ಕರ್ನಾಟಕ

karnataka

ETV Bharat / entertainment

ಬೆಂಗಳೂರಲ್ಲಿ ವಿಕ್ರಮ್​ ಸಿನಿಮಾದ ಪ್ರಚಾರ : ಬೆಳ್ಳಿತೆರೆಗೆ ಕಮ್​ಬ್ಯಾಕ್​ ಆದ ಕಮಲ್​ ಹಾಸನ್​ - ಬೆಳ್ಳಿತೆರೆಗೆ ಕಮ್​ಬ್ಯಾಕ್​ ಆದ ಕಮಲ್​ ಹಾಸನ್​

ಕಮಲ್ ಹಾಸನ್‌ ಜೊತೆ ವಿಜಯ್ ಸೇತುಪತಿ ಮತ್ತು ಫಹಾದ್ ಫಾಸಿಲ್ ಅಭಿನಯಿಸಿರುವ ವಿಕ್ರಮ್ ಸಿನಿಮಾ‌ ಇದೇ ಜೂನ್ 3ಕ್ಕೆ ಬಿಡುಗಡೆ ಆಗುತ್ತಿದೆ. ಈ ಹಿನ್ನೆಲೆ ಚಿತ್ರದ ಪ್ರಚಾರಕ್ಕಾಗಿ ನಟ ಕಮಲ್ ಹಾಸನ್ ಬೆಂಗಳೂರಿಗೆ ಆಗಮಿಸಿದ್ದರು.

ಬೆಂಗಳೂರಲ್ಲಿ ವಿಕ್ರಮ್​ ಸಿನಿಮಾದ ಪ್ರಚಾರ
ಬೆಂಗಳೂರಲ್ಲಿ ವಿಕ್ರಮ್​ ಸಿನಿಮಾದ ಪ್ರಚಾರ

By

Published : Jun 2, 2022, 9:18 PM IST

ದಕ್ಷಿಣ ಭಾರತದ ವರ್ಸಿಟೈಲ್ ಆ್ಯಕ್ಟರ್ ಅಂತಾನೇ ಗುರುತಿಸಿಕೊಂಡಿರುವ ನಟ ಕಮಲ್ ಹಾಸನ್ ಕಳೆದ ಮೂರು ವರ್ಷದಿಂದ ಸಿನಿಮಾಗಳನ್ನ ಮಾಡದೇ ರಾಜಕೀಯ ಪಕ್ಷ ಕಟ್ಟಿ, ಸೋಲು ಅನುಭವಿಸಿದ್ದರು. ಈಗ ಕಮಲ್ ಹಾಸನ್ ಮತ್ತೆ ವಿಕ್ರಮ್ ಎಂಬ ಗ್ಯಾಂಗ್ ಸ್ಟಾರ್ ಸಿನಿಮಾ ಮೂಲಕ ಪ್ರೇಕ್ಷಕರ ಮುಂದೆ ಬರ್ತಾ ಇದ್ದಾರೆ.

ಕಮಲ್ ಹಾಸನ್‌ ಜೊತೆ ವಿಜಯ್ ಸೇತುಪತಿ ಮತ್ತು ಫಹಾದ್ ಫಾಸಿಲ್ ಅಭಿನಯಿಸಿರುವ ವಿಕ್ರಮ್ ಸಿನಿಮಾ‌ ಇದೇ ಜೂನ್ 3ಕ್ಕೆ ಬಿಡುಗಡೆ ಆಗುತ್ತಿದೆ. ಈ ಹಿನ್ನೆಲೆ ಚಿತ್ರದ ಪ್ರಚಾರಕ್ಕಾಗಿ ನಟ ಕಮಲ್ ಹಾಸನ್ ಬೆಂಗಳೂರಿಗೆ ಆಗಮಿಸಿದ್ದರು. 3.30ಕ್ಕೆ ಶುರುವಾಗಬೇಕಿದ್ದ ಕಾರ್ಯಕ್ರಮ ಎರಡೂವರೆ ಗಂಟೆ ತಡವಾಗಿ ಶುರುವಾಯಿತು. ತಡವಾಗಿ ಬಂದಿದ್ದಕ್ಕೆ ಅಭಿಮಾನಿಗಳಲ್ಲಿ ಈ ವೇಳೆ ಕ್ಷಮೆಯಾಚಿಸಿ, ನಿಮಗೆ ಗೊತ್ತೇ ಇದೆ ಬೆಂಗಳೂರು ಅಂದ್ರೆ ಟ್ರಾಫಿಕ್ ಅಂತಾ ಎಂದು ಹೇಳಿದರು.

ಬೆಂಗಳೂರಲ್ಲಿ ವಿಕ್ರಮ್​ ಸಿನಿಮಾದ ಪ್ರಚಾರ

ವಿಕ್ರಮ್ ಚಿತ್ರದ ಬಗ್ಗೆ ಮಾತನಾಡಿದ ಅವರು, ಚಿತ್ರದಲ್ಲಿ ಕೆಲ ಸಂದೇಶ ಇರುವ ವಿಷಯಗಳಿವೆ ಅಂದರು. ತಮ್ಮ ಫಿಟ್ನೆಸ್ ಸೀಕ್ರೆಟ್ಸ್ ಬಗ್ಗೆ ಮಾತನಾಡಿದ ಕಮಲ್ ಹಾಸನ್, ನಾನು ತುಂಬಾ ವರ್ಷ ಬದುಕಬೇಕು. ಬದುಕಿದಷ್ಟು ದಿನ ನಾನು ಸಿನಿಮಾಗಳನ್ನ ಮಾಡಿ ಎಂಟರ್​​ಟೈನ್​​​ಮೆಂಟ್​ ಮಾಡೋದೆ ನನ್ನ ಫಿಟ್ನೆಸ್ ಸೀಕ್ರೆಟ್ಸ್ ಅಂತಾ ನಗೆ ಪಟಾಕಿ ಸಿಡಿಸಿದರು.

For All Latest Updates

TAGGED:

ABOUT THE AUTHOR

...view details