ಕರ್ನಾಟಕ

karnataka

ETV Bharat / entertainment

'ಉಸಿರೇ ಉಸಿರೇ' ಶೂಟಿಂಗ್​ ಸೆಟ್​ಗೆ ಕಿಚ್ಚ ಸುದೀಪ್ ಎಂಟ್ರಿ - rajeev Usire Usire movie

ರಾಜೀವ್ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿರುವ 'ಉಸಿರೇ ಉಸಿರೇ' ಸಿನಿಮಾ ಶೂಟಿಂಗ್​ ಸೆಟ್​ಗೆ ಕಿಚ್ಚ ಸುದೀಪ್ ಎಂಟ್ರಿ ಕೊಟ್ಟಿದ್ದಾರೆ.

Sudeep entry to Usire Usire shooting set
'ಉಸಿರೇ ಉಸಿರೇ' ಶೂಟಿಂಗ್​ ಸೆಟ್​ನಲ್ಲಿ ಸುದೀಪ್

By

Published : Apr 7, 2023, 8:26 PM IST

ಸಖತ್​ ಕ್ರೇಜ್​ ಹೊಂದಿರುವ ಸಿಸಿಎಲ್ ಮತ್ತು ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ ​ಬಾಸ್​ ಮೂಲಕ ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಐಡೆಂಟಿಟಿ ಹೊಂದಿರುವ ನಟ ರಾಜೀವ್. ಬಿಗ್ ​ಬಾಸ್ ಕಾರ್ಯಕ್ರಮದಲ್ಲಿ ಭಾಗಿಯಾಗಿ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ರಾಜೀವ್​ ಶೋನಿಂದ ಎಲಿಮಿನೇಟ್​ ಆಗಿದ್ದ ಸಂದರ್ಭವೂ ಸೋಶಿಯಲ್​ ಮೀಡಿಯಾದಲ್ಲಿ ವಿರೋಧ ವ್ಯಕ್ತವಾಗಿ, ಅಭಿಮಾನಿಗಳು ರಾಜೀವ್​ ಪರ ನಿಂತಿದ್ದರು. ಈಗಾಗಲೇ ಜನಮನ ಗೆದ್ದಿರುವ ​ರಾಜೀವ್​​ 'ಉಸಿರೇ ಉಸಿರೇ' ಎಂಬ ಸಿನಿಮಾ ಮೂಲಕ ಸ್ಯಾಂಡಲ್​ವುಡ್​ನಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

ಶೀರ್ಷಿಕೆಯಿಂದಲೇ ಸ್ಯಾಂಡಲ್​ವುಡ್​ನಲ್ಲಿ ಗಮನ ಸೆಳೆಯುತ್ತಿರೋ ಉಸಿರೇ ಉಸಿರೇ ಚಿತ್ರೀಕರಣ ಕೊನೆಯ ಹಂತದಲ್ಲಿದೆ. ಪ್ರಮುಖ ಪಾತ್ರವೊಂದರಲ್ಲಿ ಕಿಚ್ಚ ಸುದೀಪ್ ಕೂಡ ಅಭಿನಯಿಸಲಿದ್ದಾರೆ ಅಂತಾ ಹೇಳಲಾಗಿತ್ತು. ಇದೀಗ ಉಸಿರೇ ಉಸಿರೇ ಸಿನಿಮಾ ಶೂಟಿಂಗ್​ ಸೆಟ್​ಗೆ ವಿಕ್ರಾಂತ್ ರೋಣನ ಎಂಟ್ರಿ ಆಗಿದೆ.

'ಉಸಿರೇ ಉಸಿರೇ' ಶೂಟಿಂಗ್​ ಸೆಟ್​ನಲ್ಲಿ ಸುದೀಪ್

ತಮ್ಮ ಜೊತೆ ಸದಾ ಇರುವ ಗೆಳೆಯರ ಬೆಳವಣಿಗೆಗೆಯಲ್ಲಿ ಸಾಥ್ ಕೊಡುವ ಪೈಲ್ವಾನ್ ಈಗ ಗೆಳಯ ರಾಜೀವ್ ಸಿನಿಮಾದಲ್ಲಿ ಬಹು ಮುಖ್ಯ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಬಗ್ಗೆ ಅಭಿಮಾನಿಗಳು ಕುತೂಹಲ ವ್ಯಕ್ತಪಡಿಸಿದ್ದಾರೆ.

ಸದ್ಯ ಸುದೀಪ್ ಹಾಗು ರಾಜೀವ್ ನಡುವಿನ ಸನ್ನಿವೇಶವನ್ನು ನಿರ್ದೇಶಕ ಸಿ.ಎಂ ವಿಜಯ್ ಚಿತ್ರೀಕರಣ ಮಾಡಿಕೊಂಡಿದ್ದಾರೆ. ವೈಟ್ ಅಂಡ್ ವೈಟ್ ಕಾಸ್ಟ್ಯೂಮ್​ನಲ್ಲಿ ಸುದೀಪ್ ಕಾಣಿಸಿಕೊಂಡಿದ್ದಾರೆ. ರಾಜೀವ್ ರಸ್ತೆ ಅಪಘಾತಕ್ಕೊಳಗಾದ ಸಂದರ್ಭದಲ್ಲಿ ಸುದೀಪ್ ಬಂದು ಸಹಾಯ ಮಾಡುವ ಪಾತ್ರವನ್ನು ನಿರ್ವಹಿಸಿದ್ದಾರೆ. ಬೆಂಗಳೂರಿನಲ್ಲಿ ಸುದೀಪ್ ಮತ್ತು ರಾಜೀವ್ ನಡುವಿನ ಸಿಕ್ವೆನ್ಸ್​ ಶೂಟಿಂಗ್​ ಮಾಡಲಾಗಿದೆ.

ಇದನ್ನೂ ಓದಿ:ಪ್ರಕಾಶ್​ ರಾಜ್,​ ಸುದೀಪ್ ಇಬ್ಬರೂ ಜೂಜಿನ ಜಾಹೀರಾತಿನಿಂದ ಹಣ ಗಳಿಸಿದ್ದಾರೆ: ಚೇತನ್ ಅಹಿಂಸಾ​

ರಾಜೀವ್ ಜೋಡಿಯಾಗಿ ಶ್ರೀಜಿತ ಕಾಣಿಸಿಕೊಂಡಿದ್ದು, ತಾರಾ, ಸುಚೇಂದ್ರ ಪ್ರಸಾದ್, ರಾಜೇಶ್ ನಟರಂಗ, ಆಲಿ, ಬ್ರಹ್ಮಾನಂದಮ್, ಸಾಧುಕೋಕಿಲ, ದೇವರಾಜ್, ಮಂಜು ಪಾವಗಡ, ಜಗಪ್ಪ, ಶಿವು, ಸುಶ್ಮಿತಾ ಹೀಗೆ ದೊಡ್ಡ ತಾರಗಣ ಈ ಚಿತ್ರದಲ್ಲಿದೆ. ಸಿ.ಎಂ ವಿಜಯ್ ಆ್ಯಕ್ಷನ್​ ಕಟ್​ ಹೇಳುತ್ತಿರುವ ಈ ಚಿತ್ರಕ್ಕೆ ಮನು ಛಾಯಾಗ್ರಹಣ, ಕೆ.ಎಂ ಪ್ರಕಾಶ್ ಸಂಕಲನ, ಟೈಗರ್ ಶಿವು ಸಾಹಸ ನಿರ್ದೇಶನ ಹಾಗೂ ಮೋಹನ್ ಮತ್ತು ಹೈಟ್ ಮಂಜು ಅವರ ನೃತ್ಯ ನಿರ್ದೇಶನವಿದೆ. ವಿವೇಕ್ ಚಕ್ರವರ್ತಿ ಈ ಚಿತ್ರದ ಸಂಗೀತ ನಿರ್ದೇಶಕರು. ಎನ್ ಗೊಂಬೆ ಲಾಂಛನದಲ್ಲಿ ಪ್ರದೀಪ್ ಯಾದವ್ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಬಹುತೇಕ ಚಿತ್ರೀಕರಣ ಮುಗಿಸಿರೋ ಉಸಿರೇ ಉಸಿರೇ ಸಿನಿಮಾ‌ ಸದ್ಯದಲ್ಲೇ ಟ್ರೇಲರ್ ಬಿಡುಗಡೆ ಮಾಡಲು ಸಿದ್ಧತೆ ಮಾಡಿಕೊಂಡಿದೆ.

ಇದನ್ನೂ ಓದಿ:ಕೊಲೆ ಬೆದರಿಕೆ ಬೆನ್ನಲ್ಲೇ ಮತ್ತೊಂದು ಬುಲೆಟ್​ ಪ್ರೂಫ್​​ SUV ಕಾರು ಖರೀದಿಸಿದ ಸಲ್ಮಾನ್​ ಖಾನ್​!

ರಾಜೀವ್​ ಮತ್ತು ಸುದೀಪ್​ ಅವರ ಸ್ನೇಹ ಬಹಳ ದಿನಗಳದ್ದು. ಈ ಹಿಂದೆ ಚಿತ್ರದ ಪೋಸ್ಟರ್ ಬಿಡುಗಡೆ ಕಾರ್ಯಕ್ರಮದಲ್ಲಿ ಸುದೀಪ್​ ಅವರು ರಾಜೀವ್​ ಅವರ ಒಳ್ಳೆತನದ ಬಗ್ಗೆ ಮಾತನಾಡಿದ್ದರು. ಈ ಕಾರ್ಯಕ್ರಮಕ್ಕೆ ಬರಲು ಪ್ರಮುಖ ಕಾರಣ ಸ್ನೇಹಿತ ರಾಜೀವ್​. ಈಗಲೂ ಅವರಲ್ಲಿ ಆ ಮುಗ್ಧತೆ ಇದೆ. ಉತ್ತಮರೆಲ್ಲಾ ಸೇರಿ ಮಾಡಿದ ಕೆಲಸ ಒಳೆಯ ಫಲಿತಾಂಶ ಕೊಡುತ್ತದೆ ಎಂದು ಹೇಳಿದ್ದರು.

ABOUT THE AUTHOR

...view details