ಕರ್ನಾಟಕ

karnataka

ETV Bharat / entertainment

ಬೆಂಗಳೂರಿನಲ್ಲಿ 'ದಿ ವ್ಯಾಕ್ಸಿನ್​ ವಾರ್​' ಸ್ಪೆಷಲ್​ ಸ್ಕ್ರೀನಿಂಗ್​​: ಭಾರತೀಯರೆನ್ನಲು ಹೆಮ್ಮೆಪಡಿ ಎಂದ ಸುಧಾ ಮೂರ್ತಿ

Sudha Murty praise The Vaccine War: 'ದಿ ವ್ಯಾಕ್ಸಿನ್​ ವಾರ್​' ಸಿನಿಮಾ ಸ್ಪೆಷಲ್​ ಸ್ಕ್ರೀನಿಂಗ್​ನಲ್ಲಿ ಸುಧಾ ಮೂರ್ತಿ ಭಾಗಿಯಾಗಿ, ಸ್ಫೂರ್ತಿದಾಯಕ ಮಾತುಗಳನ್ನಾಡಿದರು.

Sudha Murty on The Vaccine War
'ದಿ ವ್ಯಾಕ್ಸಿನ್​ ವಾರ್​' ಸ್ಪೆಷಲ್​ ಸ್ಕ್ರೀನಿಂಗ್​ನಲ್ಲಿ ಸುಧಾ ಮೂರ್ತಿ

By ETV Bharat Karnataka Team

Published : Sep 19, 2023, 12:57 PM IST

Updated : Sep 19, 2023, 3:19 PM IST

ಹಿಂದಿ ಚಿತ್ರರಂಗದ ಖ್ಯಾತ ನಿರ್ದೇಶಕ ವಿವೇಕ್​ ರಂಜನ್​​ ಅಗ್ನಿಹೋತ್ರಿ ಅವರ ಮುಂದಿನ ಸಿನಿಮಾ 'ದಿ ವ್ಯಾಕ್ಸಿನ್​ ವಾರ್​'. ಚಿತ್ರ ತೆರೆಗೆ ಬರಲು ದಿನಗಣನೆ ಆರಂಭವಾಗಿದೆ. 'ದಿ ವ್ಯಾಕ್ಸಿನ್​ ವಾರ್​'ನ ವಿಶೇಷ ಪ್ರದರ್ಶನವನ್ನು ಚಿತ್ರತಂಡ ಬೆಂಗಳೂರಿನಲ್ಲಿ ಹಮ್ಮಿಕೊಂಡಿತ್ತು. ಇನ್ಫೋಸಿಸ್​ ಮುಖ್ಯಸ್ಥೆ ಸುಧಾ ಮೂರ್ತಿ ಕೂಡ ಭಾಗವಹಿಸಿದ್ದರು.

ಸ್ಪೂರ್ತಿದಾಯಕ ಮಾತುಗಳನ್ನಾಡಿದ್ದಕ್ಕೆ ಧನ್ಯವಾದಗಳು ಸುಧಾಮೂರ್ತಿ ಜಿ...ನಿರ್ದೇಶಕ ವಿವೇಕ್​ ಅಗ್ನಿಹೋತ್ರಿ, ತಾವು ಸುಧಾ ಮೂರ್ತಿ ಜೊತೆ ಮಾತನಾಡುತ್ತಿರುವ ಫೋಟೋವನ್ನು ಸೋಷಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 'ದಿ ವ್ಯಾಕ್ಸಿನ್​ ವಾರ್​'ನ ವಿಶೇಷ ಪ್ರದರ್ಶನದಲ್ಲಿ ಭಾಗಿಯಾಗಿದ್ದಕ್ಕೆ ಸುಧಾ ಮೂರ್ತಿ ಕೃತಜ್ಞತೆ ಸಲ್ಲಿಸಿ, ಸಂತೋಷ ವ್ಯಕ್ತಪಡಿಸಿದ್ದಾರೆ. ಪೋಸ್ಟ್​​ನಲ್ಲಿ, '' ದಿ ವ್ಯಾಕ್ಸಿನ್​ ವಾರ್ ಸ್ಪೆಷಲ್​ ಸ್ಕ್ರೀನಿಂಗ್​​ನಲ್ಲಿ ಸ್ಪೂರ್ತಿದಾಯಕ ಮಾತುಗಳನ್ನಾಡಿದ್ದಕ್ಕೆ ಧನ್ಯವಾದಗಳು ಸುಧಾಮೂರ್ತಿ ಜಿ'' ಎಂದು ಬರೆದಿದ್ದಾರೆ.

ಭಾರತೀಯರಾಗಿರುವುದಕ್ಕೆ ಹೆಮ್ಮೆ ಪಡಿ: ವಿವೇಕ್​ ಅಗ್ನಿಹೋತ್ರಿ ಹಂಚಿಕೊಂಡಿರುವ ವಿಡಿಯೋದಲ್ಲಿ ಪದ್ಮಭೂಷಣ ಪುರಸ್ಕೃತೆಯೂ ಆಗಿರುವ ಸುಧಾ ಮೂರ್ತಿ, ದಿ ವ್ಯಾಕ್ಸಿನ್​ ವಾರ್​ ಸಿನಿಮಾ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಪ್ರಶಂಸೆ ವ್ಯಕ್ತಪಡಿಸಿರುವ ಅವರು, "ಸಾಮಾನ್ಯ ಜನರಿಗೆ ಕೋವ್ಯಾಕ್ಸಿನ್​ ಬಗ್ಗೆ ಹೆಚ್ಚು ತಿಳಿದಿರಲಿಕ್ಕಿಲ್ಲ ಅಥವಾ ಅರ್ಥವಾಗುವುದಿಲ್ಲ. ಆದ್ರೆ ಈ ಸಿನಿಮಾ ಕೋವ್ಯಾಕ್ಸಿನ್​ ಹಿಂದಿರುವ ಶ್ರಮವನ್ನು ಎತ್ತಿ ತೋರಿಸುತ್ತದೆ. ಇದು ಕೇವಲ ಕೆಲಸವಲ್ಲ. ವಿಜ್ಞಾನಿಗಳ ನಿಸ್ವಾರ್ಥ ಸೇವೆ. ವಿಜ್ಞಾನಿಗಳು ಈ ಕೆಲಸದಲ್ಲಿ ಹೆಚ್ಚು ತೊಡಗಿದ ಹಿನ್ನೆಲೆಯಲ್ಲಿ ಭಾರತವನ್ನು ಆರೋಗ್ಯಕರವಾಗಿ ನೋಡಬಹುದಾಗಿದೆ'' ಎಂದಿದ್ದಾರೆ. ಸುಧಾ ಮೂರ್ತಿ ತಮ್ಮ ಭಾಷಣ ಪೂರ್ಣಗೊಳಿಸುವ ವೇಳೆ, ''ನೈತಿಕವಾಗಿರಿ, ಶ್ರಮವಹಿಸಿ ಮತ್ತು ನೀವು ಭಾರತೀಯರಾಗಿರುವುದಕ್ಕೆ ಹೆಮ್ಮೆ ಪಡಿ'' ಎಂದು ತಿಳಿಸಿದರು.

ಇದನ್ನೂ ಓದಿ:ಪರಸ್ಪರ ಪ್ರೀತಿ ವ್ಯಕ್ತಪಡಿಸಿದ ತಮನ್ನಾ ಭಾಟಿಯಾ-ವಿಜಯ್​ ವರ್ಮಾ: ವಿಡಿಯೋ ನೋಡಿ

ವಿಜ್ಞಾನಿಗಳು ಮತ್ತು ವೈದ್ಯರಿಗೆ ಗೌರವ: 'ದಿ ವ್ಯಾಕ್ಸಿನ್​ ವಾರ್​' ಅನ್ನು ಸೆಪ್ಟೆಂಬರ್​​ 28 ರಂದು ಬಿಡುಗಡೆಗೊಳಿಸಲು ಚಿತ್ರತಂಡ ನಿರ್ಧರಿಸಿದೆ. ಈ ಚಿತ್ರವನ್ನು ಕೋವಿಡ್​ 19 ಸಾಂಕ್ರಾಮಿಕ ಉತ್ತುಂಗದಲ್ಲಿದ್ದ ಸಂದರ್ಭದಲ್ಲಿ ಜೀವ ಉಳಿಸುವ ಲಸಿಕೆಗಳಿಗಾಗಿ ದಣಿವರಿಯದೇ ಕೆಲಸ ಮಾಡಿದ ವಿಜ್ಞಾನಿಗಳು ಮತ್ತು ವೈದ್ಯರಿಗೆ ಅರ್ಪಿಸಲಾಗುತ್ತಿದೆ.

ಇದನ್ನೂ ಓದಿ:ತೆರೆಕಂಡು 12 ದಿನ, ಉತ್ತಮ ಪ್ರದರ್ಶನ ಮುಂದುವರಿಸಿದ 'ಜವಾನ್': ಕಲೆಕ್ಷನ್​ ಎಷ್ಟು ಗೊತ್ತೇ?

ಕೋವಿಡ್​ 19 ಸಾಂಕ್ರಾಮಿಕ ಸಂಬಂಧ ಕಥೆ: 'ದಿ ವ್ಯಾಕ್ಸಿನ್​ ವಾರ್​' ಶೀರ್ಷಿಕೆ ಸುಳಿವು ಕೊಟ್ಟಂತೆ, ''ಕೋವಿಡ್​ 19 ಸಂದರ್ಭ, ಜಾಗತಿಕ ಆರೋಗ್ಯ ಬಿಕ್ಕಟ್ಟು, ಲಸಿಕೆ ಅಭಿವೃದ್ಧಿಪಡಿಸುವಲ್ಲಿ ವಿಜ್ಞಾನಿಗಳು, ತಜ್ಞರು, ವೈದ್ಯಕೀಯ ಸಮುದಾಯ ನಿರ್ವಹಿಸಿದ ನಿರ್ಣಾಯಕ ಪಾತ್ರಗಳ ಕುರಿತು ಒತ್ತಿ ಹೇಳಲಿದೆ. ಚಿತ್ರದ ಕುರಿತು ಸಿನಿಪ್ರಿಯರು ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ.

Last Updated : Sep 19, 2023, 3:19 PM IST

ABOUT THE AUTHOR

...view details