ಕರ್ನಾಟಕ

karnataka

ETV Bharat / entertainment

ಎಸ್​​ಆರ್​ಕೆ - ಸಲ್ಲು ಶೂಟಿಂಗ್​ಗೆ ದಿನ ನಿಗದಿ​​​: ಅಭಿಮಾನಿಗಳಲ್ಲಿ ಗರಿಗೆದರಿದ ಕುತೂಹಲ - shahrukh khan in tiger 3

'ಟೈಗರ್ 3' ಸಿನಿಮಾದಲ್ಲಿನ ಶಾರುಖ್ ಖಾನ್ ಮತ್ತು ಸಲ್ಮಾನ್ ಖಾನ್ ಅವರ ವಿಶೇಷ ಆ್ಯಕ್ಷನ್​ ಸೀನ್​ಗೆ ದಿನ ನಿಗದಿಯಾಗಿದೆ. ವರದಿಗಳ ಪ್ರಕಾರ, ಒಂದು ವಾರ ಇವರಿಬ್ಬರ ಶೂಟಿಂಗ್​ ನಡೆಯಲಿದೆ.

SRK Salman shooting
ಎಸ್​​ಆರ್​ಕೆ - ಸಲ್ಲು ಶೂಟಿಂಗ್

By

Published : May 2, 2023, 5:34 PM IST

ಕೊನೆಗೂ ಅಭಿಮಾನಿಗಳ ಕಾಯುವಿಕೆ ಅಂತ್ಯವಾಗಿದೆ. ಬಾಲಿವುಡ್​​ ಸೂಪರ್‌ ಸ್ಟಾರ್​ಗಳಾದ ಶಾರುಖ್ ಖಾನ್ ಮತ್ತು ಸಲ್ಮಾನ್ ಖಾನ್ ಅವರ 'ಟೈಗರ್ 3' ಚಿತ್ರದ ವಿಶೇಷ ಸೀಕ್ವೆನ್ಸ್‌ನ ಚಿತ್ರೀಕರಣ ಶೀಘ್ರದಲ್ಲೇ ಪ್ರಾರಂಭವಾಗಲಿದೆ. ಮೂಲಗಳ ಪ್ರಕಾರ, ಇದೇ ಮೇ. 8ರಂದು 'ಟೈಗರ್ 3' ಚಿತ್ರೀಕರಣಕ್ಕಾಗಿ ಇಬ್ಬರೂ ಒಂದೇ ಸೆಟ್‌ನಲ್ಲಿ ಎದುರು ಬದುರಾಗಲಿದ್ದಾರೆ. ಈ ಹಿಂದೆ ಕನಿಷ್ಠ ಒಂದು ವಾರ ಕಾಲ ಒಟ್ಟಿಗೆ ಚಿತ್ರೀಕರಣ ನಡೆಸಲಿದ್ದಾರೆ ಎಂದು ಮೂಲಗಳು ಬಹಿರಂಗಪಡಿಸಿದ್ದವು.

ಎಸ್​​ಆರ್​ಕೆ - ಸಲ್ಲು ಶೂಟಿಂಗ್

ಎಸ್​ಆರ್​ಕೆ ಮತ್ತು ಸಲ್ಲು ಭಾರತೀಯ ಚಿತ್ರರಂಗದಲ್ಲೇ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿರುವ ಬಹುಬೇಡಿಕೆ ನಟರು. ಈಗಾಗಲೇ ಕೆಲ ಚಿತ್ರದಲ್ಲಿ ಇಬ್ಬರೂ ಒಟ್ಟಿಗೆ ನಟಿಸಿದ್ದಾರೆ. ಈ ಕಾಂಬೋವನ್ನು ಮತ್ತೆ ಮತ್ತೆ ತೆರೆ ಮೇಲೆ ಒಟ್ಟಾಗಿ ನೋಡಬೇಕೆಂಬುದು ಅಭಿಮಾನಿಗಳ ಆಸೆ. ಇದೀಗ ಇಬ್ಬರೂ ಆದಿತ್ಯ ಚೋಪ್ರಾ ಅವರ ಸ್ಪೈ ಥ್ರಿಲ್ಲರ್​​ ಚಿತ್ರಕ್ಕೆ ಮತ್ತೆ ಒಂದಾಗುತ್ತಿದ್ದಾರೆ. ಅವರ ಚಿತ್ರೀಕರಣ ಆರಂಭಕ್ಕೆ ಮೇ 8ನ್ನು ನಿಗದಿ ಪಡಿಸಲಾಗಿದೆ.

ಈ ಇಬ್ಬರು ಅಪ್ರತಿಮ ಮೆಗಾಸ್ಟಾರ್‌ಗಳು ಶೂಟಿಂಗ್ ಸೆಟ್​ಗೆ ಹೆಜ್ಜೆ ಹಾಕಿದಾಗ 'ಟೈಗರ್ 3ರ ಸೆಟ್‌'ಗಳಲ್ಲಿನ ಶಕ್ತಿಯು ಸ್ಪಷ್ಟವಾಗಲಿದೆ. ಟೈಗರ್ 3ನಲ್ಲಿ ಈ ಜೋಡಿ ಕೆಲ ಕ್ರೇಜಿ ಆ್ಯಕ್ಷನ್ ಸೀಕ್ವೆನ್ಸ್​ನಲ್ಲಿ ಕೆಲಸ ಮಾಡಲಿದ್ದಾರೆ. ಶಾರುಖ್ ಮತ್ತು ಸಲ್ಮಾನ್ ಅವರ ಸೀನ್​, ಸೆಟ್​ಗೆ ಆರು ತಿಂಗಳಿನಿಂದ ಕೆಲಸ ನಡೆಯುತ್ತಿದೆ. ಟೈಗರ್​ 3ನಲ್ಲಿ ಪಠಾಣ್​ ಎಂಟ್ರಿ ಬಗ್ಗೆ ಅಭಿಮಾನಿಗಳು ಬೆಟ್ಟದಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಇದನ್ನೂ ಓದಿ:ಮೇ 13ಕ್ಕೆ ಪರಿಣಿತಿ ಚೋಪ್ರಾ - ರಾಘವ್ ಚಡ್ಡಾ ನಿಶ್ಚಿತಾರ್ಥ

ಈ ಹಿಂದೆ ಖಾನ್ ಕನಿಷ್ಠ ಒಂದು ವಾರ ಕಾಲ ಒಟ್ಟಿಗೆ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ ಎಂದು ಮೂಲಗಳು ಬಹಿರಂಗಪಡಿಸಿದ್ದವು. ಈ ಸೀಕ್ವೆನ್ಸ್‌ನ ಚಿತ್ರೀಕರಣಕ್ಕೆ 7 ದಿನ ಮೀಸಲಿಡಲಾಗಿದೆ ಎಂದರೆ ಪ್ರೇಕ್ಷಕರಿಗೆ ಭರ್ಜರಿ ಸೀನ್​ಗಳನ್ನು ಕೊಡಲು ವ್ಯಾಪಕವಾದ ಯೋಜನೆಗಳನ್ನು ಹಾಕಲಾಗಿದೆ ಎಂದೇ ತೋರುತ್ತಿದೆ. ಪಠಾಣ್‌ನಲ್ಲಿ ಜನರು ಈ ಇಬ್ಬರನ್ನೂ ಒಟ್ಟಿಗೆ ನೋಡಿದ ನಂತರ ನಿರೀಕ್ಷೆಗಳು ಹೆಚ್ಚಾಗಿವೆ. ಚಿತ್ರ ತಯಾರಕರು ಸಹ ಪ್ರೇಕ್ಷಕರ ನಿರೀಕ್ಷೆ ಬಹಳ ತಿಳಿದಿದ್ದಾರೆ. ಆದ್ದರಿಂದ, ಪಠಾಣ್ ಮತ್ತು ಟೈಗರ್ ನಡುವಿನ ಈ ದೃಶ್ಯವನ್ನು ಭಾರತೀಯ ಚಿತ್ರರಂಗ ನೆನಪಿಡುವಂತಾಗಬೇಕು ಎಂದು ಚಿತ್ರತಂಡ ಶ್ರಮ ವಹಿಸುತ್ತಿದೆ. ಸಿನಿಮಾ ನಿರ್ಮಾಣ ಸಂಸ್ಥೆ ಯಶ್​ ರಾಜ್​ ಫಿಲ್ಮ್ಸ್ ಮತ್ತು ನಿರ್ದೇಶಕ ಮನೀಶ್ ಶರ್ಮಾ ಇದಕ್ಕೆ ಬೇಕಾದ ಸರ್ವ ತಯಾರಿ ಮಾಡಿಕೊಂಡಿದ್ದು, ಅಭಿಮಾನಿಗಳ ಮನ ಸೆಳೆಯುವ ಯಾವು ವಿಷಯವನ್ನೂ ಬಿಡುತ್ತಿಲ್ಲ ಎಂದು ನಾವು ಭಾವಿಸಬೇಕು.

ಇದನ್ನೂ ಓದಿ:ಸಂಗೀತ ಕಾರ್ಯಕ್ರಮಕ್ಕೆ ತಡೆ: ಎ.ಆರ್ ರೆಹಮಾನ್ ಪ್ರತಿಕ್ರಿಯೆ ಹೀಗಿದೆ

ಟೈಗರ್ ಮೂರನೇ ಭಾಗವನ್ನು ಮನೀಶ್ ಶರ್ಮಾ ನಿರ್ದೇಶಿಸುತ್ತಿದ್ದಾರೆ. ಇದೇ ದೀಪಾವಳಿಗೆ ಚಿತ್ರ ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಮುಂಬರುವ ಈ ಆ್ಯಕ್ಷನ್‌ ಸಿನಿಮಾದಲ್ಲಿ ಇಮ್ರಾನ್ ಹಶ್ಮಿ ಅವರು ಸಲ್ಮಾನ್​ ಎದುರು ಕಾಣಿಸಿಕೊಳ್ಳಲಿದ್ದಾರೆ. ಕತ್ರಿನಾ ಕೈಫ್​ ಚಿತ್ರದ ನಾಯಕ ನಟಿ. ಟೈಗರ್​ 1 ಮತ್ತು 2ರಲ್ಲಿಯೂ ಸಲ್ಲು ಕ್ಯಾಟ್​ ತೆರೆ ಹಂಚಿಕೊಂಡಿದ್ದರು. ಸಲ್ಮಾನ್ ಮತ್ತು ಶಾರುಖ್ ಕೊನೆಯದಾಗಿ 'ಪಠಾಣ್'ನಲ್ಲಿ ತೆರೆ ಹಂಚಿಕೊಂಡಿದ್ದರು. ಈ ಸಿನಿಮಾ ಪ್ರೇಕ್ಷಕರನ್ನು ತಲುಪಿ, ಬಾಕ್ಸ್ ಆಫೀಸ್​ ಲೂಟಿ ಮಾಡುವಲ್ಲಿ ಯಶಸ್ವಿ ಆಯಿತು.

ABOUT THE AUTHOR

...view details