ಮುಂಬೈ:ಬಾಲಿವುಡ್ ಬಾದ್ಶಾ ಶಾರುಖ್ ಖಾನ್ ಹಾಗೂ ದೀಪಿಕಾ ಪಡುಕೋಣೆ ಜೋಡಿಯಾಗಿರುವ 'ಪಠಾಣ್' ಸಿನಿಮಾ ಮುಂದಿನ ವರ್ಷ ಜನವರಿಗೆ 25ಕ್ಕೆ ತೆರೆಗೆ ಬರಲಿದ್ದು, ಭಾನುವಾರ ಸಿನಿಮಾದ ಮೊದಲ ಪೋಸ್ಟರ್ ರಿಲೀಸ್ ಆಗಿದ್ದು, ಪೋಸ್ಟರ್ ನೋಡಿದ ಅಭಿಮಾನಿಗಳು ಇದನ್ನು ಹಾಲಿವುಡ್ನ ಇದ್ರಿಸ್ ಎಲ್ಬಾ ಅವರ ಬೀಸ್ಟ್ನ ಪೋಸ್ಟರ್ಗೆ ಹೋಲಿಕೆ ಇದೆ ಎಂದು ಕಮೆಂಟ್ ಮಾಡಿದ್ದಾರೆ.
ಪೋಸ್ಟರ್ನಲ್ಲಿ ಶಾರುಖ್ ಖಾನ್ ಕೈಯ್ಯಲ್ಲಿ ಶಾಟ್ಗನ್ ಹಿಡಿದು ಕ್ಯಾಮರಾಕ್ಕೆ ಬೆನ್ನು ಹಾಕಿ ಭಾಗಶಃ ಮುಖವನ್ನು ತಿರುಗಿಸಿ ನಿಂತಿದ್ದಾರೆ. ಇದು ಶಾರುಖ್ ಖಾನ್ ಅವರ ಲುಕ್ ಅನ್ನು ಬಹಿರಂಗ ಪಡಿಸಿದ ಮೊದಲ ಪೋಸ್ಟರ್. ಇತ್ತೀಚೆಗಷ್ಟೇ ಸಿನಿರಂಗದಲ್ಲಿ 30 ವರ್ಷಗಳನ್ನು ಪೂರೈಸಿರುವ ಶಾರುಖ್ ಖಾನ್ ನಾಲ್ಕು ವರ್ಷಗಳ ನಂತರ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಬಾದ್ಶಾ ಸಿನಿಮಾ ಬಿಡುಗಡೆಗೆ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
ಅನೇಕ ಅಭಿಮಾನಿಗಳು ಪೋಸ್ಟರ್ ನೋಡಿ ಖುಷಿ ಪಟ್ಟರೂ, ಕೆಲ ನಟಿಜನ್ಸ್ ಕ್ಷಣ ಮಾತ್ರದಲ್ಲಿ ಹಾಲಿವುಡ್ ಬೀಸ್ಟ್ ಸಿನಿಮಾದ ಪೋಸ್ಟರ್ ಅನ್ನು ಕಾಪಿ ಮಾಡಲಾಗಿದೆ ಎಂದು ಕಮೆಂಟ್ಗಳ ಚಾಟಿ ಬೀಸಿದ್ದಾರೆ. ಇದ್ರಿಸ್ ಎಲ್ಬಾ ಅವರ ಬೀಸ್ಟ್ ಪೋಸ್ಟರ್ ಅನ್ನು ಮೊದಲು ಬಿಡುಗಡೆ ಮಾಡಲಾಗಿತ್ತು. ಈ ಪೋಸ್ಟರ್ನಲ್ಲೂ ಎಲ್ಬಾ ಅದೇ ಶೈಲಿಯಲ್ಲಿ ನಿಂತು ಕೈಯ್ಯಲ್ಲಿ ಚಾಕು ಹಿಡಿದುಕೊಂಡಿದ್ದಾರೆ. ಚಿತ್ರ ಈ ವರ್ಷ ಆಗಸ್ಟ್ 19 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ.