ಭಾರತೀಯ ಚಿತ್ರರಂಗದ ಅತ್ಯಂತ ಜನಪ್ರಿಯ ನಟ ಸಲ್ಮಾನ್ ಖಾನ್ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 58ನೇ ಜನ್ಮದಿನ ಆಚರಿಸಿಕೊಳ್ಳುತ್ತಿರುವ ನಟನಿಗೆ ದೇಶ ಮಾತ್ರವಲ್ಲದೇ ವಿಶ್ವಾದ್ಯಂತ ಇರುವ ಅಪಾರ ಸಂಖ್ಯೆಯ ಅಭಿಮಾನಿಗಳು, ಕುಟುಂಬ ಸದಸ್ಯರು, ಸ್ನೇಹಿತರು, ಚಿತ್ರರಂಗದವರು ಶುಭ ಕೋರುತ್ತಿದ್ದಾರೆ. ಶುಭಾಶಯಗಳ ಸಂದೇಶ ಕಳುಹಿಸುತ್ತಿರುವ ಸಿನಿರಂಗದ ಖ್ಯಾತನಾಮರ ಪೈಕಿ ಕನ್ನಡ ಚಿತ್ರರಂಗದ ಅಭಿನಯ ಚಕ್ರವರ್ತಿ ಸುದೀಪ್ ಸಹ ಇದ್ದಾರೆ. ಹೌದು, ಸ್ಯಾಂಡಲ್ವುಡ್ನ ಜನಪ್ರಿಯ ನಟ ಸುದೀಪ್ ಅವರು ಸೋಷಿಯಲ್ ಮೀಡಿಯಾದಲ್ಲಿ ಬರ್ತ್ಡೇ ಬಾಯ್ ಸಲ್ಮಾನ್ ಖಾನ್ ಅವರಿಗೆ ವಿಶೇಷವಾಗಿ ಶುಭ ಕೋರಿದ್ದಾರೆ.
ನಟ ಸುದೀಪ್ ಪೋಸ್ಟ್: ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ ಎಕ್ಸ್ನಲ್ಲಿ ಸುದೀಪ್ ಪೋಸ್ಟ್ ಒಂದನ್ನು ಶೇರ್ ಮಾಡಿದ್ದಾರೆ. ಸಲ್ಮಾನ್ ಜೊತೆಗಿನ ಫೋಟೋ ಹಂಚಿಕೊಂಡ ಕಿಚ್ಚ, ''ನನ್ನ ಪ್ರೀತಿಯ ಸರ್ ಹಾಗೂ ಸಹೋದರ ಸಲ್ಮಾನ್ ಖಾನ್ ಅವರಿಗೆ ನನ್ನ ಶುಭಾಶಯಗಳು. ನಿಮ್ಮೊಂದಿಗೆ ಕಳೆದ ಪ್ರತಿ ಕ್ಷಣ ಅದ್ಭುತ. ನಮ್ಮ ಜೀವನದಲ್ಲಿ ಯಾವಾಗಲೂ ಅದ್ಭುತ ಮಾನವರಾಗಿ ಇರುವುದಕ್ಕಾಗಿ ಧನ್ಯವಾದಗಳು. ಹ್ಯಾಪಿ ರಿಟರ್ನ್ಸ್ ಸರ್'' ಎಂದು ಬರೆದುಕೊಂಡಿದ್ದಾರೆ.
ಸಲ್ಮಾನ್ ಖಾನ್ ಹೆಚ್ಚಾಗಿ ತಮ್ಮ ಹುಟ್ಟುಹಬ್ಬವನ್ನು ಕುಟುಂಬಸ್ಥರೊಂದಿಗೆ ಆಚರಿಸಿಕೊಳ್ಳುತ್ತಾರೆ. ಅದರಂತೆ ಈ ಬಾರಿಯೂ ಫಾಮಿಲಿ ಜೊತೆಯೇ ನಟ ಬರ್ತ್ ಡೇ ಸೆಲೆಬ್ರೇಟ್ ಮಾಡಿಕೊಂಡಿದ್ದು, ಸೆಲೆಬ್ರೇಶನ್ ಫೋಟೋ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇಂದು ಸಹೋದರಿ ಅರ್ಪಿತಾ ಮತ್ತು ಆಯುಷ್ ಅವರ ಮಗಳು ಆಯತ್ ಅವರ ಹುಟ್ಟುಹಬ್ಬವೂ ಹೌದು. ಇಬ್ಬರ ಜನ್ಮದಿನವನ್ನು ಒಟ್ಟಿಗೆ ಆಚರಿಸಲಾಗಿದ್ದು, ಈವೆಂಟ್ಗೆ ಸಂಬಂಧಿಸಿದ ವಿಡಿಯೋಗಳು ಆನ್ಲೈನ್ನಲ್ಲಿ ವೈರಲ್ ಆಗಿವೆ.