ನಟಿ ಸೋನಾಕ್ಷಿ ಸಿನ್ಹಾ ಮತ್ತು ಹುಮಾ ಖುರೇಷಿ ಅಭಿನಯದ 'ಡಬಲ್ ಎಕ್ಸ್‌ಎಲ್' ಚಿತ್ರದ ಟೀಸರ್ ಇಂದು ಅನಾವರಣಗೊಂಡಿದೆ. 30 ಸೆಕೆಂಡುಗಳ ಟೀಸರ್ ಹೆಚ್ಚುವರಿ ತೂಕ ಹೊಂದಿದವರಿಗೆ ಸಂಬಂಧಿಸಿದ್ದಾಗಿದೆ.
ಚಿತ್ರದ ನಿರ್ಮಾಣ ಸಂಸ್ಥೆ ಟಿ-ಸೀರಿಸ್ ತಮ್ಮ ಅಧಿಕೃತ ಯೂಟ್ಯೂಬ್ ಚಾನಲ್‌ನಲ್ಲಿ 30-ಸೆಕೆಂಡ್‌ಗಳ ಕಿರು ಟೀಸರ್ ಅನ್ನು ಹಂಚಿಕೊಂಡಿದೆ. ಇದು ನಾಯಕಿರ ಒಂದು ನೋಟ ನೀಡಿದೆ. ಸೋನಾಕ್ಷಿ ಮತ್ತು ಹುಮಾ ಬೆಂಚ್ ಮೇಲೆ ಕುಳಿತು ಸಮಾಜವು ಸೌಂದರ್ಯ, ದೇಹದ ತೂಕವನ್ನು ಹೇಗೆಲ್ಲಾ ಅಳೆಯುತ್ತದೆ ಎಂಬುದರ ಬಗ್ಗೆ ಚರ್ಚೆ ನಡೆಸಿದ್ದಾರೆ. ಪ್ರೇಕ್ಷಕರು ಸಂಕ್ಷಿಪ್ತ ಫಸ್ಟ್ ಲುಕ್ ಅನ್ನು ಮೆಚ್ಚಿದ್ದಾರೆ. ಹೆಚ್ಚಿನದಕ್ಕಾಗಿ ಕುತೂಹಲದಿಂದ ಕಾಯುತ್ತಿದ್ದೇವೆ ಎಂದು ಅಭಿಮಾನಿಗಳು ತಿಳಿಸಿದ್ದಾರೆ.