ಕರ್ನಾಟಕ

karnataka

ETV Bharat / entertainment

ಹೃತಿಕ್ ರೋಷನ್ ಅಭಿನಯದ ಬಹುನಿರೀಕ್ಷಿತ ಕ್ರಿಶ್ 4 ಚಿತ್ರದಲ್ಲಿ ಸೌತ್​ ನಟ - ಹೃತಿಕ್ ರೋಷನ್ ಜೊತೆಗೆ ಸೌತ್ ಸ್ಟಾರ್ ನಟ

ನಟ ಹೃತಿಕ್ ರೋಷನ್ ಅಭಿನಯದ ಕ್ರಿಶ್ 4 ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಈ ಅದ್ಧೂರಿ ಚಿತ್ರದಲ್ಲಿ ಸೌತ್ ನಟರೊಬ್ಬರು ಕೂಡ ನಟಿಸಲಿದ್ದಾರಂತೆ.

South Star Hero In Hrithik Roshan Krrish 4
South Star Hero In Hrithik Roshan Krrish 4

By

Published : Aug 18, 2022, 5:54 PM IST

ವಿಕ್ರಮ್ ವೇದ, ಫೈಟರ್ ಸೇರಿದಂತೆ ಹಲವು ಪ್ರಾಜೆಕ್ಟ್​ಗಳನ್ನು ಒಪ್ಪಿಕೊಂಡಿರುವ ಬಾಲಿವುಡ್​ ನಟ ಹೃತಿಕ್ ರೋಷನ್ ಅವರು ಕ್ರಿಶ್-4 ಚಿತ್ರದ ಚಿತ್ರೀಕರಣಕ್ಕೂ ಸೈ ಅಂದಿದ್ದಾರೆ. ಇತ್ತೀಚೆಗಷ್ಟೇ ಚಿತ್ರದ ಬಗ್ಗೆ ಅಪ್​ಡೇಟ್​ ಕೊಟ್ಟಿದ್ದ ಅವರು, ಶೀಘ್ರದಲ್ಲೇ ಕ್ರಿಶ್​ನ ಮುಂದುವರೆದ ಭಾಗವನ್ನು ಆರಂಭಿಸುವುದಾಗಿ ಹೇಳಿದ್ದರು. ಹಾಗಾಗಿ ಅಂದಿನಿಂದ ಕ್ರಿಶ್-4 ಚಿತ್ರ ಸಾಕಷ್ಟು ಕ್ರೇಜ್​ ಹುಟ್ಟು ಹಾಕುತ್ತಲೇ ಇದೆ. ಇದೀಗ ಈ ಚಿತ್ರದಲ್ಲಿ ಸೌತ್​ ಸ್ಟಾರ್​ ನಟರೊಬ್ಬರು ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದ್ದು, ಸಹಜವಾಗಿ ಮತ್ತೆ ಗಮನ ಸೆಳೆಯುತ್ತಿದೆ. ಅಭಿಮಾನಿಗಳು ಸಹ ಯಾರು ನಟ ಅನ್ನೋದನ್ನು ಸಹ ಹುಡುಕಲಾರಂಭಿಸಿದ್ದಾರೆ.

ರಾಕೇಶ್ ರೋಷನ್ ನಿರ್ದೇಶನದ ಹೃತಿಕ್ ರೋಷನ್ ನಟನೆಯ ಅತಿಮಾನುಷ ಶಕ್ತಿಗಳಿಗೆ ಹೆಸರುವಾಸಿಯಾದ ಕ್ರಿಶ್​ ಚಿತ್ರವು ಈಗಾಗಲೇ ಮೂರು ಭಾಗಗಳಲ್ಲಿ ತೆರೆ ಕಂಡಿದೆ. ಇದೀಗ ನಾಲ್ಕನೇ ಕಂತಿಗೆ ಬಂದು ತಲುಪಿದ್ದು, ಚಿತ್ರದ ಚಿತ್ರೀಕರಣವೂ ಭರದಿಂದ ಸಾಗುತ್ತಿದೆ. ಕಳೆದ ಎರಡು ವರ್ಷಗಳಿಂದ ಚಿತ್ರದ ಬಗ್ಗೆ ಒಂದೊಂದೇ ಮಾಹಿತಿ ಹೊರಬೀಳುತ್ತಿದ್ದು, ಇದೀಗ ಮಗದೊಂದು ಅಪ್​ಡೇಟ್​ ಲಭಿಸಿದೆ.

ನಟ ಹೃತಿಕ್ ಕ್ರಿಶ್ ಪಾತ್ರ ಹುಟ್ಟಿ 15 ವರ್ಷಗಳಾದ ಹಿನ್ನೆಲೆ ಮತ್ತು ತಮ್ಮ ಹುಟ್ಟುಹಬ್ಬದ ನಿಮಿತ್ತ ಚಿತ್ರದ ಬಗ್ಗೆ ಆಸಕ್ತಿದಾಯಕ ಪೋಸ್ಟ್ ಮಾಡಿದ್ದರು. 'ಹಿಂದೆ ಹೋದೆ... ಮುಂದೆ ಏನಾಗುತ್ತೋ ನೋಡೋಣ... ಕ್ರಿಶ್-4 ಎಂದು ಫೋಸ್ಟ್​ಗೆ ಶೀರ್ಷಿಕೆ ಹಾಕಿಕೊಂಡಿದ್ದರು. ಅಲ್ಲಿಂದ ಚಿತ್ರಕ್ಕೆ ಭರ್ಜರಿ ಪ್ರಚಾರ ಸಿಕ್ಕಿದ್ದು, ನಿರ್ದೇಶಕ ರಾಕೇಶ್ ರೋಷನ್ ಕೂಡ ಕ್ರಿಶ್-4 ಚಿತ್ರಕ್ಕೆ ಗ್ರೀನ್​ ಸಿಗ್ನಲ್​ ಕೊಟ್ಟಿದ್ದರು.

ಸದ್ಯ ಕಥೆಯನ್ನು ಬರೆಯುತ್ತಿರುವ ಲೇಖಕ ಹನಿ ಇರಾನಿ ಅವರು ಹೃತಿಕ್ ಜೊತೆಗೆ ಸೌತ್ ಸ್ಟಾರ್ ನಟರೊಬ್ಬರನ್ನು ಸೇರಿಸಿಕೊಂಡಿದ್ದಾರಂತೆ. ಈ ನಟನನ್ನು ಗಮನದಲ್ಲಿಟ್ಟುಕೊಂಡೇ ಈ ಚಿತ್ರದ ಕಥೆಯನ್ನು ಸಿದ್ಧಪಡಿಸುತ್ತಿದ್ದಾರಂತೆ. ಆದರೆ, ಆ​ ನಟ ಯಾರು ಅನ್ನೋದನ್ನು ಮಾತ್ರ ಬಹಿರಂಗಪಡಿಸಿಲ್ಲ. ಒಟ್ಟಿನಲ್ಲಿ ಕ್ರಿಶ್-4 ಒಂದು ಅತ್ಯಾಧುನಿಕ ಸೂಪರ್‌ಹೀರೋ ವೈಜ್ಞಾನಿಕ ಕಾದಂಬರಿಯಾಗಿ ತೆರೆಗೆ ಬರಲಿದೆಯಂತೆ.

ಕ್ರಿಶ್-3 ಎಲ್ಲಿ ಕೊನೆಗೊಂಡಿತೋ ಅಲ್ಲಿಂದಲೇ ಕ್ರಿಶ್-4 ಸಿನಿಮಾ ಶುರುವಾಗಲಿದೆಯಂತೆ. ಮತ್ತೊಂಡೆದೆ ಚಿತ್ರವು ಸ್ಪೇಸ್ ಥೀಮ್ ಮತ್ತು ಟೈಮ್ ಟ್ರಾವೆಲ್ ಕಥೆಯಾಗಿ ಬರಲಿದೆ ಎಂದು ಸಹ ಹೇಳಲಾಗುತ್ತಿದೆ. ಮುಖ್ಯವಾಗಿ ಕ್ರಿಶ್ ತಂದೆ ರೋಹಿತ್ ಮೆಹ್ರಾ ಅವರನ್ನು ಟೈಮ್ ಟ್ರಾವೆಲ್ ಸಹಾಯದಿಂದ ಮರಳಿ ಕರೆತರುವುದು ಕ್ರಿಶ್-4ರ ಕಥೆ ಎಂದು ಹೇಳಲಾಗುತ್ತಿದ್ದು 'ಜಾದು' ಕೂಡ ಪ್ರಮುಖ ಪಾತ್ರ ವಹಿಸಲಿದೆಯಂತೆ.

ಹೃತಿಕ್ ರೋಷನ್ ಸದ್ಯ 'ವಿಕ್ರಮ್ ವೇದ' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದಾದ ನಂತರ ಬಿಗ್ ಬಜೆಟ್ ಆ್ಯಕ್ಷನ್ ಚಿತ್ರ ‘ಫೈಟರ್’ ಬರಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಸದ್ಯ 'ಫೈಟರ್' ಪ್ರಿ-ಪ್ರೊಡಕ್ಷನ್ ಕೆಲಸಲ್ಲಿದೆ. ಇನ್ನೊಂದೆಡೆ ಕ್ರಿಶ್-4 ಚಿತ್ರದ ಕಥೆ ಕೂಡ ಸಿದ್ಧವಾಗುತ್ತಿದೆ. ಈ ಬಿಗ್​ ಬಜೆಟ್​ ಚಿತ್ರಗಳ ಗೊಂಚಲಿನಲ್ಲಿ ಯಾವ ಚಿತ್ರ ತೆರೆಗೆ ಅಪ್ಪಳಿಸಲಿದೆ ಎಂಬುದನ್ನು ಕಾದುನೋಡಬೇಕು.

ಇದನ್ನೂ ಓದಿ: ವ್ಹೀಲ್‌ಚೇರ್​ನಲ್ಲಿ ಕಾಣಿಸಿಕೊಂಡ ಲೆಜೆಂಡರಿ ಬಾಕ್ಸರ್ ಮೈಕ್ ಟೈಸನ್: ಅಭಿಮಾನಿಗಳಲ್ಲಿ ಆತಂಕ

ABOUT THE AUTHOR

...view details