ಮುಂಬೈ: ಪೀಪಲ್ ಫಾರ್ ಎಥಿಕಲ್ ಟ್ರೀಟ್ಮೆಂಟ್ ಆಫ್ ಅನಿಮಲ್ಸ್ (ಪೆಟಾ) ಪರವಾಗಿ ಹೊಸ ಅಭಿಯಾನ ಆರಂಭಿಸಿರುವ ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ಪ್ರಾಣಿಗಳ ರಕ್ಷಣೆಗೆ ಮುಂದಾಗುವಂತೆ ಸಂದೇಶ ರವಾನಿಸಿದ್ದಾರೆ.
ಪೆಟಾ ಇಂಡಿಯಾ ಕ್ಯಾಂಪೇನ್ ಆರಂಭಿಸಿರುವ ನಟಿ ಸೋನಾಕ್ಷಿ ಸಿನ್ಹಾ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಒಂದನ್ನು ಶೇರ್ ಮಾಡಿದ್ದಾರೆ. ರಕ್ತದ ಕಲೆಯಂತೆ ಕಾಣುತ್ತಿರುವ ಲೆದರ್ ಬ್ಯಾಗ್ ಹಿಡಿದು ನಟಿ ಪೋಸ್ ನೀಡಿದ್ದಾರೆ. ನಿಮ್ಮ ಬ್ಯಾಗ್ ರಕ್ತಸ್ರಾವವಾಗಿದೆಯೇ? ಎಂಬ ಕ್ಯಾಪ್ಷನ್ ಕೂಡ ನೀಡಿದ್ದಾರೆ. ಈ ಮೂಲಕ ಲೆದರ್ ಬ್ಯಾಗ್ ಅನ್ನು (ಲೆದರ್ನ ಯಾವುದೇ ವಸ್ತುಗಳು) ಮಿತಿಗೊಳಿಸಿ ಪರಿಸರ ಸ್ನೇಹಿ, ಪ್ರಾಣಿ ಸ್ನೇಹಿ ಬ್ಯಾಗ್ ಅನ್ನು ಉಪಯೋಗಿಸಿ ಎನ್ನುವ ಸಂದೇಶ ಕೊಟ್ಟಿದ್ದಾರೆ.