ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಗುರುವಾರ ತಮ್ಮ 58ನೇ ಹುಟ್ಟುಹಬ್ಬ ಆಚರಿಸಿಕೊಂಡರು. 2023 ನಟನಿಗೆ ವಿಶೇಷವಾಗಿರುವ ಹಿನ್ನೆಲೆಯಲ್ಲಿ ಬರ್ತ್ಡೇ ಸೆಲೆಬ್ರೇಶನ್ ಕೂಡ ಅದ್ಧೂರಿಯಾಗಿತ್ತು. ಪ್ರಪಂಚದಾದ್ಯಂತ ಇರುವ ಅಭಿಮಾನಿಗಳಿಗಾಗಿ ಮುಂದಿನ ಬಹುನಿರೀಕ್ಷಿತ ಚಿತ್ರ 'ಡಂಕಿ'ಯ ಟೀಸರ್ ಅನ್ನು ಈಗಾಗಲೇ ಅನಾವರಣಗೊಳಿಸಲಾಗಿದೆ. ಇದರ ಜೊತೆಗೆ, ಶಾರುಖ್ ತಮ್ಮ ಉತ್ಸಾಹಿ ಅಭಿಮಾನಿಗಳೊಂದಿಗೂ ಉತ್ತಮ ಸಮಯ ಕಳೆದರು.
ಫ್ಯಾನ್ಸ್ ಮೀಟ್ ಆ್ಯಂಡ್ ಗ್ರೀಟ್:ಬರ್ತ್ಡೇ ಹಿನ್ನೆಲೆಯಲ್ಲಿ ಅವರು ಮುಂಬೈ ನಗರದಲ್ಲಿ ಫ್ಯಾನ್ಸ್ಗಾಗಿ ಮೀಟ್ ಆ್ಯಂಡ್ ಗ್ರೀಟ್ ಸೆಷನ್ ಆಯೋಜಿಸಿದ್ದರು. ಡಂಕಿ ಸಿನಿಮಾ ನಿರ್ದೇಶಕ ರಾಜ್ಕುಮಾರ್ ಹಿರಾನಿ ಮತ್ತು ಬರಹಗಾರ ಅಭಿಜತ್ ಜೋಷಿ ಅವರೊಂದಿಗೆ ಶಾರುಖ್ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ, ಮುಂಬರುವ ಚಿತ್ರದ ಕುರಿತು ಮಾತನಾಡಿದರು.
ಎಸ್ಆರ್ಕೆ ಮೆಚ್ಚಿನ ಚಿತ್ರ ಯಾವುದು?: ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ ಎಕ್ಸ್ನಲ್ಲಿ ಎಸ್ಆರ್ಕೆ ಫ್ಯಾನ್ಸ್ ಪೇಜ್ಗಳು ಈ ಕಾರ್ಯಕ್ರಮದ ಹಲವು ಫೋಟೋ, ವಿಡಿಯೋಗಳನ್ನು ಹಂಚಿಕೊಂಡಿವೆ. ವಿಡಿಯೋಗಳಲ್ಲಿ ಕಿಂಗ್ ಖಾನ್ ತಮ್ಮ ಅಭಿಮಾನಿಗಳೊಂದಿಗೆ ಸಂವಾದ ನಡೆಸುತ್ತಿರೋದು ಮತ್ತು ಡಂಕಿ ಕುರಿತು ಮಾತನಾಡುತ್ತಿರುವುದನ್ನು ನೋಡಬಹುದು. ಈ ಸಂದರ್ಭದಲ್ಲಿ ವರ್ಷದ ಮೆಚ್ಚಿನ ಚಿತ್ರ ಡಂಕಿ ಎಂಬುದನ್ನು ಅವರು ಬಹಿರಂಗಪಡಿಸಿದರು.
58ರ ಹರೆಯದಲ್ಲೂ ಹ್ಯಾಂಡ್ಸಮ್ ಹಂಕ್:ಶಾರುಖ್ ತಮ್ಮ ಪುತ್ರ ಆರ್ಯನ್ ಖಾನ್ ಅವರ ಜನಪ್ರಿಯ ಬಟ್ಟೆ ಬ್ರ್ಯಾಂಡ್ನ ಟೀ ಶರ್ಟ್ ಧರಿಸಿ ಕಾರ್ಯಕ್ರಮಕ್ಕೆ ಬಂದಿದ್ದರು. ಡೆನಿಮ್, ಜಾಕೆಟ್ನೊಂದಿಗೆ ಸಖತ್ ಹ್ಯಾಂಡ್ಸಮ್ ಆಗಿ ಕಾಣಿಸಿಕೊಂಡರು. ಪೋನಿಟೇಲ್ ಕೇಶವಿನ್ಯಾಸದಲ್ಲಿ ನೋಟ ಬೀರಿದರು.