ಕರ್ನಾಟಕ

karnataka

'ಗರ್ಭಪಾತವಾಗಿದ್ರೂ ಮರುದಿನವೇ ಕೆಲಸಕ್ಕೆ ಬನ್ನಿ ಅಂದಿದ್ರು': ಸ್ಮೃತಿ ಇರಾನಿ ಹೇಳಿದ ಕಹಿ ಘಟನೆ

By

Published : Mar 26, 2023, 9:17 AM IST

ಸಂದರ್ಶನವೊಂದರಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವೆ ಸ್ಮೃತಿ ಇರಾನಿ ಅವರು ತಮ್ಮ ಜೀವನದ ಸಂಕಷ್ಟದ ದಿನಗಳ ಕುರಿತಾಗಿ ಹೇಳಿದ್ದಾರೆ.

Smriti Irani
ಸ್ಮೃತಿ ಇರಾನಿ

ಮುಂಬೈ: ಮಾಜಿ ನಟಿ ಮತ್ತು ಪ್ರಸ್ತುತ ಕೇಂದ್ರದ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವೆ ಸ್ಮೃತಿ ಇರಾನಿ ಅವರು ತಮ್ಮ ಕಷ್ಟದ ದಿನಗಳನ್ನು ಮೆಲುಕು ಹಾಕಿದ್ದಾರೆ. ಮಾಡೆಲ್ ಆಗಿ ವೃತ್ತಿಜೀವನ ಪ್ರಾರಂಭಿಸಿದ್ದ ಸ್ಮೃತಿ, ನಂತರ ರಾಜಕೀಯ ರಂಗಕ್ಕೆ ಕಾಲಿಟ್ಟಿದ್ದರು. ರಾಜಕೀಯ ಕ್ಷೇತ್ರಕ್ಕೆ ಬರುವ ಮುನ್ನ ಕಿರುತೆರೆ ನಟಿಯಾಗಿ ಖ್ಯಾತಿ ಗಳಿಸಿದ್ದರು. ಇದೀಗ ಅವರು 'ಕ್ಯೂಂಕಿ ಸಾಸ್ ಭಿ ಕಭಿ ಬಹು ಥಿ' ಧಾರವಾಹಿ ಚಿತ್ರೀಕರಣದ ದಿನಗಳ ಅಹಿತಕರ ಘಟನೆಯೊಂದನ್ನು ಹೇಳಿದ್ದಾರೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆಯಾಗಿ ಕಾರ್ಯ ನಿರ್ವಹಿಸುತ್ತಿರುವ ಸ್ಮೃತಿ ಇರಾನಿ ಗರ್ಭಪಾತವಾಗಿದ್ದರೂ ಕೂಡ ಶೂಟಿಂಗ್​ ಸೆಟ್​ಗೆ ಹೋಗಿ ಕೆಲಸ ಮಾಡಿದ್ದ ವಿಚಾರ ತಿಳಿಸಿದ್ದಾರೆ. "ಕ್ಯೂಂಕಿ ಸಾಸ್ ಭಿ ಕಭಿ ಬಹು ಥಿ" ಧಾರವಾಹಿಯಲ್ಲಿ ತುಳಸಿ ವಿರಾನಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದೆ. ಅದೇ ಸಮಯದಲ್ಲಿ ರವಿ ಚೋಪ್ರಾ ನಿರ್ದೇಶನದ ಮತ್ತೊಂದು ಶೋ 'ರಾಮಾಯಣ'ದಲ್ಲಿ ಸಹ ಕೆಲಸ ಮಾಡುತ್ತಿದ್ದೆ. ಗರ್ಭಪಾತವಾಗಿದೆ ಎಂದು ಹೇಳಿದ್ರೂ ಕೂಡ ನಿರ್ಮಾಪಕಿ ಏಕ್ತಾ ಕಪೂರ್ ನನ್ನನ್ನು ನಂಬಲಿಲ್ಲ. ಬಳಿಕ ನಾನು ವೈದ್ಯಕೀಯ ದಾಖಲೆಗಳೊಂದಿಗೆ ಏಕ್ತಾ ಅವರ ಕಚೇರಿಗೆ ಹೋಗಿ ತೋರಿಸಿದೆ."

ಇದನ್ನೂ ಓದಿ:ಜಾಕ್ವೆಲಿನ್​ ವಿರುದ್ಧ ನೋರಾ ಮಾನನಷ್ಟ ಮೊಕದ್ದಮೆ: ಮೇ 22ಕ್ಕೆ ವಿಚಾರಣೆ ಮುಂದೂಡಿಕೆ

"ನಾನು ಗರ್ಭಿಣಿಯಾಗಿದ್ದೇನೆ ಎಂದು ನನಗೆ ತಿಳಿದಿರಲಿಲ್ಲ. ಧಾರವಾಹಿ ಶೂಟಿಂಗ್​ ಸೆಟ್‌ನಲ್ಲಿದ್ದೆ. ಆರೋಗ್ಯದಲ್ಲಿ ಏರುಪೇರಾದ ಕಾರಣ ಮನೆಗೆ ಹೋಗಲು ಅನುಮತಿ ಕೇಳಿದೆ. ಅಂದು ಮಳೆ ಬರುತ್ತಿತ್ತು, ಆಟೋ ನಿಲ್ಲಿಸಿ ಡ್ರೈವರ್‌ಗೆ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಮನವಿ ಮಾಡಿದೆ. ಆಸ್ಪತ್ರೆ ತಲುಪಿದಾಗ ನರ್ಸ್​ವೊಬ್ಬರು ಓಡಿ ಬಂದು ಆಟೋಗ್ರಾಫ್ ಕೇಳಿದರು. ಈ ವೇಳೆ ನನಗೆ ರಕ್ತಸ್ರಾವವಾಗುತ್ತಿತ್ತು. ಬಳಿಕ ನನ್ನನ್ನು ಆಸ್ಪತ್ರೆಗೆ ದಾಖಲಿಸಿಕೊಂಡರು."

"ರಾಮಾಯಣ ಧಾರವಾಹಿಯಲ್ಲಿ ಸೀತೆಯ ಪಾತ್ರ ಮಾಡುತ್ತಿದ್ದೆ. ಇದು ಪ್ರಮುಖ ಪಾತ್ರವಾಗಿದ್ದರಿಂದ ಚಿತ್ರೀಕರಣ ಮಿಸ್​ ಮಾಡಲು ಸಾಧ್ಯವಿರಲಿಲ್ಲ. ಹೀಗಿದ್ದರೂ ಗರ್ಭಪಾತವಾದ ವಿಷಯವನ್ನು ನಿರ್ದೇಶಕ ರವಿ ಚೋಪ್ರಾಗೆ ತಿಳಿಸಿದೆ. ಅವರು ವಿಶ್ರಾಂತಿ ಪಡೆಯುವಂತೆ ಹೇಳಿದರು. ನೀವು ಕೆಲಸಕ್ಕೆ ಬರುವ ಅಗತ್ಯವಿಲ್ಲ. ನಾವು ಹೇಗೋ ಮ್ಯಾನೇಜ್​ ಮಾಡುತ್ತೇವೆ ಎಂದರು. ಆ ಸಮಯದಲ್ಲಿ ಕ್ಯುಂಕಿ ಸಾಸ್ ಭಿ ಕಭಿ ಬಹು ಥಿ ಧಾರವಾಹಿ ತಂಡದಿಂದಲೂ ಕರೆ ಬಂತು. ಗರ್ಭಪಾತವಾಗಿರುವ ವಿಚಾರ ಹೇಳಿದ್ರೂ ಕೆಲಸಕ್ಕೆ ಬರುವಂತೆ ಹೇಳಿದರು."

"ಆಸ್ಪತ್ರೆಗೆ ದಾಖಲಾದ ಮರುದಿನ ನಾನು ಕ್ಯುಂಕಿ ಸಾಸ್ ಭಿ ಕಭಿ ಬಹು ಥಿ ಸೆಟ್‌ಗೆ ಮರಳಿದೆ. ಅಲ್ಲಿ ಸಹ-ನಟರೊಬ್ಬರು ನಾನು ಗರ್ಭಪಾತದ ಬಗ್ಗೆ ಸುಳ್ಳು ಹೇಳುತ್ತಿದ್ದೇನೆಂದು ನಿರ್ಮಾಪಕರಿಗೆ ಹೇಳಿರುವುದು ಕಂಡುಬಂತು. ಆ ಸಮಯದಲ್ಲಿ ಮನೆಯ ಇಎಂಐ ಪಾವತಿಸಲು ನನಗೆ ಹಣದ ಅಗತ್ಯವಿತ್ತು. ನಾನು ಏಕ್ತಾಗೆ ನನ್ನೆಲ್ಲಾ ವೈದ್ಯಕೀಯ ದಾಖಲೆಗಳನ್ನು ತೆಗೆದುಕೊಂಡು ಹೋಗಿ ತೋರಿಸಿದೆ. ಭ್ರೂಣ ಇದ್ದಿದ್ದರೆ ಅದನ್ನೂ ನಾನು ನಿಮಗೆ ತೋರಿಸುತ್ತಿದ್ದೆ ಎಂದು ಹೇಳಿದೆ" ಅಂತಾ ತಮ್ಮ ಕಹಿ ಘಟನೆ ನೆನಪಿಸಿಕೊಂಡಿದ್ದಾರೆ.

ABOUT THE AUTHOR

...view details