ಕನ್ನಡ ಚಿತ್ರರಂಗದಲ್ಲಿ ಡಾ. ವಿಷ್ಣುವರ್ಧನ್ ಅಭಿಮಾನಿಯಾಗಿ, ಈಗಾಗಲೇ ಸಾಕಷ್ಟು ಸ್ಟಾರ್ ನಟರು ಸಿಲ್ವರ್ ಸ್ಕ್ರೀನ್ ಮೇಲೆ ರಾರಾಜಿಸಿದ್ದಾರೆ. ಇದೀಗ ರಿಯಲ್ ಸ್ಟಾರ್ ಉಪೇಂದ್ರ ಅವರ ಅಣ್ಣನ ಮಗ ನಿರಂಜನ್ ಸುಧೀಂದ್ರ 'ನಮ್ಮ ಹುಡುಗರು' ಸಿನಿಮಾದಲ್ಲಿ ಸಾಹಸ ಸಿಂಹನ ಅಭಿಮಾನಿಯಾಗಿ ಮಿಂಚಿದ್ದಾರೆ.
'ನಮ್ಮ ಹುಡುಗರು' ಸಿನಿಮಾಗೆ ಸುದೀಪ್ ಬೆಂಬಲ ಟ್ರೇಲರ್ ಹಾಗೂ ಹಾಡುಗಳಿಂದ ಗಮನ ಸೆಳೆದ ನಮ್ಮ ಹುಡುಗರು ಸಿನಿಮಾ ಇಂದು ರಾಜ್ಯಾದ್ಯಂತ ತೆರೆ ಕಂಡಿದೆ. ಕಿಚ್ಚ ಸುದೀಪ್, ನಿರಂಜನ್ ಸುಧೀಂದ್ರ ಅವರನ್ನು ಕನ್ನಡ ಚಿತ್ರರಂಗದ ಕುಟುಂಬಕ್ಕೆ ವೆಲ್ ಕಮ್ ಮಾಡಿ ಶುಭಾಶಯ ಕೋರಿದ್ದಾರೆ. ಅಷ್ಟೇ ಅಲ್ಲ, ನಾನು ನಿಮ್ಮ ಸಿನಿಮಾದ ಟ್ರೇಲರ್ ನೋಡಿದೆ. ಒಳ್ಳೆ ಫ್ಯೂಚರ್ ಇದೆ ಎಂದು ನಿರಂಜನ್ಗೆ ಶುಭಾಶಯ ತಿಳಿಸಿದ್ದಾರೆ. ಉಪೇಂದ್ರ ಸರ್ ಫ್ಯಾಮಿಲಿ ನಮ್ಮ ಕುಟುಂಬ ಇದ್ದ ಹಾಗೆ ಎಂದು ತಿಳಿಸಿದ್ದಾರೆ.
ಈ ಚಿತ್ರದಲ್ಲಿ ನಿರಂಜನ್ ಸುಧೀಂದ್ರ ಡಾ. ವಿಷ್ಣುವರ್ಧನ್ ಅಭಿಮಾನಿಯಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ವಿಷ್ಣು ದಾದಾ ಅವರ ಕಟೌಟ್ನಿಂದ ನಿರಂಜನ್ ಮೇಲೆ ಹೂವಿನ ಹಾರ ಬೀಳುವಂತೆ ಇಂಟ್ರಡಕ್ಷನ್ ಸೀನ್ ಮಾಡಲಾಗಿದೆ. ಇನ್ನು ನಿರಂಜನ್ ಬಾಲ್ಯದಲ್ಲೇ ವಿಷ್ಣುವರ್ಧನ್ ಅವರ ಬಳ್ಳಾರಿ ನಾಗ ಚಿತ್ರದಲ್ಲೇ ನಟಿಸಿದ್ದರು. ಈಗ ನಮ್ಮ ಹುಡುಗರು ಚಿತ್ರದಲ್ಲಿ ಸಾಹಸ ಸಿಂಹನ ಅಭಿಮಾನಿಯಾಗಿ ಕಾಣಿಸಿಕೊಂಡಿದ್ದಾರೆ.
ಇದನ್ನೂ ಓದಿ:ಜುಲೈ 15ಕ್ಕೆ ರಾಜ್ಯಾದ್ಯಂತ 'ಪೆಟ್ರೋಮ್ಯಾಕ್ಸ್' ಸಿನಿಮಾ ಬಿಡುಗಡೆ
ನಿರಂಜನ್ ಜೋಡಿಯಾಗಿ ಮೈಸೂರಿನ ಹುಡುಗಿ ರಾಧ್ಯಾ ಕಾಣಿಸಿಕೊಂಡಿದ್ದಾರೆ. ಜೊತೆಗೆ ಶರತ್ ಲೋಹಿತಾಶ್ವ, ಕಾಮಿಡಿ ಕಿಲಾಡಿಗಳು ಖ್ಯಾತಿಯ ಪ್ರವೀಣ್, ಆಲ್ ಓಕೆ ಅಲೋಕ್ ಮುಂತಾದವರು ನಟಿಸಿದ್ದಾರೆ. ನಿರ್ದೇಶಕ ಆರ್ ಚಂದ್ರು ಬಳಿ ಹಲವು ವರ್ಷಗಳ ಕಾಲ ಸಹ ನಿರ್ದೇಶಕನಾಗಿ ಕೆಲಸ ಮಾಡುತ್ತಿದ್ದ ಹೆಚ್.ಬಿ ಸಿದ್ದು ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಮೊದಲ ಬಾರಿಗೆ ನಿರ್ದೇಶನ ಮಾಡಿದ್ದಾರೆ. ಚಿತ್ರದ ಹಾಡುಗಳಿಗೆ ಅಭಿಮಾನ್ ರಾಯ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಮೂವರು ಹುಡುಗರ ಮಧ್ಯೆ ನಡೆಯುವ ಕಥೆ ಇದಾಗಿದೆ.