ್ಚ್​ ಕೊನೆಯಲ್ಲಿಯೂ ಪತ್ರವೊಂದನ್ನು ಬರೆದಿದ್ದ. ಆತನ ಜನ್ಮದಿನದ ಹಿನ್ನೆಲೆಯಲ್ಲಿ ಪ್ರೇಮ ಪತ್ರ ಬರೆದಿದ್ದ ಆತ, ನಟಿಯನ್ನು ಎಷ್ಟರ ಮಟ್ಟಿಗೆ ಪ್ರೀತಿಸುತ್ತಾನೆ ಎಂಬುದನ್ನು ಬಹಿರಂಗಪಡಿಸಿದ್ದ. ಪ್ರತೀ ಕ್ಷಣವೂ ನಿಮ್ಮನ್ನು ಮಿಸ್​ ಮಾಡಿಕೊಳ್ಳುತ್ತಿದ್ದೇನೆ. ನಿಮ್ಮ ಮೇಲಿನ ಪ್ರೀತಿ ಕಿಂಚಿತ್ತೂ ಕಡಿಮೆಯಾಗಿಲ್ಲ. ನೀವು ನನ್ನನ್ನು ಪ್ರೀತಿಸುತ್ತೀರೆಂಬುದು ನನಗೆ ತಿಳಿದಿದೆ. ಆ ಬಗ್ಗೆ ತಿಳಿಯಲು ನನಗ್ಯಾವ ಸಾಕ್ಷಿಯೂ ಬೇಕಿಲ್ಲ ಎಂದು ತಿಳಿಸಿದ್ದ.

ABOUT THE AUTHOR

...view details