ಬಾಲಿವುಡ್ ನಟಿ ಸೋನಂ ಕಪೂರ್ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಪ್ರಸ್ತುತ ನಟಿ ತನ್ನ ಗರ್ಭಾವಸ್ಥೆಯ ಅವಧಿಯನ್ನು ಆನಂದಿಸುತ್ತಿದ್ದು ಆಗಾಗ್ಗೆ ತಮ್ಮ ಬೇಬಿ ಬಂಪ್ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇದಕ್ಕೆ ಅಭಿಮಾನಿಗಳು ಸಾಕಷ್ಟು ಮೆಚ್ಚುಗೆ ವ್ಯಕ್ತಪಡಿಸುತ್ತಿರುತ್ತಾರೆ. ಪತಿ ಆನಂದ್ ಅಹುಜಾ ಜೊತೆಗಿನ ಫೋಟೋಗೆ ಅಭಿಮಾನಿಗಳಿಂದ ಸಾಕಷ್ಟು ಕಾಂಪ್ಲಿಮೆಂಟ್ಸ್ ಸಿಗುವುದು ಸಾಮಾನ್ಯ.
ಇದೀಗ ಸೋನಂ ಕಪೂರ್ ಹೊಸ ಫೋಟೋಗಳನ್ನು ಹಂಚಿಕೊಂಡಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸದ್ದು ಮಾಡುತ್ತಿದೆ. ಪತಿ ಆನಂದ್ ಅಹುಜಾ ಸಖತ್ ಖುಷಿಯಾಗಿರುವ ಫೋಟೋ ಮತ್ತು ಸೋನಂ ಕಪೂರ್ ತಮ್ಮ ಬೇಬಿ ಬಂಪ್ ಫೋಟೋ ಶೇರ್ ಮಾಡಿದ್ದಾರೆ. ಫೋಟೋದೊಂದಿಗೆ ''pool ready!'' ಎಂದು ಬರೆದಿದ್ದಾರೆ. ಅಭಿಮಾನಿಗಳಿಗಾಗಿ ಹಂಚಿಕೊಂಡಿರುವ ಫೋಟೋಗೆ ಪ್ರತಿಕ್ರಿಯೆಗಳು ಬರುತ್ತಿವೆ.