ಬಾಲಿವುಡ್ನ ದೊಡ್ಡ ನಿರ್ದೇಶಕ ನಿರ್ಮಾಪಕ ಕರಣ್ ಜೋಹರ್ ನಡೆಸಿಕೊಡುತ್ತಿರುವ 'ಕಾಫಿ ವಿತ್ ಕರಣ್' ಶೋಗೆ ಸಂಬಂಧಿಸಿದ ಹಲವು ವಿಷಯಗಳು ಆಗಾಗ ವೈರಲ್ ಆಗುತ್ತಿರುತ್ತವೆ. ಕಾರ್ಯಕ್ರಮಕ್ಕೆ ಬಂದಿದ್ದ ಸೆಲೆಬ್ರಿಟಿಗಳ ಬಳಿ ಕರಣ್ ಬೋಲ್ಡ್ ಆಗಿ ಮಾತನಾಡುತ್ತಾರೆ. ಈ ವಾರ ಸಹೋದರ - ಸಹೋದರಿಯರಿಬ್ಬರು ಕಾಣಿಸಿಕೊಂಡಿದ್ದು, ಹಲವು ಇಂಟ್ರೆಸ್ಟಿಂಗ್ ಸಂಗತಿ ಹಂಚಿಕೊಂಡಿದ್ದಾರೆ.
ಸೋನಂ ಕಪೂರ್ ಮತ್ತು ಅರ್ಜುನ್ ಕಪೂರ್ 'ಕಾಫಿ ವಿತ್ ಕರಣ್' ಶೋಗೆ ಅತಿಥಿಗಳಾಗಿ ಆಗಮಿಸಿದ್ದು, ಕರಣ್ ಜೋಹರ್ ಅವರು ಹಂಚಿಕೊಂಡಿರುವ ಇತ್ತೀಚಿನ ಪ್ರೋಮೋ ವಿಡಿಯೋ ನಗು , ಮನರಂಜನೆಯಿಂದ ಕೂಡಿದೆ. ಸೋನಂ ಬಳಿ ಅರ್ಜುನ್ ಎಷ್ಟು ಸ್ನೇಹಿತರ ಜೊತೆ ಮಲಗಿದ್ದಾರೆ? ಎಂದು ಕರಣ್ ಜೋಹರ್ ಕೇಳಿದಾಗ, ನಟಿ ಪ್ರತಿಕ್ರಿಯಿಸಲು ಹೆಚ್ಚು ಸಮಯ ತೆಗೆದುಕೊಳ್ಳಲಿಲ್ಲ.