ಕರ್ನಾಟಕ

karnataka

ETV Bharat / entertainment

ಕಬ್ಜ ಸಿನಿಮಾ ನಿರ್ದೇಶಕ ಆರ್.ಚಂದ್ರುಗೋಸ್ಕರ ಗೆಲ್ಲಬೇಕು: ಕಿಚ್ಚ ಸುದೀಪ್ - ETV Bharat kannada News

ಪುನೀತ್ ರಾಜ್‍ಕುಮಾರ್ ಹುಟ್ಟುಹಬ್ಬದಂದು ಕಬ್ಜ ಸಿನಿಮಾ ದೇಶಾದ್ಯಂತ ಬಿಡುಗಡೆಯಾಗಲಿದೆ.

Kabja is a movie
ಕಬ್ಜ ಸಿನಿಮಾ

By

Published : Mar 15, 2023, 11:53 AM IST

ಕಬ್ಜ ಪ್ರಿ ರಿಲೀಸ್ ಕಾರ್ಯಕ್ರಮ

ಎಲ್ಲೆಡೆ ಕಬ್ಜ ಚಿತ್ರದ ಫೀವರ್ ಶುರುವಾಗಿದೆ. ಗಾಂಧಿನಗರ ಟು ಮುಂಬೈ, ಚೆನ್ನೈ ಟು ದುಬೈ ಹಾಗೂ ಕಾಲಿವುಡ್ ಸೇರಿದಂತೆ ಎಲ್ಲೆಡೆ ಚಿತ್ರ ದೊಡ್ಡ ಅಲೆ ಎಬ್ಬಿಸಿದೆ. ಉಪೇಂದ್ರ, ಸುದೀಪ್, ಶಿವರಾಜ್ ಕುಮಾರ್ ಅಭಿನಯ ಹಾಗು ನಿರ್ದೇಶಕ ಆರ್.ಚಂದ್ರು ಅವರು ನಿರ್ಮಾಣದ ಜೊತೆಗೆ ನಿರ್ದೇಶಿಸಿರುವ ಸಿನಿಮಾ ಅಭಿಮಾನಿಗಳಿಗೆ ಮನರಂಜನೆಯ ರಸದೌತಣ ನೀಡುವ ನಿರೀಕ್ಷೆ ಇದೆ.

ಸಿನಿಮಾ ಬಿಡುಗಡೆಗೆ ಎರಡು‌ ದಿನ‌ ಬಾಕಿ ಇದೆ. ಅಷ್ಟರಲ್ಲೇ ಆರ್.ಚಂದ್ರು ಬೆಂಗಳೂರಿನ ಖಾಸಗಿ ಹೋಟೆಲ್​ನಲ್ಲಿ ಗ್ರ್ಯಾಂಡ್ ಪ್ರೀ ರಿಲೀಸ್ ಕಾರ್ಯಕ್ರಮ ಏರ್ಪಡಿಸಿದ್ದರು. ಉಪೇಂದ್ರ, ಕಿಚ್ಚ ಸುದೀಪ್, ಡಾಲಿ ಧನಂಜಯ್, ಪ್ರೇಮ್, ನಟಿಯರಾದ ಶ್ರೀಯಾ ಶರಣ್, ತಾನ್ಯ ಹೋಪ್ ‌ಹಾಗೂ ಆನಂದ್ ಆಡಿಯೋ ಮಾಲೀಕ ಶ್ಯಾಮ್, ಆನಂದ್ ಭಾಗವಹಿಸಿದ್ದರು.

ಡಾಲಿ ಧನಂಜಯ್ ಮಾತನಾಡಿ, ನಮ್ಮ‌ ಸೀನಿಯರ್ಸ್ ನಮಗೆ ಒಳ್ಳೊಳ್ಳೆಯ ಸಿನಿಮಾಗಳನ್ನು ಮಾಡುತ್ತಾ ಉತ್ತಮ ಅಡಿಪಾಯ ಹಾಕುತ್ತಿದ್ದಾರೆ. ಈ ಸಿನಿಮಾ ಬಡವ ರಾಸ್ಕಲ್ ಆಗಿರುವ ಚಂದ್ರು ಅವರು ಶ್ರೀಮಂತ ರಾಸ್ಕಲ್ ಆಗುವ ಮಟ್ಟಿಗೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ದೊಡ್ಡ ಮಟ್ಟದ ಸಕ್ಸಸ್ ಆಗಲಿದೆ. ಬಳಿಕ ನಾನು ಶ್ರೀಯಾ ಶರಣ್ ಹಾಗು ತಾನ್ಯಾ ಹೋಪ್ ಜೊತೆ ಸಕ್ಸಸ್ ಡ್ಯಾನ್ಸ್ ಮಾಡಬೇಕು ಎಂದು ಹೇಳಿದರು.

ನವಾಮಿ ಹಾಡಿನಿಂದಲೇ ಸೆನ್ಸೇಷನಲ್ ಕ್ರಿಯೇಟ್ ಮಾಡಿರುವ ಟಾಲಿವುಡ್ ಬೆಡಗಿ ಶ್ರೀಯಾ ಶರಣ್ ಮಾತನಾಡಿ, ನಾನು ನಿರ್ದೇಶಕರ ಹೀರೋಯಿನ್. ಆರ್.ಚಂದ್ರು ಸಾರ್ ನನಗೆ ಒಳ್ಳೆಯ ಪಾತ್ರ ನೀಡಿದ್ದಾರೆ. ಉಪ್ಪಿ ಸಾರ್ ಜೊತೆ ಸ್ಕ್ರೀನ್ ಹಂಚಿಕೊಂಡಿರೋದು ಇನ್ನೂ ಖುಷಿ ಕೊಟ್ಟಿದೆ ಎಂದರು.

ಸಿನಿಮಾ ಸೂತ್ರದಾರ ಆರ್.ಚಂದ್ರು ಮಾತನಾಡಿ, "ಮೊದಲು ಸಿನಿಮಾದ ಕಥೆಯನ್ನು ಉಪ್ಪಿ ಸಾರ್‌ಗೆ ಹೇಳಿದಾಗ ಮಾಡೋಣ ಅಂದ್ರು. ಆಮೇಲೆ ಸುದೀಪ್ ಸಾರ್ ಕೂಡ ಅಭಿನಯಿಸಿರುವುದಕ್ಕೆ ನನಗೆ ಹೆಮ್ಮೆ ಇದೆ. ಶಿವಣ್ಣ ಕೂಡ ಉಪ್ಪಿ ಮತ್ತು ಸುದೀಪ್ ಜೊತೆ ನಟಿಸಿ ಖುಷಿ ಹೆಚ್ಚಿಸಿದರು. ಈ‌ ಮೂವರು ಸೂಪರ್​ಸ್ಟಾರ್‌ಗಳಿಗೆ ನಾನು ಋಣಿ ಎಂದು ಹೇಳುತ್ತಾ ಸ್ವಲ್ಪ ಭಾವುಕರಾದರು.

ನಟ ಉಪೇಂದ್ರ ಮಾತನಾಡಿ, ಕಬ್ಜ ಸಿನಿಮಾ ನಿರ್ಮಾಣಕ್ಕೆ ವಾಮನ ರೀತಿಯ ನಿರ್ದೇಶಕ ಚಂದ್ರು ಕಾರಣ. ಅವರು ಮೇಕಿಂಗ್ ತೋರಿಸಿದಾಗ ಥ್ರಿಲ್ ಆದೆ. ಇದು ಟೆಕ್ನಿನಿಷಿಯನ್ ಸಿನಿಮಾ ಎಂದು ರಿಯಲ್ ಸ್ಟಾರ್ ಹೇಳಿದರು.

ಚಿತ್ರದಲ್ಲಿ ಖಡಕ್​ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿರುವ ಕಿಚ್ಚ ಸುದೀಪ್ ಮಾತನಾಡಿ, ಕಬ್ಜ ಸಿನಿಮಾ ನಿರ್ದೇಶಕ ಆರ್.ಚಂದ್ರುಗೋಸ್ಕರ ದೊಡ್ಡ‌‌ ಮಟ್ಟದಲ್ಲಿ ಹಿಟ್ ಆಗಬೇಕು ಎಂದು ಹರಸುವೆ ಎಂದರು. ಸಣ್ಣ ಹಳ್ಳಿಯಿಂದ ಬಂದು ಇಂದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ಮಾಡೋದು ತಮಾಷೆ ಮಾತಲ್ಲ. ಚಂದ್ರು ಕನಸಿನಂತೆ ಕಬ್ಜ ಚಿತ್ರ ಗೆಲ್ಲಬೇಕು ಎಂದರು.

ಇದನ್ನೂ ಓದಿ :'ಕಬ್ಜ'ದಲ್ಲಿ ಉಪ್ಪಿ ಬಲಗೈ ಬಂಟನಾಗಿ ಅನೂಪ್​ ರೇವಣ್ಣ ರೀ ಎಂಟ್ರಿ

ABOUT THE AUTHOR

...view details