ಕರ್ನಾಟಕ

karnataka

ETV Bharat / entertainment

ಜೂ. 1ರಂದು ಕಿಚ್ಚ ಸುದೀಪ್​​ ಸಿನಿಮಾ ಲಾಂಚ್: ಪ್ರಚಾರದ ನಡುವೆಯೇ ಅಭಿಮಾನಿಗಳಿಗೆ ಗುಡ್​ನ್ಯೂಸ್ - Sudeep bjp campaign

ತಮ್ಮ ಮುಂದಿನ ಚಿತ್ರದ ಬಗ್ಗೆ ಕಿಚ್ಚ ಸುದೀಪ್ ಟ್ವೀಟ್ ಮಾಡಿದ್ದಾರೆ.

Sudeep upcoming movie
ಕಿಚ್ಚ ಸುದೀಪ್​​ ಸಿನಿಮಾ

By

Published : Apr 29, 2023, 12:29 PM IST

ಕನ್ನಡ ಚಿತ್ರರಂಗದ ಅಭಿನಯ ಚಕ್ರವರ್ತಿ ಸುದೀಪ್​​ ನಿರೀಕ್ಷೆಯಂತೆ ಸಿಎಂ ಬಸವರಾಜ ಬೊಮ್ಮಾಯಿ ಪರ ಪ್ರಚಾರ ಕೈಗೊಂಡಿದ್ದಾರೆ. ಈಗಾಗಲೇ ಕೆಲ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಮತಯಾಚನೆ ಮಾಡಿದ್ದಾರೆ. ಚುನಾವಣೆ ಬಳಿಕ ಸಿನಿಮಾ ಮಾಹಿತಿ ಕೊಡಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ಪ್ರಚಾರದ ನಡುವೆಯೇ ಟ್ವೀಟ್​ ಮೂಲಕ ತಮ್ಮ ಮುಂದಿನ ಸಿನಿಮಾ ಬಗ್ಗೆ ಅಭಿಮಾನಿಗಳಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ ಕಿಚ್ಚ ಸುದೀಪ್​.

ಸುದೀಪ್​​ ಟ್ವೀಟ್: ನಾನು ಪ್ರಾರಂಭಿಸಲಿರುವ ಮೂರು ಚಿತ್ರಗಳಲ್ಲಿ ಒಂದರ ಪ್ರೋಮೋ ಶೂಟ್ ಮೇ 22ರಂದು ನಡೆಯಲಿದೆ ಎಂದು ಘೋಷಿಸಲು ಸಂತೋಷವಾಗಿದೆ. ಜೂನ್ 1ರಂದು ಸಿನಿಮಾ ಲಾಂಚ್ ಆಗಲಿದೆ ಎಂದು ನಟ ಸುದೀಪ್​ ಟ್ವೀಟ್​ ಮಾಡಿದ್ದಾರೆ. ಈ ಟ್ವೀಟ್​ ಕಂಡ ಅಭಿಮಾನಿಗಳು ತಮ್ಮ ಮೆಚ್ಚಿನ ನಟನ ಮುಂದಿನ ಚಿತ್ರದ ಬಗ್ಗೆ ಸಾಕಷ್ಟು ಉತ್ಸುಕರಾಗಿದ್ದಾರೆ. ಈವರೆಗೆ ಕಿಚ್ಚನ ಸಿನಿಮಾ ಮಾಹಿತಿಗಾಗಿ ಕಾದು ಕುಳಿತಿದ್ದವರು ಇಂದು ಸಂಭ್ರಮಿಸುತ್ತಿದ್ದಾರೆ. ಜೂನ್ 1ರ ಶುಭ ದಿನಕ್ಕೆ ಕಾದು ಕುಳಿತಿದ್ದಾರೆ.

ಸ್ಯಾಂಡಲ್​ವುಡ್​ ಮಾತ್ರವಲ್ಲದೇ ಇಡೀ ಭಾರತೀಯ ಚಿತ್ರ ರಂಗದಲ್ಲಿ ಜನಪ್ರಿಯತೆ ಸಂಪಾದಿಸಿರುವ ನಟ‌ ಕಿಚ್ಚ ಸುದೀಪ್. ಅಮೋಘ ಅಭಿನಯಕ್ಕೆ ಅಭಿನಯ ಚಕ್ರವರ್ತಿ ಎಂದೇ ಖ್ಯಾತರಾಗಿದ್ದು, ದೊಡ್ಡ ಸಂಖ್ಯೆಯ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಹಾಗಾಗಿ ಅವರ ಸಿನಿಮಾಗಳ ಮೇಲೆ ಅಭಿಮಾನಿಗಳ ಕುತೂಹಲ ಸಹಜ. ಮುಂದೆ ಯಾವ ರೀತಿಯ ಸಿನಿಮಾ ಮಾಡ್ತಾರೆ? ಯಾವ ನಿರ್ಮಾಣ ಸಂಸ್ಥೆ ಈ ಸಿನಿಮಾಗೆ ಬಂಡವಾಳ ಹೂಡಲಿದೆ? ನಾಯಕ ನಟಿ ಯಾರು? ತಾರಾಬಳಗ ಹೇಗಿರಲಿದೆ? ಕಥೆ ಹೇಗಿರಬಹುದು? ಹೊಸ ಅವತಾರ ತಾಳಬಹುದೇ? ಹೀಗೆ ಹತ್ತು ಹಲವು ಪ್ರಶ್ನೆಗಳು ಅಭಿಮಾನಿಗಳ ಮನದಲ್ಲಿದೆ. ಸದ್ಯ ಮುಂದಿನ ಸಿನಿಮಾ ಲಾಂಚ್​ ಡೇಟ್​ ತಿಳಿಸಿದ್ದು, ಇನ್ನೊಂದು ತಿಂಗಳಲ್ಲಿ ಅಭಿಮಾನಿಗಳ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಸಿಗಲಿದೆ.

ಇದನ್ನೂ ಓದಿ:'ಉರುಳೋ ಕಾಲವೇ' ಅಂತಿದ್ದಾರೆ 'ಮತ್ತೆ ಮದುವೆ'ಯಾದ ಪವಿತ್ರಾ ಲೋಕೇಶ್ - ನರೇಶ್

ನಿರ್ದೇಶಕ ಅನುಪ್​ ಭಂಡಾರಿ ಆ್ಯಕ್ಷನ್​ ಕಟ್​​ ಹೇಳಿರುವ 'ವಿಕ್ರಾಂತ್ ರೋಣ' ಕಳೆದ ಜುಲೈ 28ರಂದು ಅದ್ಧೂರಿಯಾಗಿ ಬಿಡುಗಡೆ ಆಗಿತ್ತು. ನಿರೀಕ್ಷೆಯಂತೆ ಸಿನಿಮಾ ಪ್ರೇಕ್ಷಕರಿಗೆ ಇಷ್ಟವಾಗಿ ಸೂಪರ್​ ಹಿಟ್ ಕೂಡ ಆಗಿತ್ತು. ಪೊಲೀಸ್​ ಅಧಿಕಾರಿ ಪಾತ್ರದಲ್ಲಿ ಸುದೀಪ್​ ಅಭಿನಯಿಸಿದ್ದ ಈ ಚಿತ್ರ ಬಾಕ್ಸ್​ ಆಫೀಸ್​ನಲ್ಲಿ ಧೂಳೆಬ್ಬಿಸಿತ್ತು. ವಿಕ್ರಾಂತ್​ ರೋಣ ವರ್ಷ ಪೂರೈಸುವ ಹೊತ್ತಿಗೆ ಅವರ ಮುಂದಿನ ಸಿನಿಮಾ ಘೋಷಣೆ ಆಗಲಿದೆ.

ಇದನ್ನೂ ಓದಿ:ಕಾಂಗ್ರೆಸ್​ ಸೇರಿದ ಗೀತಾ ಶಿವರಾಜ್​ಕುಮಾರ್​ಗೆ​ ಶುಭ ಹಾರೈಸಿದ ಬಿಜೆಪಿ ಸ್ಟಾರ್ ಪ್ರಚಾರಕ ಸುದೀಪ್

ಸಾಮಾಜಿಕ ಜಾಲತಾಣದಲ್ಲಿ ಸುದೀಪ್​​ 46ನೇ ಚಿತ್ರದ ಕುರಿತುಬ ಅಭಿಮಾನಿಗಳು ಸಾಕಷ್ಟು ಕುತಊಹಲ ವ್ಯಕ್ತಪಡಿಸಿದ್ದಾರೆ. 'ಸುದೀಪ್​​ 46' ಅನ್ನೋದು ಟ್ರೆಂಡ್​ ಆಗಿದೆ. ಇದನ್ನೆಲ್ಲಾ ಗಮನಿಸಿದ ಸುದೀಪ್​​ ಕೆಲ ದಿನಗಳ ಹಿಂದೆ ಟ್ವೀಟ್​ ಮೂಲಕ ಅಭಿಮಾನಿಗಳಿಗೆ ಗುಡ್​ ನ್ಯೂಸ್ ಕೊಟ್ಟಿದ್ದರು. ನನ್ನ ಚಿತ್ರದ ಕೆಲಸಗಳು ನಡೆಯುತ್ತಿದೆ. ಸದ್ಯ ಕೊಂಚ ಬ್ರೇಕ್​ ಪಡೆದಿದ್ದೇನೆ. ಮೂರು ಚಿತ್ರದ ಕಥೆ ನನ್ನ ಕೈಯಲ್ಲಿದೆ. ಅದಕ್ಕೆ ಬೇಕಾದ ಸರ್ವ ತಯಾರಿಗಳೂ ನಡೆಯುತ್ತಿದೆ. ಚಿತ್ರತಂಡ ಹಗಲು ರಾತ್ರಿ ಕೆಲಸ ಮಾಡುತ್ತಿದೆ. ಶೀಘ್ರದಲ್ಲೇ ಮುಂದಿನ ಸಿನಿಮಾ ಬಗ್ಗೆ ಘೋಷಿಸಲಾಗುವುದು ಎಂದು ತಿಳಿಸಿದ್ದರು.

ABOUT THE AUTHOR

...view details