ಮುಂಬೈ: ಬಾಲಿವುಡ್ನ 'ದಬಾಂಗ್' ಹುಡುಗಿ ಸೋನಾಕ್ಷಿ ಸಿನ್ಹಾ ತಮ್ಮ ಮುಂಬರುವ ಚಿತ್ರ 'ನಿಕಿತಾ ರಾಯ್ - ಆಂಡ್ ದಿ ಬುಕ್ ಆಫ್ ಡಾರ್ಕ್ನೆಸ್' ಚಿತ್ರದಲ್ಲಿ ಅಭಿನಯಿಸಲು ತುಂಬಾ ಉತ್ಸುಕರಾಗಿದ್ದಾರೆ. ಇತ್ತೀಚೆಗಷ್ಟೇ ಚಿತ್ರದ ಫಸ್ಟ್ ಲುಕ್ ರಿಲೀಸ್ ಆಗಿದ್ದು, ಇದೀಗ ಶೂಟಿಂಗ್ ಪ್ರಾರಂಭಿಸಲು ಚಿತ್ರತಂಡ ಸಿದ್ಧತೆ ಮಾಡಿಕೊಂಡಿದೆ.
ನಟಿ ಸೋನಾಕ್ಷಿ ಸಿನ್ಹಾ ತಮ್ಮ ಕುಶ್ ಎಸ್ ಸಿನ್ಹಾ ಅವರ ಚೊಚ್ಚಲ ನಿರ್ದೇಶನದಲ್ಲಿ ಚಿತ್ರ ಮೂಡಿಬರಲಿದ್ದು, ಸೋನಾಕ್ಷಿ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ. ಇದೊಂದು ಹಾರರ್ ಹಿನ್ನೆಲೆಯುಳ್ಳ ಸಿನಿಮಾ.
ಈ ಸಿನಿಮಾವನ್ನು ಎನ್ವಿಬಿ ಫಿಲ್ಮ್ನಡಿ ನಿಕಿ ಭಗ್ನಾನಿ, ವಿಕ್ಕಿ ಭಗ್ನಾನಿ ಮತ್ತು ಅಂಕುರ್ ತಕ್ರಾನಿ ನಿರ್ಮಿಸುತ್ತಿದ್ದಾರೆ. ಕುಶ್ ಅವರ ಕ್ರಾಟೋಸ್ ಎಂಟರ್‌ಟೈನ್‌ಮೆಂಟ್ ಮತ್ತು ನಿಕಿತಾ ಪೈ ಫಿಲ್ಮ್ಸ್ ಸಿನಿಮಾ ಪ್ರಸ್ತುತಪಡಿಸುತ್ತಿದೆ.