ಕರ್ನಾಟಕ

karnataka

ETV Bharat / entertainment

ಜಿಯಾ ಖಾನ್​​ ಆತ್ಮಹತ್ಯೆ ಪ್ರಕರಣ: ಸೂರಜ್ ಪಾಂಚೋಲಿ ನಿರ್ದೋಷಿ..ಕೋರ್ಟ್​​ ಮಹತ್ವದ ತೀರ್ಪು - ಈಟಿವಿ ಭಾರತ ಕನ್ನಡ

ನಟಿ ಜಿಯಾ ಖಾನ್​​ ನಿಗೂಢ ಸಾವಿನ ಪ್ರಕರಣದಲ್ಲಿ ಸಿಲುಕಿದ್ದ ನಟ ಸೂರಜ್ ಪಾಂಚೋಲಿ ನಿರ್ದೋಷಿ ಎಂದು ತೀರ್ಪು ಪ್ರಕಟವಾಗಿದೆ.

Sooraj Pancholi safe from  Jiah Khan suicide case
ಜಿಯಾ ಖಾನ್​​ ಆತ್ಮಹತ್ಯೆ ಪ್ರಕರಣದಲ್ಲಿ ಸೂರಜ್ ಪಾಂಚೋಲಿ ನಿರ್ದೋಷಿ

By

Published : Apr 28, 2023, 12:41 PM IST

Updated : Apr 28, 2023, 1:19 PM IST

ಮುಂಬೈ: 10 ವರ್ಷಗಳ ಹಿಂದೆ ನಡೆದ ನಟಿ ಜಿಯಾ ಖಾನ್​​ ಆತ್ಮಹತ್ಯೆ ಪ್ರಕರಣದ ತೀರ್ಪು ಅಂತಿಮವಾಗಿ ಹೊರಬಿದ್ದಿದೆ. ಆರೋಪಗಳನ್ನು ಎದುರಿಸುತ್ತಿದ್ದ ನಟ ಸೂರಜ್ ಪಾಂಚೋಲಿ ಪ್ರಕರಣದಿಂದ ಖುಲಾಸೆಗೊಂಡಿದ್ದಾರೆ. ವಿಶೇಷ ಸಿಬಿಐ ನ್ಯಾಯಾಲಯವು ಇಂದು ತೀರ್ಪು ಪ್ರಕಟಿಸಿದೆ.

ಅಮೆರಿಕದ ಜಿಯಾ ಖಾನ್ ಭಾರತೀಯ ನಟಿಯಾಗಿ ಗುರುತಿಸಿಕೊಂಡಿದ್ದರು. 2013ರ ಜೂನ್ 3ರಂದು ಮುಂಬೈನ ತಮ್ಮ ನಿವಾಸದಲ್ಲಿ ಶವವಾಗಿ ಪತ್ತೆಯಾದರು. ಸಾವಿನ ಸುತ್ತ ಹಲವು ಅನುಮಾನ ಸೃಷ್ಟಿಯಾಗಿತ್ತು. ಸೆಲೆಬ್ರಿಟಿ ಕಪಲ್​​ ಆದಿತ್ಯ ಪಾಂಚೋಲಿ ಮತ್ತು ಝರೀನಾ ವಹಾಬ್ ಪುತ್ರ ಸೂರಜ್ ಪಾಂಚೋಲಿ ಆರೋಪಿಯಾಗಿ ಗುರುತಿಸಿಕೊಂಡಿದ್ದರು.

ದೂರುದಾರರು ಮತ್ತು ಆರೋಪ ಎದುರಿಸುತ್ತಿದ್ದ ಕುಟುಂಬಗಳು ಈ ಪ್ರಕರಣದ ತೀರ್ಪಿಗಾಗಿ ಕಾತರದಿಂದ ಕಾಯುತ್ತಿದ್ದರು. ಈ ಪ್ರಕರಣದಲ್ಲಿ ಎರಡೂ ಕಡೆಯವರ ಸಾಕ್ಷ್ಯವನ್ನು ಗಮನದಲ್ಲಿಟ್ಟುಕೊಂಡು ಕೋರ್ಟ್ ತೀರ್ಪು ನೀಡಿದೆ. ಜಿಯಾ ಖಾನ್ ಆತ್ಮಹತ್ಯೆ ಪ್ರಕರಣದಲ್ಲಿ ನಟ ಸೂರಜ್ ಪಾಂಚೋಲಿ ಅವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಇದರೊಂದಿಗೆ, ಈ ಪ್ರಕರಣದಲ್ಲಿ ಜಿಯಾ ಖಾನ್ ಕುಟುಂಬ ಸದಸ್ಯರು ಉನ್ನತ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಬಹುದು ಎಂದು ಕೂಡ ನ್ಯಾಯಾಲಯ ಹೇಳಿದೆ.

ಜಿಯಾ ಖಾನ್ ಮತ್ತು ಸೂರಜ್ ಪಾಂಚೋಲಿ ಸಂಬಂಧದಲ್ಲಿದ್ದರು. ಇಬ್ಬರೂ ಅನೇಕ ಪರಸ್ಪರರ ಮನೆಗೆ ಭೇಟಿ ನೀಡುತ್ತಿದ್ದರು. ಇಬ್ಬರ ನಡುವಿನ ಪ್ರೇಮ ಸಂಬಂಧವು ತುಂಬಾನೇ ಆಳವಾಗಿತ್ತು ಎನ್ನುವ ಮಾಹಿತಿ ಇದೆ. ಜಿಯಾ ಖಾನ್ ದಿನ ಕಳೆದಂತೆ ಸೂರಜ್ ಬಗ್ಗೆ ಹೆಚ್ಚು ಗಂಭೀರವಾಗಿರುತ್ತಿದ್ದರು. ತಮ್ಮ ಸಂಬಂಧದ ಕಾರಣದಿಂದ ಅನೇಕ ಬಾರಿ ಸುದ್ದಿಯಾಗಿದ್ದರು. ಆದರೆ ಜಿಯಾ ಖಾನ್ ಆತ್ಮಹತ್ಯೆ ಸುದ್ದಿ ಇಡೀ ಬಾಲಿವುಡ್‌ನಲ್ಲಿ ಸಂಚಲನ ಸೃಷ್ಟಿಸಿತ್ತು.

ಆತ್ಮಹತ್ಯೆ: ಜಿಯಾ ಖಾನ್ ಜೂನ್ 3, 2013ರಲ್ಲಿ ತಮ್ಮ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದರು. ಅಲ್ಲಿಂದ ಪೊಲೀಸರು ಡೆತ್​ ನೋಟ್​ ವಶಪಡಿಸಿಕೊಂಡಿದ್ದರು. ಇದರಲ್ಲಿ ನಟಿ ತಮ್ಮ ಅಸಮಾಧಾನಗಳನ್ನು ವಿವರಿಸಿದ್ದರು. ಸೂರಜ್ ಮೇಲೆ ಚಿತ್ರಹಿಂಸೆ, ವಂಚನೆ ಮತ್ತು ಗರ್ಭಪಾತದಂತಹ ಗಂಭೀರ ಆರೋಪಗಳನ್ನು ಮಾಡಿದ್ಯಾರು. ಈ ಆತ್ಮಹತ್ಯೆ ಪತ್ರವನ್ನು ಸಿಬಿಐ ಚಾರ್ಜ್ ಶೀಟ್​ನಲ್ಲಿ ದಾಖಲಿಸಲಾಗಿದೆ. ಇದೀಗ ಈ ಪ್ರಕರಣದಿಂದ ಸೂರಜ್ ಪಾಂಚೋಲಿ ಮತ್ತು ಅವರ ಕುಟುಂಬಕ್ಕೆ ರಿಲೀಫ್ ಸಿಕ್ಕಿದೆ.

ಇದನ್ನೂ ಓದಿ:ಫಿಲ್ಮ್‌ಫೇರ್ ಅವಾರ್ಡ್ಸ್ 2023: ಬರೋಬ್ಬರಿ ಹತ್ತು ಪ್ರಶಸ್ತಿ ಬಾಚಿಕೊಂಡ 'ಗಂಗೂಬಾಯಿ ಕಥಿಯಾವಾಡಿ'

ಪ್ರಕರಣದ ಸಂಪೂರ್ಣ ಮಾಹಿತಿ:

ಜೂನ್ 3, 2013: ಜಿಯಾ ಖಾನ್ ಮುಂಬೈನ ಜುಹು ಅಪಾರ್ಟ್‌ಮೆಂಟ್‌ನಲ್ಲಿ ಶವವಾಗಿ ಪತ್ತೆಯಾಗಿದ್ದರು. 25ಹರೆಯದಲ್ಲಿ ಕೊನೆಯುಸಿರೆಳೆದಿದ್ದರು.

ಜೂನ್ 4, 2013: ಪೊಲೀಸರು ಸಾವಿನ ಪ್ರಕರಣವನ್ನು ದಾಖಲಿಸಿದರು. ಜಿಯಾ ಸಾವಿನ ಸುತ್ತಲಿನ ಅನುಮಾನದ ಆಧಾರದ ಮೇಲೆ ತನಿಖೆ ಪ್ರಾರಂಭಿಸಿದರು.

ಜೂನ್ 5, 2013: ಜಿಯಾ ಅವರ ಅಂತ್ಯಕ್ರಿಯೆಯನ್ನು ಮುಂಬೈನಲ್ಲಿ ನಡೆಸಲಾಯಿತು. ಕುಟುಂಬ ಸದಸ್ಯರು, ಸ್ನೇಹಿತರು ಮತ್ತು ಚಿತ್ರರಂಗದ ಸಹೋದ್ಯೋಗಿಗಳು ಹಾಜರಿದ್ದರು.

ಜೂನ್ 7, 2013: ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಪೊಲೀಸರು ಜಿಯಾ ಅವರ ಗೆಳೆಯ, ನಟ ಸೂರಜ್ ಪಾಂಚೋಲಿ ಅವರನ್ನು ಬಂಧಿಸಿದರು. ಒಂದು ವಾರ ಪೊಲೀಸ್ ಕಸ್ಟಡಿಗೆ ನೀಡಲಾಯಿತು.

ಜೂನ್ 10, 2013: ಸೂರಜ್ ಪಾಂಚೋಲಿ ಅವರಿಗೆ ಮುಂಬೈ ಹೈಕೋರ್ಟ್‌ನಿಂದ ಜಾಮೀನು.

ಜುಲೈ 2, 2013:ಜಿಯಾ ಅವರ ತಾಯಿ ರಬಿಯಾ ಖಾನ್ ಅವರು ತಮ್ಮ ಮಗಳ ಸಾವಿನ ಬಗ್ಗೆ ತನಿಖೆ ನಡೆಸಲು ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ನಿಯೋಜಿಸಲು ಬಾಂಬೆ ಹೈಕೋರ್ಟ್‌ಗೆ ಮನವಿ ಸಲ್ಲಿಸಿದರು.

ಜುಲೈ 3, 2013: ಜಿಯಾ ಆತ್ಮಹತ್ಯೆಗೆ ಕುಮ್ಮಕ್ಕು ನೀಡಿದ ಆರೋಪದಲ್ಲಿ ಸೂರಜ್ ಪಾಂಚೋಲಿ ವಿರುದ್ಧ ಮುಂಬೈ ಪೊಲೀಸರು ಚಾರ್ಜ್‌ಶೀಟ್ ಸಲ್ಲಿಸಿದರು.

ಜುಲೈ 16, 2014:ಮುಂಬೈ ನ್ಯಾಯಾಲಯದಲ್ಲಿ ಜಿಯಾ ಖಾನ್ ಪ್ರಕರಣದ ವಿಚಾರಣೆ ಆರಂಭ.

ಜನವರಿ 2015:ಬಾಂಬೆ ಹೈಕೋರ್ಟ್ ಎರಡನೇ ಬಾರಿಗೆ ಸೂರಜ್ ಪಾಂಚೋಲಿ ಅವರಿಗೆ ಜಾಮೀನು ನೀಡಿತು.

ಅಕ್ಟೋಬರ್ 7, 2017: ಮುಂಬೈ ನ್ಯಾಯಾಲಯದಲ್ಲಿ ಸೂರಜ್ ಪಾಂಚೋಲಿ ವಿರುದ್ಧ ಆತ್ಮಹತ್ಯೆಗೆ ಆರೋಪಗಳು ಕೇಳಿಬಂತು. ಆರೋಪಗಳನ್ನು ದಾಖಲಿಸಲಾಯಿತು.

ಡಿಸೆಂಬರ್ 2017:ರಬಿಯಾ ಖಾನ್ ಸಲ್ಲಿಸಿದ್ದ ಅರ್ಜಿ ಮೇರೆಗೆ ಈ ಪ್ರಕರಣದ ತನಿಖೆಯನ್ನು ಕೇಂದ್ರೀಯ ತನಿಖಾ ದಳ (ಸಿಬಿಐ) ವಹಿಸಿಕೊಂಡಿತು.

ಮಾರ್ಚ್ 2018: ಜಿಯಾ ಆತ್ಮಹತ್ಯೆಗೆ ಸೂರಜ್ ಪಾಂಚೋಲಿ ಪ್ರಚೋದನೆ ನೀಡಿದ ಆರೋಪದ ಮೇಲೆ ಸಿಬಿಐ ಚಾರ್ಜ್ ಶೀಟ್ ಸಲ್ಲಿಸಿತು.

ಮಾರ್ಚ್ 2019:ಸೂರಜ್ ಪಾಂಚೋಲಿ ವಿರುದ್ಧ ಸಿಬಿಐ ಪೂರಕ ಚಾರ್ಜ್ ಶೀಟ್ ಸಲ್ಲಿಸಿದ ನಂತರ ಜಿಯಾ ಖಾನ್ ಪ್ರಕರಣದ ವಿಚಾರಣೆಯು ಹೊಸದಾಗಿ ಪ್ರಾರಂಭವಾಯಿತು.

ಜೂನ್ 2019:ಪ್ರಕರಣದಲ್ಲಿ ಹೆಚ್ಚುವರಿ ಸಾಕ್ಷ್ಯವನ್ನು ಸಲ್ಲಿಸಲು ನ್ಯಾಯಾಲಯವು ರಬಿಯಾ ಖಾನ್‌ ಅವರಿಗೆ ಅನುಮತಿ ನೀಡಿತು.

ಸೆಪ್ಟೆಂಬರ್ 2022:ತನ್ನ ಮಗಳು ಮತ್ತು ನಟಿ ಜಿಯಾ ಖಾನ್ ಅವರ ಆತ್ಮಹತ್ಯೆ ಪ್ರಕರಣದ ಬಗ್ಗೆ ಹೊಸ ತನಿಖೆಯನ್ನು ಕೋರಿ ರಬಿಯಾ ಖಾನ್ ಮಾಡಿದ ಮನವಿಯನ್ನು ಬಾಂಬೆ ಹೈಕೋರ್ಟ್ ವಜಾಗೊಳಿಸಿತು.

ಏಪ್ರಿಲ್ 2023:ಇಂದು ಮುಂಬೈನ ಸಿಬಿಐ ನ್ಯಾಯಾಲಯವು ಜಿಯಾ ಖಾನ್ ಆತ್ಮಹತ್ಯೆ ಪ್ರಕರಣದ ತೀರ್ಪು ಪ್ರಕಟಿಸಿದೆ.

ಇದನ್ನೂ ಓದಿ:ನಟಿ ಜಿಯಾ ಖಾನ್ ಆತ್ಮಹತ್ಯೆ ಪ್ರಕರಣ: 10 ವರ್ಷಗಳ ಬಳಿಕ ಪ್ರಕಟವಾಗಲಿದೆ ತೀರ್ಪು!

Last Updated : Apr 28, 2023, 1:19 PM IST

ABOUT THE AUTHOR

...view details