ಸೂಪರ್‌ಸ್ಟಾರ್ ಶಾರುಖ್ ಖಾನ್ ಪುತ್ರಿ ಸುಹಾನಾ ಖಾನ್ ಮತ್ತು ಹಿರಿಯ ನಟ ಅಮಿತಾಭ್ ಬಚ್ಚನ್ ಮೊಮ್ಮಗ ಅಗಸ್ತ್ಯ ನಂದಾ ತಮ್ಮ ಚೊಚ್ಚಲ ಚಿತ್ರ 'ದಿ ಆರ್ಚೀಸ್' ಬಿಡುಗಡೆಗೆ ಸಜ್ಜಾಗಿದ್ದಾರೆ. ಇನ್ನು ನಾಲ್ಕು ದಿನಗಳಲ್ಲಿ ಸಿನಿಮಾ ಒಟಿಟಿ ವೇದಿಕೆಯಲ್ಲಿ ಬಿಡುಗಡೆ ಆಗಲಿದ್ದು, ಚಿತ್ರತಂಡ ಈಗಾಗಲೇ ಪ್ರಚಾರ ಪ್ರಾರಂಭಿಸಿದೆ. ಇತ್ತೀಚೆಗೆ ತಮಾಷೆಯ ವಿಡಿಯೋವೊಂದು ಅನಾವರಣಗೊಂಡಿದ್ದು, ರೂಮರ್ ಲವ್ಬರ್ಡ್ಸ್ ಪರಸ್ಪರ ಮನರಂಜನಾ ಕ್ಷಣವನ್ನು ಹಂಚಿಕೊಂಡಿದ್ದಾರೆ. ಈ ಹಾಸ್ಯವು ಅವರ ವ್ಯಕ್ತಿತ್ವ ಮತ್ತು ಸೌಹಾರ್ದತೆಯ ಮೇಲೆ ಬೆಳಕು ಚೆಲ್ಲಿದೆ. ಬಿಗ್ ಬಿ ಮೊಮ್ಮಗ ಮತ್ತು ಎಸ್ಆರ್ಕೆ ಪುತ್ರಿ ಡೇಟಿಂಗ್ನಲ್ಲಿದ್ದಾರೆಂಬುದು ನೆಟ್ಟಿಗರ ಒಂದು ಊಹೆ.
ದಿ ಆರ್ಚೀಸ್‌ನ ಅಧಿಕೃತ ಅಧಿಕೃತ ಇನ್ಸ್ಟಾಗ್ರಾಮ್ನಲ್ಲಿ ಎಂಟರ್ಟೈನಿಂಗ್ ಆಗಿರೋ ವಿಡಿಯೋವೊಂದನ್ನು ಅನಾವರಣಗೊಳಿಸಲಾಗಿದೆ. ಸುಹಾನಾ ಖಾನ್ ಮತ್ತು ಅಗಸ್ತ್ಯ ನಂದಾ ಹಾಸ್ಯಮಯ ಕ್ಷಣಗಳನ್ನು ಹಂಚಿಕೊಂಡಿದ್ದಾರೆ. ಮಾತುಕತೆಯ ಸಂದರ್ಭ ಅಗಸ್ತ್ಯ ಅವರು ಸುಹಾನಾರಿಗೆ ತಮಾಷೆಯಾಗಿ 'ಬಿಗ್ ಗಾಸಿಪ್ ಕ್ವೀನ್' ಎಂದು ಹೇಳಿ ಗೇಲಿ ಮಾಡಿದ್ದಾರೆ.
ಚಾರ್ಮಿಂಗ್, ಮೂಡಿ, ಸರ್ಕಾಸ್ಟಿಕ್, ಲೇಸಿಯಂತಹ ಪದಗಳಿಂದ ಲೇಬಲ್ ಮಾಡಲಾದ ಪದಾರ್ಥಗಳನ್ನು ಬಳಸಿಕೊಂಡು ಈ ಜೋಡಿ ಮಿಲ್ಕ್‌ಶೇಕ್ ಮಾಡುವ ಆಟವಾಡಿದ್ದಾರೆ. ಆ ಸಂದರ್ಭ ಅಗಸ್ತ್ಯ ಅವರು ಸುಹಾನಾರಿಗೆ ಗಾಸಿಪ್ ವಿಚಾರ ಹಿಡಿದು ಟೀಸ್ ಮಾಡಿದ್ರು. ಸುಹಾನಾ ಕೂಡ ತಮಾಷೆಯಾಗಿಯೇ ಅಗಸ್ತ್ಯರ ಹಾಸ್ಯ, ಬುದ್ಧಿವಂತಿಕೆಯನ್ನು ಶ್ಲಾಘಿಸಿದರು. ಬಳಿಕ ಯಾರು ಫನ್ನಿ ಎಂಬ ಚರ್ಚೆ ನಡೆಯಿತು. ಅಗಸ್ತ್ಯ ಸುಹಾನಾರಲ್ಲಿ ಹಾಸ್ಯಭಾವದ ಕೊರತೆ ಇದೆ ಎಂದು ಮತ್ತೆ ಕಾಲೆಳೆದರು. ಹೀಗೆ ಸುಹಾನಾ ಅಗಸ್ತ್ಯ ಫನ್ ಟೈಮ್ ಕಳೆದಿದ್ದಾರೆ. ಕೊನೆಗೆ ಇಬ್ಬರೂ ಮಿಲ್ಕ್‌ಶೇಕ್ ಕುಡಿದಿದ್ದು, ಟೇಸ್ಟ್ ಕೆಟ್ಟದಾಗಿದೆ ಎಂಬುದು ಅವರ ಎಕ್ಸ್ಪ್ರೆಶನ್ನಲ್ಲೇ ಗೊತ್ತಾಗುತ್ತದೆ.