ಕರ್ನಾಟಕ

karnataka

By

Published : Feb 20, 2023, 2:54 PM IST

Updated : Feb 20, 2023, 6:30 PM IST

ETV Bharat / entertainment

ಎಸ್‌.ಕೆ.ಭಗವಾನ್ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ಡಾ.ರಾಜ್‌ ಕುಟುಂಬ ಸದಸ್ಯರು

ಕನ್ನಡದ ಖ್ಯಾತ ನಿರ್ದೇಶಕ ಭಗವಾನ್ ನಿಧನ ಹೊಂದಿದ್ದು ಅವರ ಎರಡು ಕಣ್ಣುಗಳು ದೃಷ್ಟಿಹೀನರಿಗೆ ಬೆಳಕಾಗಲಿವೆ.

SK Bhagavan donate his eyes
ಅಂತಿಮ ದರ್ಶನ ಪಡೆದ ರಾಜ್​ ಕುಟುಂಬ

ಖ್ಯಾತ ನಿರ್ದೇಶಕ ಎಸ್.ಕೆ.ಭಗವಾನ್ ನಿಧನ: ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ರಾಜ್​ ಕುಟುಂಬ

ವಯೋಸಹಜ ಖಾಯಿಲೆಯಿಂದ ಕಳೆದ ಎರಡು ತಿಂಗಳಿನಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಪಡೆಯುತ್ತಿದ್ದ ಕನ್ನಡ ಚಿತ್ರರಂಗದ ಹೆಸರಾಂತ ಹಿರಿಯ ನಿರ್ದೇಶಕ ಎಸ್.ಕೆ.ಭಗವಾನ್ ಇಂದು ನಿಧನ ಹೊಂದಿದ್ದಾರೆ. ಹಲವು ಹಿಟ್​ ಸಿನಿಮಾಗಳನ್ನು ನೀಡಿದ ಅವರ ಅಗಲಿಕೆಗೆ ಕನ್ನಡ ಚಿತ್ರರಂಗ ಕಂಬನಿ ಮಿಡಿದಿದೆ. ಬಣ್ಣದ ಬದುಕಿನಲ್ಲಿ ತಮ್ಮದೇ ವಿಶಿಷ್ಟ ಛಾಪು ಮೂಡಿಸಿದ್ದ ಭಗವಾನ್​ ಅವರು ಡಾ. ರಾಜ್​ಕುಮಾರ್ ಅವರಂತೆ ಬಹುತೇಕ ಸಿನಿಮಾಗಳನ್ನು ನಿರ್ದೇಶನ ಮಾಡುವ ಮೂಲಕ ಅವರ ​ಕುಟುಂಬದಲ್ಲಿಯೂ ಒಬ್ಬರಾಗಿದ್ದರು. ದೊಡ್ಮನೆ ಕುಟುಂಬ ಸದಸ್ಯರು ಭಗವಾನ್ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದಿದ್ದಾರೆ.

ಇದನ್ನೂ ಓದಿ:ಡಾ. ರಾಜ್​ಕುಮಾರ್​ಗೆ ಅತಿ ಹೆಚ್ಚು ಸಿನಿಮಾ ನಿರ್ದೇಶನ ಮಾಡಿದ ಭಗವಾನ್​ ಇನ್ನಿಲ್ಲ

ಸಹಕಾರ ನಗರದಲ್ಲಿರುವ ಪುತ್ರಿಯ ಮನೆಯಲ್ಲಿ ಭಗವಾನ್ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ನಟ ರಾಘವೇಂದ್ರ ರಾಜ್​​ಕುಮಾರ್, ಮಕ್ಕಳಾದ ವಿನಯ್ ರಾಜ್​ಕುಮಾರ್, ಯುವ ರಾಜ್‌​ಕುಮಾರ್ ಸೇರಿದಂತೆ ಹಲವರು ಅಂತಿಮ ದರ್ಶನ ಪಡೆದರು. ಭಗವಾನ್ ಅವರಿಗೆ ಮೂವರು ಮಕ್ಕಳಿದ್ದಾರೆ. ಇಬ್ಬರು ಗಂಡು ಮಕ್ಕಳು ಹಾಗು ಒಬ್ಬ ಹೆಣ್ಣು ಮಗಳಿದ್ದಾರೆ.

ಮಧ್ಯಾಹ್ನದ ಬಳಿಕ ಸಹಕಾರ ನಗರದಿಂದ ಭಗವಾನ್ ಅವರ ಪಾರ್ಥಿವ ಶರೀರವನ್ನು ರವೀಂದ್ರ ಕಲಾಕ್ಷೇತ್ರಕ್ಕೆ ತರಲಾಗಿದೆ. 3 ಗಂಟೆಯವರೆಗೆ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಚಾಮರಾಜಪೇಟೆ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ಮಾಡಲು ಕುಟುಂಬ ತೀರ್ಮಾನಿಸಿದೆ.

ರಾಘವೇಂದ್ರ ರಾಜ್​ಕುಮಾರ್

ರಾಘವೇಂದ್ರ ರಾಜ್​ಕುಮಾರ್ ಮಾತನಾಡಿ​​, "ನಮ್ಮ ತಂದೆಯವರ ನಂತರ ಶಿಸ್ತಿನ ವಿಚಾರದಲ್ಲಿ ಭಗವಾನ್ ಅವರನ್ನೇ ನೋಡಿದ್ದೆ. ನಮ್ಮ ತಂದೆಯವರ ಮೂರನೇ ಸಿನಿಮಾಕ್ಕೆ ಭಗವಾನ್ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಬಂದಿದ್ದರು. ಶಿಸ್ತಿನ ವ್ಯಕ್ತಿ. ನಮ್ಮ ಪೋಷಕರಂತೆ ಭಗವಾನ್ ಅವರು ಕೂಡ ಕಣ್ಣುದಾನ ಮಾಡಿದ್ದಾರೆ. ನಾನು ಹಾಡು ಹಾಡುವುದನ್ನು ನಿಲ್ಲಿಸಿದ್ದೆ. ಮತ್ತೆ ಅವರೇ ನನ್ನನ್ನು ಕರೆಸಿ ಹಾಡಿಸಿದ್ದರು" ಎಂದು ಸ್ಮರಿಸಿದರು.

"ಮೊದಲ ಬಾರಿ ವಿದೇಶಕ್ಕೆ (ನೇಪಾಳ) ಕರೆದುಕೊಂಡು ಹೋಗಿ ಸಿನಿಮಾ ಶೂಟ್ ಮಾಡಿಸಿದ್ದರು. 'ಆಪರೇಷನ್ ಡೈಮಂಡ್ ರಾಕೆಟ್' ಸಿನಿಮಾವನ್ನು ಅಲ್ಲಿ ಶೂಟ್ ಮಾಡಲಾಗಿತ್ತು. ಕುಟುಂಬದಲ್ಲಿ ಏನೇ ಆದರೂ ಭಗವಾನ್ ನಮ್ಮ ಕುಟುಂಬದ ಬೆನ್ನಿಗಿರುತ್ತಿದ್ದರು. 'ಮಂತ್ರಾಲಯ ಮಹಾತ್ಮೆ' ಸಿನಿಮಾ ಕಲರ್ ಪ್ರಿಂಟ್​​ನಲ್ಲಿ ಬರಬೇಕು ಅನ್ನೋದು ಅವರ ಆಸೆಯಾಗಿತ್ತು. ಆ ಆಸೆಯನ್ನು ನನ್ನ ಬಳಿ ಕೂಡ ಹೇಳಿಕೊಂಡಿದ್ದಾರೆ. ಅದನ್ನು ನೆರವೇರಿಸುವ ಕೆಲಸವನ್ನು ನಾವು ಮಾಡುತ್ತೇವೆ. ನಮ್ಮ ತಂದೆ ಯಾವುದೇ ವಿಚಾರವನ್ನು ಬರೆಸಬೇಕೆಂದಾಗ ದೊರೈ-ಭಗವಾನ್ ಅವರನ್ನೇ ಕರೆಯುತ್ತಿದ್ದರು. ಅವರ ಬರವಣಿಗೆ ಅಷ್ಟು ಚೆನ್ನಾಗಿತ್ತು" ಎಂದು ಭಗವಾನ್ ಅವರೊಂದಿಗಿನ ಒಡನಾಟ ಹಂಚಿಕೊಂಡರು.

ಇದನ್ನೂ ಓದಿ:ಭಗವಾನ್ ನಿಧನಕ್ಕೆ ಸಂತಾಪ ಸೂಚಿಸಿದ ಮುಖ್ಯಮಂತ್ರಿ ಬೊಮ್ಮಾಯಿ, ಮಾಜಿ ಸಿಎಂ ಸಿದ್ದರಾಮಯ್ಯ

Last Updated : Feb 20, 2023, 6:30 PM IST

ABOUT THE AUTHOR

...view details