ಕನ್ನಡ ಚಿತ್ರರಂಗದಲ್ಲಿ ಕಮರ್ಷಿಯಲ್ ಸಿನಿಮಾಗಳ ಮಧ್ಯೆ ಆಗಾಗ ಸಾಮಾಜಿಕ ಸಂದೇಶ ಇರುವ ಚಿತ್ರಗಳು ಗಮನ ಸೆಳೆಯುತ್ತಿದೆ. ಈಗಿನ ಮಕ್ಕಳು ಹೆಚ್ಚು ಮೊಬೈಲ್ ಬಳಸುವುದರಿಂದ ಆಗುವ ಪರಿಣಾಮಗಳ ಸುತ್ತ ಹೆಣೆಯಲಾಗಿರುವ ಸಿನಿಮಾವೇ ‘ಸೆಲ್ಫಿ ಮಮ್ಮಿ.. ಗೂಗಲ್ ಡ್ಯಾಡಿ..’.
ಸೆಲ್ಫಿ ಮಮ್ಮಿ.. ಗೂಗಲ್ ಡ್ಯಾಡಿ.. ಸಿನಿಮಾ ನೋಡಿ ಮೆಚ್ಚಿದ ಸುಧಾಮೂರ್ತಿ ಕೆಲವು ದಿನಗಳ ಹಿಂದೆ ಶಿಕ್ಷಣ ಸಚಿವ ನಾಗೇಶ್ ಅವರು ಈ ಸಿನಿಮಾ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದರು. ಇದೀಗ ಪ್ರತಿಷ್ಠಿತ ಇನ್ಫೋಸಿಸ್ ಸಂಸ್ಥೆಯ ಮುಖ್ಯಸ್ಥರಾಗಿರುವ ಸುಧಾಮೂರ್ತಿ ಅವರು ‘ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ’ ಸಿನಿಮಾವನ್ನ ವೀಕ್ಷಣೆ ಮಾಡಿದ್ದಾರೆ. ನಿರ್ದೇಶಕ ಮಧುಚಂದ್ರ ನಿರ್ದೇಶನದಲ್ಲಿ ಸೃಜನ್ ಲೋಕೇಶ್ ಹಾಗೂ ಮೇಘನಾರಾಜ್ ನಟಿಸಿರುವ ‘ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ’ ಚಿತ್ರವನ್ನು ಸುಧಾಮೂರ್ತಿ ಅವರು ನೋಡಿ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.
ಸೆಲ್ಫಿ ಮಮ್ಮಿ.. ಗೂಗಲ್ ಡ್ಯಾಡಿ.. ಸಿನಿಮಾ ನೋಡಿ ಮೆಚ್ಚಿದ ಸುಧಾಮೂರ್ತಿ ಓದಿ:ಮಹಿಳಾ ಮೀಸಲು ಅಗತ್ಯವೇ.. ಸುಧಾಮೂರ್ತಿ ವಿದ್ಯಾರ್ಥಿಗಳಿಗೆ ಹೇಳಿದ ಕಿವಿ ಮಾತೇನು?.. VIDEO
ಈ ಸಿನಿಮಾವು ಒಂದು ಹೊಸ ರೀತಿಯ ಪ್ರಯೋಗ. ನಾನು ನಿಜ ಜೀವನದಲ್ಲಿ ನೋಡಿದ್ದೀನಿ. ನಾವು ಈಗ ಮಕ್ಕಳ ಅಡಿಕ್ಷನ್ ನೋಡಿ ಅಯ್ಯೋ ಮಕ್ಕಳು ಅಂದುಕೊಳ್ಳುತ್ತೇವೆ. ಆದರೆ ನಿಜವಾಗಲೂ ಅದು ಸಮಸ್ಯೆ ಆಗುತ್ತಿದೆ. ನಮ್ಮ ಸಮಾಜದಲ್ಲಿ ಮೊಟ್ಟ ಮೊದಲ ಬಾರಿಗೆ ಈ ರೀತಿಯ ಪ್ರಯತ್ನ ಮಾಡಿದ್ದಾರೆ. ಸಿನಿಮಾ ಬಹಳ ಚೆನ್ನಾಗಿದೆ. ಒಳ್ಳೆಯ ಕಾನ್ಸೆಪ್ಟ್. ಸದ್ಯದ ಸಾಮಾಜಿಕ ಪರಿಸ್ಥಿತಿ ಕುರಿತಾಗಿ ಮಾಡಿರೋದಕ್ಕೆ ಅಭಿನಂದನೆಗಳು ಎಂದು ತಿಳಿಸಿದರು.
ಎಲ್ಲರೂ ಬಹಳ ಚೆನ್ನಾಗಿ ಅಭಿನಯಿಸಿದ್ದಾರೆ. ನಿರ್ದೇಶಕರಿಗೆ ವಿಶೇಷವಾಗಿ ಅಭಿನಂದನೆಗಳು. ಯಾಕೆ ಅಂದರೆ ಇದರಲ್ಲಿ ಲವ್ ಸ್ಟೋರಿ, ರೊಮ್ಯಾಂಟಿಕ್ ಸೀನ್ಸ್ ಇಲ್ಲ, ಹೊಸ ತರ ಸಿನಿಮಾ ಇದೆ. ಒಂದು ಅದ್ಭುತವಾದ ಕಲ್ಪನಾಶಕ್ತಿ ಹಾಗೂ ಕಠಿಣವಾದ ಸಮಸ್ಯೆಗೆ ಅದ್ಭುತವಾದ ಸೊಲ್ಯೂಷನ್ ಇದೆ.
ಸೆಲ್ಫಿ ಮಮ್ಮಿ.. ಗೂಗಲ್ ಡ್ಯಾಡಿ.. ಸಿನಿಮಾ ನೋಡಿ ಮೆಚ್ಚಿದ ಸುಧಾಮೂರ್ತಿ ಇದು ಬೇರೆ ಬೇರೆ ಭಾಷೆಯಲ್ಲಿ ಬರಬೇಕು ಅಂತ ನನ್ನ ಅಭಿಪ್ರಾಯ. ಹಿಂದಿ, ಬೆಂಗಾಲಿ, ಮರಾಠಿ, ತಮಿಳು, ತೆಲುಗು ಭಾಷೆಗಳಲ್ಲಿ ಚಿತ್ರ ಬರಬೇಕು. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೂ ಇದು ಸಾಮಾನ್ಯ ಸಮಸ್ಯೆ. ಅದಕ್ಕೆ ಇದೇ ತರಹ ಹೊಸ ಹೊಸ ಪ್ರಯೋಗಗಳು ಸಿನೆಮಾ ಮೂಲಕ ಹೊರ ಬರಲಿ ಅಂತ ನಾನು ಆಶಿಸುತ್ತೇನೆ ಎಂದು ಸುಧಾಮೂರ್ತಿ ಹೇಳಿದ್ದಾರೆ.