ಕರ್ನಾಟಕ

karnataka

ETV Bharat / entertainment

ತಂದೆಯ ಜನ್ಮದಿನದಂದೇ ಮಹೇಶ್ ಬಾಬು ಹೊಸ ಸಿನಿಮಾ ಶೀರ್ಷಿಕೆ ಅನಾವರಣ - ನಟ ಕೃಷ್ಣ

ಮಹೇಶ್ ಬಾಬು ಅವರ ಮುಂದಿನ ಚಿತ್ರದ ಶೀರ್ಷಿಕೆ ಮೇ 31ರಂದು ಅನಾವರಣಗೊಳ್ಳಲಿದೆ ಎಂಬ ಮಾಹಿತಿ ಇದೆ.

Mahesh Babu
ಮಹೇಶ್ ಬಾಬು

By

Published : Apr 19, 2023, 5:40 PM IST

ಸೌತ್​ ಸೂಪರ್​​ ಸ್ಟಾರ್​ ಮಹೇಶ್ ಬಾಬು ಮುಂದಿನ ಚಿತ್ರದ ಮೇಲೆ ಅಭಿಮಾನಿಗಳ ನಿರೀಕ್ಷೆ ಬೆಟ್ಟದಷ್ಟಿದೆ. 'SSMB28' ಎಂದು ತಾತ್ಕಾಲಿಕವಾಗಿ ಶೀರ್ಷಿಕೆ ಇಡಲಾದ ಚಿತ್ರದ ಬಗ್ಗೆ ಚಿತ್ರತಂಡ ಹೆಚ್ಚು ಗುಟ್ಟು ಬಿಟ್ಟುಕೊಟ್ಟಿಲ್ಲ. ವಿಕ್ರಮ್ ಆ್ಯಕ್ಷನ್​ ಕಟ್​ ಹೇಳುತ್ತಿರುವ ಚಿತ್ರದ ಶೀರ್ಷಿಕೆ ಬಿಡುಗಡೆಗೆ ಮುಹೂರ್ತ ಫಿಕ್ಸ್​ ಆಗಿದೆ.

ವಿಕ್ರಮ್ ಮತ್ತು ಮಹೇಶ್ ಬಾಬು ಕಾಂಬಿನೇಶನ್​ನಲ್ಲಿ ಬರುತ್ತಿರುವ ಮುಂಬರುವ ತೆಲುಗು ಚಲನಚಿತ್ರವನ್ನು ತಂದೆ, ದಿವಂಗತ ನಟ ಜಿ. ಕೃಷ್ಣ ಅವರ ಜನ್ಮದಿನದ ಗೌರವಾರ್ಥವಾಗಿ ಮೇ 31ರಂದು ಬಹಿರಂಗಪಡಿಸಲಾಗುವುದು ಎಂದು ವರದಿಯಾಗಿದೆ. ವಿಕ್ರಮ್ ಮತ್ತು ಮಹೇಶ್ ಬಾಬು ಕಾಂಬಿನೇಶನ್​ನಲ್ಲಿ ಬರುತ್ತಿರುವ 3ನೇ ಚಿತ್ರವಿದು. ಈ ಹಿಂದೆ ಅತಡು ಮತ್ತು ಖಲೇಜಾ ಚಲನಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು. ಒಟ್ಟಾಗಿ ಕೆಲಸ ಮಾಡುತ್ತಿರುವ ಮೂರನೇ ಸಿನಿಮಾದಲ್ಲಿ ಮಹೇಶ್ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಕಳೆದ ಕೆಲವು ವರ್ಷಗಳಿಂದ ಮಹೇಶ್ ಬಾಬು ಅವರು ತಮ್ಮ ತಂದೆಯ ಜನ್ಮದಿನದ ಸಂದರ್ಭದಲ್ಲಿ ತಮ್ಮ ಸಿನಿಮಾ ಯೋಜನೆಗಳ ಕುರಿತು ಕೆಲವು ಮಾಹಿತಿ ಹಂಚಿಕೊಳ್ಳುತ್ತಾ ಬಂದಿದ್ದಾರೆ. ಸದ್ಯದ ವರದಿಗಳ ಪ್ರಕಾರ, ಮೇ 31ರಂದು ಚಿತ್ರದ ಶೀರ್ಷಿಕೆಯನ್ನು ಘೋಷಿಸಲು ನಿರ್ಮಾಪಕರು ನಿರ್ಧರಿಸಿದ್ದಾರೆ. ಚಿತ್ರದ ತಾತ್ಕಾಲಿಕ ಶೀರ್ಷಿಕೆ 'SSMB28'. ಚಿತ್ರವು ವಿಳಂಬವಾಗಬಹುದು ಎಂಬ ಹಲವಾರು ವದಂತಿಗಳಿದ್ದ ಕಾರಣ, ಚಿತ್ರ ತಯಾರಕರು ಇತ್ತೀಚೆಗೆ ಬಿಡುಗಡೆ ದಿನಾಂಕವನ್ನು ಬಹಿರಂಗಪಡಿಸಿದ್ದರು. ಸಿನಿಮಾ ಮುಂದಿನ ಜನವರಿ 13ರಂದು ತೆರೆ ಕಾಣಲಿದೆ.

ಮಹೇಶ್ ಬಾಬು ಸೂಪರ್​ ಸ್ಟಾರ್​ ಮಾತ್ರವಲ್ಲದೇ ಪರ್ಫೆಕ್ಟ್​​ ಫ್ಯಾಮಿಲಿ ಮ್ಯಾನ್ ಕೂಡ ಹೌದು. ತಂದೆ ಕೃಷ್ಣ ಅವರೊಂದಿಗೆ ವಿಶೇಷ ಬಾಂಧವ್ಯ ಹೊಂದಿದ್ದರು. ಆದ್ರಿಂದು ಕೃಷ್ಣ ಇಹಲೋಕ ತ್ಯಜಿಸಿದ್ದಾರೆ. ಕೃಷ್ಣ ಅವರ ಜನ್ಮ ವಾರ್ಷಿಕೋತ್ಸವವನ್ನು ವಿಶೇಷವಾಗಿಸಲು ಮೇ 31ರಂದು 'ಎಸ್‌ಎಸ್‌ಎಂಬಿ 28'ಯ ಫೈನಲ್​ ಅಧಿಕೃತ ಶೀರ್ಷಿಕೆಯನ್ನು ಅನಾವರಣಗೊಳಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ:ಟ್ರಿಬೆಕಾ ಫಿಲ್ಮ್​ ಫೆಸ್ಟಿವಲ್​ನಲ್ಲಿ ವರ್ಲ್ಡ್​ ಪ್ರಿಮಿಯರ್​ ಕಾಣಲಿರುವ 'ಆದಿಪುರುಷ್'​ ಚಿತ್ರ

'SSMB28' ಅಲ್ಲದೇ ಮತ್ತೊಂದು ಸಿನಿಮಾ ಮೂಲಕವೂ ಮಹೇಶ್​ ಬಾಬು ಸುದ್ದಿಯಲ್ಲಿದ್ದಾರೆ. ಆರ್​ಆರ್​ಆರ್​ ನಿರ್ದೇಶಕ ಎಸ್‌ಎಸ್ ರಾಜಮೌಳಿ ಅವರೊಂದಿಗೆ ಕೆಲಸ ಮಾಡಲಿದ್ದಾರೆ. ರಾಜಮೌಳಿ ಅವರ ತಂದೆ ವಿಜಯೇಂದ್ರ ಪ್ರಸಾದ್ ಬರೆದಿರುವ ಕಥೆಗೆ ಮಹೇಶ್​ ಬಾಬು ಜೀವ ತುಂಬಲಿದ್ದಾರೆ. ಚಿತ್ರದ ಬಹುತೇಕ ದೃಶ್ಯಗಳನ್ನು ಆಫ್ರಿಕಾದ ಕಾಡುಗಳಲ್ಲಿ ಚಿತ್ರೀಕರಿಸಲಾಗುತ್ತದೆ. ರಾಜಮೌಳಿ ನಿರ್ದೇಶನದ ಬಹುನಿರೀಕ್ಷಿತ ಚಿತ್ರವು ವರ್ಷದ ಕೊನೆಯಲ್ಲಿ ಅಥವಾ 2024ರ ಆರಂಭದಲ್ಲಿ ತೆರೆಗೆ ಬರುವ ನಿರೀಕ್ಷೆ ಇದೆ.

ಇದನ್ನೂ ಓದಿ:ಹೆಸರಿಡದ ಹೊಸ‌ ಚಿತ್ರದಲ್ಲಿ ಲವ್ಲಿ ಸ್ಟಾರ್: ಶೂಟಿಂಗ್​ ಕಂಪ್ಲೀಟ್ ಮಾಡಿದ ಪ್ರೇಮ್ ತಂಡ

ಮಹೇಶ್​ ಬಾಬು ಸಂಪಾದಿಸಿರುವ ಅಭಿಮಾನಿಗಳ ಸಂಖ್ಯೆ ಅಪಾರ. ಇತ್ತ ಬಾಹುಬಲಿ ಖ್ಯಾತಿಯಪ್ರಭಾಸ್ ಅಭಿಮಾನಿಗಳ ಸಂಖ್ಯೆ ಕೂಡ ದೊಡ್ಡದೇ. ಪ್ರಭಾಸ್ ಸೇರಿದಂತೆ ಸ್ಟಾರ್ ನಟರ 'ಪ್ರಾಜೆಕ್ಟ್ ಕೆ' ಸಿನಿಮಾ ಕೂಡ ಮುಂದಿನ ವರ್ಷದ ಜನವರಿ 12 ರಂದು ತೆರೆ ಕಾಣಲಿದೆ. ಎಸ್‌ಎಸ್‌ಎಂಬಿ 28 ಮತ್ತು ಪ್ರಾಜೆಕ್ಟ್ ಕೆ ನಡುವೆ ಯಾವ ಸಿನಿಮಾ ಧೂಳೆಬ್ಬಿಸುತ್ತೆ ಎಂದು ಕಾದು ನೋಡಬೇಕಿದೆ.

ABOUT THE AUTHOR

...view details