ಕರ್ನಾಟಕ

karnataka

ETV Bharat / entertainment

ಟೈಗರ್ 3: ಎಸ್​ಆರ್​ಕೆ-ಸಲ್ಲು ಆ್ಯಕ್ಷನ್​ ಸೀನ್​ಗೆ ನಿರ್ಮಾಣವಾಗಲಿದೆ ಬೃಹತ್ ಸೆಟ್ - ಟೈಗರ್ 3 ಶೂಟಿಂಗ್

ಟೈಗರ್ 3 ಶೂಟಿಂಗ್​ಗಾಗಿ ಬೃಹತ್ ಸೆಟ್ ನಿರ್ಮಾಣವಾಗುತ್ತಿದೆ.

Tiger 3
ಟೈಗರ್ 3

By

Published : Mar 22, 2023, 8:05 PM IST

ಸಲ್ಮಾನ್ ಖಾನ್ ಅಭಿನಯದ ಮುಂದಿನ ಬಹು ನಿರೀಕ್ಷಿತ 'ಟೈಗರ್ 3' ಚಿತ್ರದಲ್ಲಿ ಸೂಪರ್‌ಸ್ಟಾರ್ ಶಾರುಖ್ ಖಾನ್ ವಿಶೇಷ ಪಾತ್ರದಲ್ಲಿ ನಟಿಸಲು ಸಿದ್ಧತೆಗಳು ಭರದಿಂದ ಸಾಗಿವೆ. ಮೂಲಗಳ ಪ್ರಕಾರ, 'ಟೈಗರ್ 3'ನಲ್ಲಿ ಸಲ್ಮಾನ್ - ಎಸ್‌ಆರ್‌ಕೆ ಸಾಹಸ ದೃಶ್ಯವನ್ನು ಚಿತ್ರೀಕರಿಸಲು ಬೃಹತ್ ಸೆಟ್ ಅನ್ನು ನಿರ್ಮಿಸಲಾಗುತ್ತದೆ. ಈ ಸೆಟ್​ ನಿರ್ಮಾಣಕ್ಕೆ 45 ದಿನಗಳ ಕಾಲ ಹಿಡಿಯಲಿದೆ.

"ಟೈಗರ್ 3'' ಮೂಲಕ ಸಲ್ಮಾನ್ ಖಾನ್ ಮತ್ತು ಶಾರುಖ್ ಖಾನ್ ಮತ್ತೆ ತೆರೆ ಮೇಲೆ ಒಟ್ಟಾಗಿ ಕಾಣಿಸಿಕೊಳ್ಳಲಿದ್ದಾರೆ. ನಿರ್ಮಾಪಕ ಆದಿತ್ಯ ಚೋಪ್ರಾ ಮತ್ತು ನಿರ್ದೇಶಕ ಮನೀಶ್ ಶರ್ಮಾ ಇದನ್ನು ಚಿತ್ರದ ಅತ್ಯಂತ ದೊಡ್ಡ ಸರ್​ಪ್ರೈಸ್​ ಅಂಶವಾಗಿ ಯೋಜಿಸಿದ್ದಾರೆ. ಯಶ್​ ರಾಜ್​ ಫಿಲ್ಮ್ಸ್ ಸದ್ದಿಲ್ಲದೇ ಚಿತ್ರೀಕರಣಕ್ಕಾಗಿ 45 ದಿನಗಳ ಕಾಲ ಬೃಹತ್ ಸೆಟ್ ಅನ್ನು ನಿರ್ಮಿಸಲು ನಿಯೋಜಿಸಿದೆ. ಸಲ್ಮಾನ್ ಮತ್ತು ಎಸ್‌ಆರ್‌ಕೆ ಕೆಲ ಅದ್ಭುತ ಆ್ಯಕ್ಷನ್​ ಸೀನ್​ಗಳಲ್ಲಿ ಭಾಗಿಯಾಗುವ ದೃಶ್ಯ ಇದೆ ಎಂದು ಮೂಲಗಳು ತಿಳಿಸಿವೆ.

"ಎಸ್‌ಆರ್‌ಕೆ ಅವರ ಪಠಾಣ್​ ಚಿತ್ರದಲ್ಲಿ ನಟ ಸಲ್ಮಾನ್ ಖಾನ್​ ಕಾಣಿಸಿಕೊಂಡಿದ್ದರು. ಅವರ ಆ್ಯಕ್ಷನ್​ ಸೀನ್​ಗಳಿಗೆ ಅಭಿಮಾನಿಗಳು ಜೈಕಾರ ಹೇಳಿದ್ದರು. ಸದ್ಯ ಟೈಗರ್ 3ನಲ್ಲಿ ಕಿಂಗ್ ಖಾನ್ ಕಾಣಿಸಿಕೊಳ್ಳಲಿದ್ದಾರೆ. ಸಲ್ಮಾನ್ ಮತ್ತು ಎಸ್‌ಆರ್‌ಕೆ ಅವರ ಆ್ಯಕ್ಷನ್​ ಸೀನ್​​ಗಳ ಮೇಲೆ ಅಭಿಮಾನಿಗಳು ಬೆಟ್ಟದಷ್ಟು ನಿರೀಕ್ಷೆ ಇಟ್ಟಿದ್ದಾರೆ.

ನಟ ಶಾರುಖ್​ ಖಾನ್​​ ಏಪ್ರಿಲ್‌ನಲ್ಲಿ ಸಲ್ಮಾನ್ ಖಾನ್ ಅವರ ಈ ಚಿತ್ರದಲ್ಲಿ ತಮ್ಮ ಅತಿಥಿ ಪಾತ್ರದ ಚಿತ್ರೀಕರಣವನ್ನು ಪ್ರಾರಂಭಿಸುವ ನಿರೀಕ್ಷೆಯಿದೆ. ಮುಂಬೈನಲ್ಲಿ ಏಳು ದಿನಗಳ ಕಾಲ ಚಿತ್ರೀಕರಣ ನಡೆಸಲಿದ್ದಾರೆ. ಟೈಗರ್ 3 ಅನ್ನು ಮನೀಶ್ ಶರ್ಮಾ ನಿರ್ದೇಶಿಸುತ್ತಿದ್ದಾರೆ. ಈ ಚಿತ್ರವು ಇದೇ ದೀಪಾವಳಿ ಸಂದರ್ಭ ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಬಿಡುಗಡೆ ಆಗಲಿದೆ. ಈ ಆ್ಯಕ್ಷನ್ ಥ್ರಿಲ್ಲರ್ ಚಿತ್ರದಲ್ಲಿ ಇಮ್ರಾನ್ ಹಶ್ಮಿ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರದ ನಾಯಕಿ ಕತ್ರಿನಾ ಕೈಫ್.

ಇದನ್ನೂ ಓದಿ:47ನೇ ವಯಸ್ಸಿಗೆ ಹೆಣ್ಣು ಮಗುವಿಗೆ ಜನ್ಮ ನೀಡಿದ ಮಲಯಾಳಂ ನಟಿ ಆರ್ಯ ಪಾರ್ವತಿಯ ತಾಯಿ!

'ಟೈಗರ್ 3' ಬಾಲಿವುಡ್​ ಸೂಪರ್​ ಸ್ಟಾರ್​ ಸಲ್ಮಾನ್ ಖಾನ್ ಮತ್ತು ಬಹುಬೇಡಿಕೆ ನಟಿ ಕತ್ರಿನಾ ಕೈಫ್ ಮುಖ್ಯಭೂಮಿಕೆಯ ಸ್ಪೈ ಥ್ರಿಲ್ಲರ್ ಫ್ರಾಂಚೈಸಿಯ ಮೂರನೇ ಭಾಗ. 2012ರಲ್ಲಿ ಮೊದಲ ಭಾಗ ತೆರೆಕಂಡಿತ್ತು. ಕಬೀರ್ ಖಾನ್ ಆ್ಯಕ್ಷನ್​ ಕಟ್​​ ಹೇಳಿದ್ದ 'ಏಕ್ ಥಾ ಟೈಗರ್' 2012ರಲ್ಲಿ ತೆರೆಕಂಡು ಹಿಟ್ ಆಗಿತ್ತು. ಅದರ ಮುಂದುವರಿದ ಭಾಗ ಟೈಗರ್​ 2 ಅಲಿ ಅಬ್ಬಾಸ್ ಜಾಫರ್ ನಿರ್ದೇಶನದಲ್ಲಿ ಮೂಡಿ ಬಂದಿತ್ತು. ಈ ಟೈಗರ್ ಜಿಂದಾ ಹೈ ಸಿನಿಮಾ 2017ರಲ್ಲಿ ಬಿಡುಗಡೆ ಆಗಿತ್ತು. ಇದೀಗ 'ಟೈಗರ್ 3' ಬಿಡುಗಡೆ ಹೊಸ್ತಿಲಿನಲ್ಲಿದೆ.

ಇದನ್ನೂ ಓದಿ:'ಕಬ್ಜ 2'ಗೆ ನಿರ್ದೇಶಕ ಆರ್ ಚಂದ್ರು ತಯಾರಿ: ಶಿವಣ್ಣನ ಜೊತೆ ಬಾಲಿವುಡ್ ನಟನ ಎಂಟ್ರಿ?

ABOUT THE AUTHOR

...view details