ಕರ್ನಾಟಕ

karnataka

ETV Bharat / entertainment

ಸೆ.15ಕ್ಕೆ ರಾಮ್​ ಪೋತಿನೇನಿ-ಶ್ರೀಲೀಲಾ ನಟನೆಯ ಸ್ಕಂದ ತೆರೆಗೆ.. ಕುತೂಹಲ ಹೆಚ್ಚಿಸಿದ ಪೋಸ್ಟರ್ - ram pothineni

Skanda Movie Poster: ರಾಮ್​ ಪೋತಿನೇನಿ ಮತ್ತು ಶ್ರೀಲೀಲಾ ಮುಖ್ಯಭೂಮಿಕೆಯ ಸ್ಕಂದ ಸಿನಿಮಾದ ಪೋಸ್ಟರ್ ರಿಲೀಸ್​ ಆಗಿದೆ.

Skanda movie poster
ಸ್ಕಂದ ಪೋಸ್ಟರ್

By

Published : Aug 12, 2023, 8:26 PM IST

ಟಾಲಿವುಡ್​ ಸ್ಟಾರ್​ ಹೀರೋ ರಾಮ್​ ಪೋತಿನೇನಿ ಮತ್ತು ಬೋಯಾಪಾಟಿ ಶ್ರೀನು​ ಕಾಂಬೋದ ಬಹುನಿರೀಕ್ಷಿತ ಚಿತ್ರ ಸ್ಕಂದ. ಹೈ ವೋಲ್ಟೇಜ್​ ಪ್ಯಾನ್​ ಇಂಡಿಯಾ ಸಿನಿಮಾ ಸ್ಕಂದ ಸಿನಿಪ್ರಿಯರಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ. ರಾಮ್​ ಪೋತಿನೇನಿ ಜೊತೆ ಕನ್ನಡತಿ, ಯುವ ತಾರೆ, ಸೆನ್ಸೇಶನಲ್​ ತಾರೆ ಶ್ರೀಲೀಲಾ ಕಾಣಿಸಿಕೊಳ್ಳಲಿದ್ದಾರೆ. ಸಿನಿಮಾ ಬಿಡುಗಡೆಗೆ ಇನ್ನೊಂದು ತಿಂಗಳು ಬಾಕಿ ಇದ್ದು, ಪ್ರೇಕ್ಷಕರು ಚಿತ್ರ ವೀಕ್ಷಣೆಗೆ ಕಾತರರಾಗಿದ್ದಾರೆ.

ಮಾಸ್​ ಆ್ಯಕ್ಷನ್​ ಎಂಟರ್​ಟೈನ್​​ಮೆಂಟ್​ ಸಿನಿಮಾ ಸ್ಕಂದ ಮುಂದಿನ ಸೆಪ್ಟೆಂಬರ್​​ 15 ರಂದು ದೇಶಾದ್ಯಂತ ಅದ್ಧೂರಿಯಾಗಿ ಬಿಡುಗಡೆ ಆಗಲಿದೆ. ಸಿನಿಮಾ ರಿಲೀಸ್​ ಡೇಟ್​ ಹತ್ತಿರ ಬರುತ್ತಿದ್ದಂತೆ ಚಿತ್ರತಂಡ ವಿಭಿನ್ನ ಪ್ರಚಾರ ಪ್ರಾರಂಭಿಸಿದೆ. ಇತ್ತೀಚೆಗಷ್ಟೇ ಸಿನಿಮಾದ ಹಾಡು ಅನಾವರಣಗೊಂಡು ಸಿನಿಪ್ರಿಯರ ಮನ ಗೆದ್ದಿತ್ತು. ಇದೀಗ ಚಿತ್ರ ಪೋಸ್ಟರ್ ರಿಲೀಸ್​ ಆಗುವ ಮೂಲಕ ಅಭಿಮಾನಿಗಳ ಕುತೂಹಲ ಹೆಚ್ಚಿಸಿದ್ದಾರೆ.

ರಾಮ್​ ಪೋತಿನೇನಿ ಮತ್ತು ಬೋಯಾಪಾಟಿ ಶ್ರೀನು​ ಕಾಂಬಿನೇಶನ್​ನ ಸ್ಕಂದ ಸಿನಿಮಾ ಪ್ರಚಾರ ಆನ್​ಲೈನ್​ನಲ್ಲಿ ವೇಗ ಪಡೆದುಕೊಂಡಿದೆ. ಪ್ರಮೋಶನ್​ ಮೂಲಕ ಅಭಿಮಾನಿಗಳ ಗಮನವನ್ನು ತನ್ನತ್ತ ಕೇಂದ್ರೀಕರಿಸಿರುವ ಚಿತ್ರತಂಡ, ಸಿನಿಮಾ ಗ್ಲಿಂಪ್ಸ್ ಮತ್ತು ಹಾಡನ್ನು ಅನಾವರಣಗೊಳಿಸಿದ್ದರು. ಇದೀಗ ಚಿತ್ರ ತಯಾರಕರು ಮತ್ತೆರಡು ಹೊಸ ಪೋಸ್ಟರ್​ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಈ ಎರಡೂ ಹೊಸ ಪೋಸ್ಟರ್​ಗಳು ಚಿತ್ರಕಥೆಯನ್ನು ಪ್ರತಿನಿಧಿಸುತ್ತಿದೆ. ಶುದ್ಧ ಪ್ರೀತಿ ಮತ್ತು ಆ್ಯಕ್ಷನ್​ ಎಲಿಮೆಂಟ್ಸ್ ಅನ್ನು ಈ ಪೋಸ್ಟರ್​ಗಳಲ್ಲಿ ಕಾಣಬಹುದು.

ಇದನ್ನೂ ಓದಿ:ಗದರ್ 2 ವೀಕ್ಷಿಸುವ ಆಸೆ ವ್ಯಕ್ತಪಡಿಸಿದ ರಾಷ್ಟ್ರಪತಿ: ದ್ರೌಪದಿ ಮುರ್ಮು ಅವ್ರಿಗೆ ಚಿತ್ರ ತಂಡದಿಂದ ವಿಶೇಷ ಪ್ರದರ್ಶನ

ಚಿತ್ರ ತಯಾರಕರು ಶೇರ್​ ಮಾಡಿರುವ ಹೊಸ ಪೋಸ್ಟರ್​​ ಒಂದರಲ್ಲಿ ಟಾಲಿವುಡ್​ ಸ್ಟಾರ್​ ಹೀರೋ ರಾಮ್​ ಪೋತಿನೇನಿ ಸಖತ್​ ಪವರ್​ಫುಲ್​ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ. ದಾಡಿ, ಸೀರಿಯಸ್​ ನೋಟದಲ್ಲಿ ಕಾಣಿಸಿಕೊಂಡಿರುವ ರಾಮ್​​ ವಿಲನ್​ಗಳ ವಿರುದ್ಧ ಸೆಣಸಾಟಕ್ಕೆ ನಿಂತಿರುವಂತೆ ತೋರುತ್ತಿದೆ. ಸಿನಿಮಾದಲ್ಲಿ ಇದೊಂದು ಕಂಪ್ಲೀಟ್​ ಆ್ಯಕ್ಷನ್​ ಸೀನ್​ ಆಗಿರಲಿದೆ. ಮತ್ತೊಂದು ಪೋಸ್ಟರ್​ನಲ್ಲಿ ರಾಮ್​ ಶ್ರೀಲೀಲಾರ ಪ್ರೇಮಭರಿತ ನೋಟವಿದೆ. ಚಿತ್ರದಲ್ಲಿ ಇವರಿಬ್ಬರ ಕೆಮಿಸ್ಟ್ರಿ ಸಖತ್ ವರ್ಕ್​ ಔಟ್​ ಆಗಲಿದೆ ಅನ್ನೋದು ಪೋಸ್ಟರ್​ನಲ್ಲಿ ಖಚಿತವಾಗಿದೆ. ಹೊಸ ಪೋಸ್ಟರ್​ನಲ್ಲಿ ಸ್ಕಂದ ಕಪಲ್​ ಬಹಳ ಆಕರ್ಷಕವಾಗಿ ಕಾಣಿಸಿಕೊಂಡಿದ್ದಾರೆ. ರಾಮ್​ ಪೋತಿನೇನಿ ಬಿಳಿ ಪಂಚೆ, ಶರ್ಟ್​​ನಲ್ಲಿ ಕಾಣಿಸಿಕೊಂಡರೆ, ಶ್ರೀಲೀಲಾ ಗೋಲ್ಡ್​ನ್​ ಸ್ಯಾರಿಯಲ್ಲಿ ಕಂಗೊಳಿಸಿದ್ದಾರೆ. ಮುದ್ದಾಗಿ ಕಾಣಿಸಿಕೊಮಂಡಿದ್ದು, ಪೋಸ್ಟರ್​ಗಳು ಮಾಸ್​ ಆ್ಯಂಡ್​ ಫ್ಯಾಮಿಲಿ ಪ್ರೇಕ್ಷಕರಿಗೆ ಇಷ್ಟವಾಗಿದೆ. ಸಿನಿಮಾ ಬಗ್ಗೆ ಕುತೂಹಲ ಹೆಚ್ಚಾಗಿದೆ.

ಇದನ್ನೂ ಓದಿ:'ಭೋಲಾಶಂಕರ್​​' ಉತ್ತಮ ಪ್ರದರ್ಶನ: ಸೌತ್​ನಲ್ಲೀಗ 'ಜೈಲರ್​'ನದ್ದೇ ಹವಾ

ಸಂತೋಷ್​​ ಡಿಕೇಟ್​ ಛಾಯಾಗ್ರಹಣ, ತಮನ್​ ಸಂಗೀತ ಈ ಚಿತ್ರಕ್ಕಿದೆ. ಶ್ರೀನಿವಾಸ್​ ಸಿಲ್ವರ್​ ಸ್ಕ್ರೀನ್​​ ಬ್ಯಾನರ್​ ಅಡಿ ಶ್ರೀನಿವಾಸ್​ ಚಿತ್ತೂರಿ ಅವರು ಸಿನಿಮಾವನ್ನು ನಿರ್ಮಿಸಿದ್ದಾರೆ. ಜೀ ಸ್ಟುಡಿಯೋಸ್​ ಸೌತ್ ಹಾಗೂ ಪವನ್​ ಕುಮಾರ್​ ಅರ್ಪಿಸುತ್ತಿರುವ ಸಿನಿಮಾ ಸೆ. 15 ರಂದು ತೆಲುಗು, ಕನ್ನಡ, ಹಿಂದಿ, ಮಲಯಾಳಂ, ತಮಿಳು ಭಾಷೆಯಲ್ಲಿ ಈ ಸಿನಿಮಾ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ.

ABOUT THE AUTHOR

...view details