ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾನುವಾರ ಸಂಜೆ ಪಾಕಿಸ್ತಾನದ ವಿರುದ್ಧದ ನಡೆದ ಪಂದ್ಯದಲ್ಲಿ ಭಾರತ ತಂಡ ರೋಚಕ ಗೆಲುವು ಸಾಧಿಸಿದ್ದು ಸ್ಯಾಂಡಲ್ವುಡ್ ನಟ ಸುದೀಪ್ ಸೋಶಿಯಲ್ ಮೀಡಿಯಾ ಪೋಸ್ಟ್ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ. ತಂಡದ ಗೆಲುವಿನ ರುವಾರಿ, ರನ್ ಮಷಿನ್ ವಿರಾಟ್ ಕೊಹ್ಲಿ ಅವರನ್ನು ಹೊಗಳಿ ಟ್ವಿಟ್ ಮಾಡಿದ್ದಾರೆ.
ಮಹಾರಾಜ ಎಲ್ಲಿದ್ರೂ ಮಹಾರಾಜನೇ ತಾನೇ. ಆ ರಾಜನೇ ವಿರಾಟ್ ಕೊಹ್ಲಿ. ಇದನ್ನು ನನಗೆ ನೇರವಾಗಿ ನೋಡುವುದಕ್ಕೆ ಸಾಧ್ಯವಾಗಿದ್ದು ಒಂದು ಗೌರವ. ಹ್ಯಾಟ್ಸ್ ಆಫ್ ಹಾರ್ದಿಕ್ ಪಾಂಡ್ಯ. ನಿಮ್ಮೊಳಗೆ ಶಾಂತತೆ ಇಲ್ಲವಾಗಿದ್ದರೆ, ಇದು ಸಾಧ್ಯವಾಗುತ್ತಿರಲಿಲ್ಲ' ಎಂದು ಬರೆದಿದ್ದಾರೆ.