ಕರ್ನಾಟಕ

karnataka

ETV Bharat / entertainment

ಬದುಕಿದ್ದಾಗ ಒಳ್ಳೇ ಕೆಲಸ ಮಾಡಿ ಈಗ ದೇವರಾಗಿದ್ದಾರೆ.. ಪುನೀತ್​​ ಬಗ್ಗೆ ಸುದೀಪ್ ಗುಣಗಾನ - ಲಕ್ಕಿ ಮ್ಯಾನ್ ಸಿನಿಮಾ ಬಿಡುಗಡೆ ದಿನಾಂಕ

ನಿನ್ನೆ ಕಿಚ್ಚ ಸುದೀಪ್ ಲಕ್ಕಿ ಮ್ಯಾನ್ ಸಿನಿಮಾ ಟ್ರೈಲರ್ ಬಿಡುಗಡೆ ಮಾಡಿ ಪುನೀತ್ ಅವರ​​ ಬಗ್ಗೆ ಗುಣಗಾನ ಮಾಡಿದ್ದಾರೆ.

Sudeep compliments on Puneeth
ಪುನೀತ್​​ ಬಗ್ಗೆ ಸುದೀಪ್ ಗುಣಗಾನ

By

Published : Aug 24, 2022, 12:20 PM IST

Updated : Aug 24, 2022, 12:41 PM IST

ಲಕ್ಕಿಮ್ಯಾನ್ ಸಿನಿಮಾ ಶೀರ್ಷಿಕೆಯಿಂದಲೇ ಟಾಕ್ ಆಗುತ್ತಿರುವ ಚಿತ್ರ. ನಟ ಡಾರ್ಲಿಂಗ್ ಕೃಷ್ಣ, ಸಂಗೀತ ಶೃಂಗೇರಿ ಹಾಗು ರೋಹಿಣಿ ಪ್ರಕಾಶ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಸಿನಿಮಾ. ರಾಜರತ್ನ, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಾಗು ಇಂಡಿಯನ್ ಮೈಕಲ್ ಜಾಕ್ಸನ್ ಎಂದು ಕರೆಯಿಸಿಕೊಳ್ಳುವ ಪ್ರಭುದೇವ ಒಟ್ಟಿಗೆ ನೃತ್ಯ ಮಾಡಿರುವುದು ಈ ಚಿತ್ರದ ವಿಶೇಷತೆ. ಈ ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ಅತಿಥಿ ಪಾತ್ರ ಮಾಡಿದ್ದು, ದೇವರ ರೂಪದಲ್ಲಿ ಕಾಣಿಸಿಕೊಂಡಿದ್ದಾರೆ. ನಿನ್ನೆ ಕಿಚ್ಚ ಸುದೀಪ್ ಲಕ್ಕಿ ಮ್ಯಾನ್ ಸಿನಿಮಾ ಟ್ರೈಲರ್ ಬಿಡುಗಡೆ ಮಾಡಿದ್ರೆ, ತಮಿಳು ನಟ ವಿಜಯ್ ಅಂಟೋನಿ ಈ ಚಿತ್ರದ ಹಾಡೊಂದನ್ನು ಅನಾವರಣ ಮಾಡಿದ್ರು.

ಚಿತ್ರಕ್ಕೆ ಎಸ್ ನಾಗೇಂದ್ರ ಪ್ರಸಾದ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ಬಹುತೇಕ ಚಿತ್ರೀಕರಣ ಮುಗಿಸಿ ಮುಂದಿನ ತಿಂಗಳು ಬಿಡುಗಡೆ ಆಗಲು ಸಜ್ಜಾಗಿರೋ ಲಕ್ಕಿಮ್ಯಾನ್ ಸಿನಿಮಾ ಟ್ರೈಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಸ್ಯಾಂಡಲ್ ವುಡ್ ಹಾಗು ಕಾಲಿವುಡ್ ನಟರ‌ ಸಮಾಗಮ ಆಗಿತ್ತು. ಹೌದು, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸೇರಿದಂತೆ ರಾಘವೇಂದ್ರ ರಾಜ್​ಕುಮಾರ್, ಅವರ ಮಕ್ಕಳಾದ ವಿನಯ್ ರಾಜ್​ಕುಮಾರ್, ಯುವ ರಾಜ್​ಕುಮಾರ್, ಹಾಸ್ಯನಟ ಸಾಧು ಕೋಕಿಲ, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ‌ಸಂದೇಶ್ ನಾಗರಾಜ್, ಕಾಲಿವುಡ್ ನಟರಾದ ಪ್ರಭುದೇವ, ವಿಜಯ್ ಅಂಟೋನಿ, ರಾಜ್ ಸುಂದರಮ್ ಹಾಗು, ಪ್ರಭುದೇವ ತಂದೆ‌ ಮುಗೂರು ಸುಂದರಮ್ ಈ ಕಾರ್ಯಕ್ರಮಕ್ಕೆ ಸಾಕ್ಷಿಯಾದರು‌.

ಲಕ್ಕಿ ಮ್ಯಾನ್ ಸಿನಿಮಾ ಟ್ರೈಲರ್ ಬಿಡುಗಡೆ ಕಾರ್ಯಕ್ರಮ

ಈ ವೇಳೆ ನಟ ಕಿಚ್ಚ ಸುದೀಪ್ ಮಾತನಾಡಿ, ಕೆಲ ವ್ಯಕ್ತಿಗಳೇ ಹಾಗೇ. ಬದುಕಿದ್ದಾಗ‌ ಎಲ್ಲರೂ ಮೆಚ್ಚುವಂತಹ ಕೆಲಸ ಮಾಡುತ್ತಾರೆ. ಅವರು ನಮ್ಮಿಂದ ದೂರವಾದಾಗ ದೇವರು ಆಗ್ತಾರೆ, ಅದುವೇ ಅಪ್ಪು. ನಾನು ಟ್ರೈಲರ್ ನೋಡುತ್ತಿರುವಾಗ ಈ ವ್ಯಕ್ತಿ ದೇವರ ಪಾತ್ರಕ್ಕೂ ಜೀವ ತುಂಬಿದರಲ್ಲ ಅಂತಾ ಅನಿಸಿತ್ತು. ಈ ಸಿನಿಮಾವನ್ನು ಯಾರೂ ಮಿಸ್ ಮಾಡಿಕೊಳ್ಳಬೇಡಿ. ಮಿಸ್ ಮಾಡಿದ್ರೆ ಅದು ನಿಮಗೆ ನಷ್ಟ ಎಂದು ಎಮೋಷನಲ್ ಆಗಿ ಮಾತನಾಡಿದರು.

ಬಳಿಕ ಮಾತನಾಡಿದ ತಮಿಳು ಚಿತ್ರರಂಗದ ನಟ‌, ನಿರ್ದೇಶಕ, ಕಥೆಗಾರ ವಿಜಯ್ ಅಂಟೋನಿ, ಈ ಸಿನಿಮಾ ತಮಿಳಿನಲ್ಲಿ ಸೂಪರ್ ಹಿಟ್ ಆಗಿದೆ. ಚಿತ್ರದ ಟ್ರೈಲರ್ ನೋಡಿದಾಗ ಕನ್ನಡದಲ್ಲಿ ಸೂಪರ್ ಹಿಟ್ ಆಗುತ್ತೆ ಅಂತಾ ಅನಿಸುತ್ತಿದೆ. ಈ ಚಿತ್ರದಲ್ಲಿ ಅಪ್ಪು ಸರ್ ಪಾತ್ರ ಬೊಂಬಾಟ್ ಆಗಿದೆ.‌ ವಿ ಮಿಸ್ ಯೂ ಅಪ್ಪು ಸರ್ ಎಂದು ಹೇಳಿದರು.

ನಟ ಪ್ರಭುದೇವ ಮಾತನಾಡಿ, ನನ್ನ ತಮ್ಮ ನಾಗೇಂದ್ರ ಪ್ರಸಾದ್​ಗೆ ಮೊದಲು ನಮ್ಮ ಅಪ್ಪ ಅವಕಾಶ ಕೊಟ್ಟಿದ್ದರು. ಬದುಕಿದ್ದ ವೇಳೆ ಪುನೀತ್ ರಾಜ್‍ಕುಮಾರ್ ಎರಡನೇ ಚಾನ್ಸ್ ಕೊಟ್ಟಿದ್ದಾರೆ. ಅವನಿಗೆ ಒಳ್ಳೆಯದಾಗಲಿ.‌ ನಾನು ಪುನೀತ್ ಜೊತೆ ಸಾಂಗ್ ಮಾಡಬೇಕಾದ್ರೆ, ಸಖತ್ ಥ್ರಿಲ್ ಆಗಿತ್ತು. ಆದರೆ ಕೊನೆಯ ಸಮಯದಲ್ಲಿ ಪುನೀತ್ ಜೊತೆ ತುಂಬಾ ಆತ್ಮೀಯತೆ ಬೆಳೆದಿತ್ತು. ಅದು ಏಕೆ ಅಂತಾ ಅಂದು ಗೊತ್ತಾಗಲಿಲ್ಲ. ಈಗ ಅರ್ಥ ಆಗುತ್ತಿದೆ ಅಂತಾ ಪ್ರಭುದೇವ ಭಾವುಕರಾದರು.

ಚಿತ್ರದ ನಿರ್ದೇಶಕ ಎಸ್ ನಾಗೇಂದ್ರ ಪ್ರಸಾದ್ ಮಾತನಾಡಿ, ಈ ಸಿನಿಮಾ‌ ಮಾಡಲು ಮೊದಲ ಕಾರಣ ಅಪ್ಪು ಸರ್. ಏಕೆಂದರೆ ಈ ದೇವರ ಪಾತ್ರಕ್ಕೆ ಅಪ್ಪು ಸರ್ ಒಪ್ಪಿಕೊಳ್ಳಲ್ಲ ಅಂದಿದ್ದರೆ ಈ ಸಿನಿಮಾ ಆಗುತ್ತಿರಲಿಲ್ಲ. ಈ ಸಿನಿಮಾದ ಕಥೆ‌ ಮೊದಲು ಹೇಳಿದ್ದು ಅಣ್ಣ ಪ್ರಭುದೇವ ಅವ್ರಿಗೆ ಹಾಗು ಮತ್ತೊಬ್ಬ ಅಣ್ಣ ರಾಜ್ ಸುದಂರಮ್ ಅವ್ರಿಗೆ. ಅಲ್ಲಿಂದ ಶುರುವಾದ ಜರ್ನಿ ಈಗ ಈ ಸಿನಿಮಾ ಬಿಡುಗಡೆ ಹಂತಕ್ಕೆ ಬಂದಿದೆ ಎಂದರು.

ಚಿತ್ರದ ನಾಯಕ ಡಾರ್ಲಿಂಗ್ ಕೃಷ್ಟ ಮಾತನಾಡಿ,‌ ನಾನು ಸಿನಿಮಾ ಇಂಡಸ್ಟ್ರಿಗೆ ಬರೋದಿಕ್ಕೆ ಕಾರಣ ಅಪ್ಪು ಸರ್. ನಾನು ಸಿನಿಮಾ ನಿರ್ದೇಶನ ಮಾಡೋದಿಕ್ಕೆ ಬೆನ್ನು ತಟ್ಟಿದವರು ಸುದೀಪ್ ಸರ್ ಎಂದು ತಿಳಿಸಿದರು.

ಕೃಷ್ಣ ಜೊತೆಗೆ ಸಂಗೀತ ಶೃಂಗೇರಿ ಹಾಗು ರೋಶನಿ ಪ್ರಕಾಶ್ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಆರ್ಯ, ರಂಗಾಯಣ ರಘು, ಸಾಧುಕೋಕಿಲ ನಾಗಭೂಷಣ್, ಸುಂದರ್ ರಾಜ್, ರೋಶಿನಿ ಪ್ರಕಾಶ್, ಸುಧಾ ಬೆಳವಾಡಿ, ಮಾಳವಿಕ ಸೇರಿದಂತೆ ಮುಂತಾದ ಕಲಾವಿದರು ನಟಿಸಿದ್ದಾರೆ. ಜೀವಾ ಶಂಕರ್ ಅವರ ಛಾಯಾಗ್ರಹಣವಿದ್ದು, ಹಾಡುಗಳಿಗೆ V2 ವಿಜಯ್ ಮತ್ತು ವಿಕ್ಕಿ ಸಂಗೀತ ನೀಡಿದ್ದಾರೆ. ಕಾರ್ತಿಕೇಯನ್ ಕ್ರಿಯೇಟಿವ್ ಪ್ರೊಡ್ಯೂಸರ್‌ ಆಗಿ ವರ್ಕ್ ಮಾಡಿದ್ದಾರೆ.

ಇದನ್ನೂ ಓದಿ:ಗಣೇಶನ ಅವತಾರ ಎತ್ತಿದ ಪುನೀತ್ ರಾಜಕುಮಾರ್: ಅಪ್ಪು ಗಣೇಶ ಮೂರ್ತಿಗಳಿಗೆ ಭಾರಿ ಬೇಡಿಕೆ

ಬಾಲಾಜಿ ಅವರ ಸಂಕಲನ, ಅಶ್ವಥ್ ಮಾರಿಮುತ್ತು ಅವರ ಕಥೆ, ಮಂಜು ಮಾಂಡವ್ಯ, ಸಂಪತ್ ಸಿರಿಮನೆ ಹಾಗೂ ರಘುನಂದನ್ ಕಾನಡ್ಕ(ಪುನೀತ್ ಪಾತ್ರಕ್ಕೆ) ಅವರ ಸಂಭಾಷಣೆ, ಶೃಂಗೇರಿ ಸುರೇಶ್ ಅವರ ಸಹನಿರ್ದೇಶನವಿದೆ.‌ ಮೋಹನ್ ಬಿ ಕೆ ಅವರ ಕಲಾನಿರ್ದೇಶನ ಈ ಚಿತ್ರಕ್ಕಿದೆ. ಪಿ.ಆರ್. ಮೀನಾಕ್ಷಿ ಸುಂದರಮ್ ಹಾಗೂ ಸುಂದರ ಕಾಮರಾಜ್ ಅವರು ನಿರ್ಮಾಣ ಮಾಡಿದ್ದು, ಎಪ್ಟಂಬರ್​ 9ರಂದು ಲಕ್ಕಿಮ್ಯಾನ್ ಚಿತ್ರ ತೆರೆಗೆ ಬರಲಿದೆ.

Last Updated : Aug 24, 2022, 12:41 PM IST

ABOUT THE AUTHOR

...view details