ಬಾಲಿವುಡ್ನ ಅಧಿಕೃತ ಜೋಡಿ ನಟ ಹೃತಿಕ್ ರೋಷನ್ ಹಾಗೂ ಗೆಳತಿ ಸಬಾ ಆಜಾದ್ ಸದ್ಯ ಅರ್ಜೆಂಟೀನಾ ಪ್ರವಾಸ ಎಂಜಾಯ್ ಮಾಡುತ್ತಿದ್ದಾರೆ. ಸಬಾ ಆಜಾದ್ ಅವರು ಬ್ಯೂನಸ್ ಐರಿಸ್‌ನಲ್ಲಿರುವ ರೆಸ್ಟೋರೆಂಟ್‌ನಲ್ಲಿ ತೆಗೆದ ಎರಡು ಸೆಲ್ಫಿಗಳನ್ನು ತಮ್ಮ ಇನ್ಸ್ಟಾಗ್ರಾಂ ಪುಟಗಳಲ್ಲಿ ಪೋಸ್ಟ್ ಮಾಡಿದ್ದು, ತಮ್ಮ ಹ್ಯಾಪಿ ಕ್ಷಣಗಳನ್ನು ಹಂಚಿಕೊಂಡಿದ್ದಾರೆ. ಸಬಾ ಆಜಾದ್ ಅವರ ಇನ್‌ಸ್ಟಾಗ್ರಾಮ್ ಸ್ಟೋರಿಗಳು ಗಮನಿಸಿದರೆ, ಇಬ್ಬರೂ ಅರ್ಜೆಂಟೀನಾದಲ್ಲಿ ಸುಂದರ ಕ್ಷಣಗಳನ್ನು ಆನಂದಿಸುತ್ತಿರುವುದು ತಿಳಿಯುತ್ತದೆ.
ಒಂದು ಫೋಟೋದಲ್ಲಿ, ಹೃತಿಕ್ ರೋಷನ್ ಕಪ್ಪು ಸ್ಲೀವ್ ಲೆಸ್ ಟಿ - ಶರ್ಟ್ ಮತ್ತು ಕ್ಯಾಪ್ ಧರಿಸಿ, ಅವರ ಮುಂದೆ ಕೇಕ್ ಮತ್ತು ಪಾನೀಯ ಇರಿಸಿಕೊಂಡು ಕಾಣಿಸಿಕೊಂಡಿದ್ದಾನೆ. ಈ ಫೋಟೋ ಹಂಚಿಕೊಂಡಿರುವ ಸಬಾ ಆಜಾದ್ ಹೃತಿಕ್ ರೋಷನ್ ಅವರನ್ನು ಪ್ರೀತಿಯಿಂದ ತನ್ನ "ಹಿಪ್ಪೋ ಹೃದಯ" ಎಂದು ಶೀರ್ಷಿಕೆಯಲ್ಲಿ ಉಲ್ಲೇಖಿಸಿದ್ದಾರೆ. ಮತ್ತೊಂದು ಸೆಲ್ಫಿ ಹಂಚಿಕೊಂಡಿದ್ದು, ಅವರಿಬ್ಬರೂ ಚಳಿಗಾಲದ ಬಟ್ಟೆ ಮತ್ತು ಉಣ್ಣೆಯ ಟೋಪಿ ಧರಿಸಿರುವುದನ್ನು ಕಾಣಬಹುದು. ಈ ಫೋಟೋಗೆ "ಬ್ಯುನೋಸ್ ಡಯಾಸ್" ಎಂಬ ಶೀರ್ಷಿಕೆ ನೀಡಿದ್ದಾರೆ ನಟಿ ಸಬಾ ಆಜಾದ್.
ಹೃತಿಕ್ ರೋಷನ್ ಹಾಗೂ ಸಬಾ ಆಜಾದ್ ಕಳೆದ ಒಂದು ವರ್ಷದಿಂದ ಡೇಟಿಂಗ್ ಮಾಡುತ್ತಿದ್ದಾರೆ. ಹೃತಿಕ್ ರೋಷನ್ ಅವರು ಅವರ ಮೊದಲ ಪತ್ನಿ ಸುಸ್ಸಾನ್ನೆ ಖಾನ್ ಅವರಿಗೆ ವಿಚ್ಛೇದನ ನೀಡಿದ ಕೆಲವು ವರ್ಷಗಳ ನಂತರ ಹೃತಿಕ್ ರೋಷನ್ ಹಾಗೂ ಸಬಾ ಅವರ ಮಧ್ಯೆ ಪ್ರೀತಿ ಚಿಗುರೊಡೆದಿತ್ತು. ಮೊದಲ ಪತ್ನಿಗೆ ಹೃತಿಕ್ ವಿಚ್ಛೇದನ ನೀಡಿದ್ದರೂ ಇಂದಿಗೂ ಇಬ್ಬರೂ ಸ್ನೇಹಿತರಾಗಿಯೇ ಇದ್ದಾರೆ. ತಮ್ಮ ಇಬ್ಬರು ಪುತ್ರರಾದ ಹ್ರೇಹ್ರಾನ್ ಹಾಗೂ ಹೃದಾನ್ ಅವರಿಗೆ ಪೋಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸುಸ್ಸಾನ್ನೆ ಖಾನ್ ಅವರು ಸದ್ಯ ಅಲಿ ಖಾನ್ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ. ಸುಸ್ಸಾನ್ನೆ ಸಬಾ ಆಜಾದ್ ಜೊತೆಗೂ ಉತ್ತಮ ಗೆಳೆತನ ಹೊಂದಿದ್ದಾರೆ ಎನ್ನುವುದನ್ನು ಇಲ್ಲಿ ಉಲ್ಲೇಖಿಸಲೇಬೇಕು.