ಹಿಂದಿ ಚಿತ್ರರಂಗದಲ್ಲಿ ಮೂರು ದಶಕಕ್ಕೂ ಹೆಚ್ಚು ಸಮಯದಿಂದ ಗುರುತಿಸಿಕೊಂಡಿರುವ ನಟ ಶಾರುಖ್ ಖಾನ್ ಅವರ ಮುಂದಿನ ಬಹುನಿರೀಕ್ಷಿತ ಸಿನಿಮಾ ಜವಾನ್. ಇನ್ನೊಂದು ವಾರದಲ್ಲಿ ಸಿನಿಮಾ ತೆರೆಗಪ್ಪಳಿಸಲಿದ್ದು, ಅಭಿಮಾನಿಗಳು ಉತ್ಸುಕರಾಗಿದ್ದಾರೆ. ಗುರುವಾರ ಚಿತ್ರದ ಟ್ರೇಲರ್ ಅನಾವರಣಗೊಂಡಿದೆ.
ಬುರ್ಜ್ ಖಲೀಫಾದಲ್ಲಿ ಜವಾನ್ ಟ್ರೇಲರ್ ಪ್ರದರ್ಶನ: ಬಾಲಿವುಡ್ ಬಾದ್ ಶಾ SRK ಗುರುವಾರ ಮೂರು ನಿಮಿಷಗಳ ವಿಡಿಯೋ ಅನಾವರಣಗೊಳಿಸಿದ್ದಾರೆ. ಹಿಂದೆಂದೂ ನೋಡಿರದಂತಹ ಅವತಾರದಲ್ಲಿ ಕಿಂಗ್ ಖಾನ್ ಕಾಣಿಸಿಕೊಂಡಿದ್ದಾರೆ. ಜವಾನ್ ಟ್ರೇಲರ್ನ ಕಾಯುವಿಕೆ ಕೊನೆಗೊಂಡಿದೆ. ಚೆನ್ನೈನಲ್ಲಿ ಅಪಾರ ಪ್ರೀತಿ ಗಳಿಸಿದ ನಟ ತಮ್ಮ ಮುಂದಿನ ಬಹು ನಿರೀಕ್ಷಿತ ಚಿತ್ರದ ಟ್ರೈಲರ್ ಅನ್ನು ದುಬೈನ ಬುರ್ಜ್ ಖಲೀಫಾದಲ್ಲಿಯೂ ಅನಾವರಣಗೊಳಿಸಿದ್ದಾರೆ. ಚೆನ್ನೈನಲ್ಲಿ ಸಿನಿಮಾದ ಪ್ರಮೋಶನಲ್ ಈವೆಂಟ್ ಬಹಳ ಅದ್ಧೂರಿಯಾಗಿ ನಡೆದಿತ್ತು. ಇದೀಗ ಬುರ್ಜ್ ಖಲೀಫಾ ಸದ್ದು ಮಾಡಿದ್ದಾರೆ.
ಈವೆಂಟ್ನಲ್ಲಿ ಜನಪ್ರಿಯ ನಟ ಜಿಂದಾ ಬಂದಾ ಹಾಡಿಗೆ ಮೈ ಕುಣಿಸಿದ್ದಾರೆ. ಗ್ರ್ಯಾಂಡ್ ಈವೆಂಟ್ನಲ್ಲಿ ಸೂಪರ್ ಹಿಟ್ ಚಲೇಯಾ ಹಾಡಿನ ಅತರೇಬಿಕ್ ವರ್ಷನ್ ಅನ್ನೂ ಕೂಡ ಅನಾವರಣಗೊಳಿಸಿದರು. ಬಳಿಕ ಅಭಿಮಾನಿಗಳೊಂದಿಗೆ ಪ್ರೀತಿಯ ಮಾತುಕತೆ ನಡೆಸಿದರು. ಎಂದಿನಂತೆ ಅಭಿಮಾನಿಳೆದರು ತಮ್ಮ ಐಕಾನಿಕ್ ಪೋಸ್ ಕೂಡ ನೀಡಿದರು, ತಮ್ಮ ಮುಂದಿನ ಈ ಚಿತ್ರದಲ್ಲಿ ನೀವು ಬಯಸುವಂತಹ ಎಲ್ಲ ಅಂಶಗಳಿರಲಿದೆ ಎಂದು ಕೂಡ ತಿಳಿಸಿದರು.
57ರ ಹರೆಯದ ನಟನ ಎನರ್ಜಿ ಯುವಕರಿಗೆ ಸ್ಫೂರ್ತಿ ಕೊಡುವಂತಿತ್ತು. ಸಿನಿಮಾದಲ್ಲಿ ಸುಮಾರು ಏಳಕ್ಕೂ ಹೆಚ್ಚು ವಿಭಿನ್ನ ನೋಟದಲ್ಲಿ ಕಾಣಿಸಿಕೊಳ್ಳಲಿದ್ದೇನೆ ಎಂಬುದಾಗಿಯೂ ಎಸ್ಆರ್ಕೆ ತಿಳಿಸಿದ್ದಾರೆ. ಬೋಳು ತಲೆಯಲ್ಲಿ ಕಾಣಿಸಿಕೊಳ್ಳುವುದು ಇದೇ ಮೊದಲು ಮತ್ತು ಕೊನೆ ಎಂಬುದಾಗಿಯೂ ತಿಳಿಸಿದ್ದಾರೆ. ತಮ್ಮ ಬೋಳು ತಲೆಯ ಅವತಾರಕ್ಕಾಗಿ ಸಿನಿಮಾ ವೀಕ್ಷಿಸಲು ಅಭಿಮಾನಿಗಳೊಂದಿಗೆ ಕೇಳಿಕೊಂಡರು.